Kichcha Sudeep: ಕೇರಳದಲ್ಲಿ ‘ವಿಕ್ರಾಂತ್ ರೋಣ’: ಕೊಚ್ಚಿಗೆ ತೆರಳಿದ ಕಿಚ್ಚ ಸುದೀಪ್ಗೆ ಅಭಿಮಾನಿಗಳ ಆತ್ಮೀಯ ಸ್ವಾಗತ
Vikrant Rona: ಕೊಚ್ಚಿಯಲ್ಲಿ ಕಿಚ್ಚ ಸುದೀಪ್ ಅವರನ್ನು ಪ್ರೀತಿಯಿಂದ ಬರಮಾಡಿಕೊಳ್ಳಲಾಗಿದೆ. ‘ವಿಕ್ರಾಂತ್ ರೋಣ’ ತಂಡ ಇಂದು (ಜೂನ್ 24) ಚೆನ್ನೈಗೂ ತೆರಳಲಿದೆ.
ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾ ತಂಡ ಸಜ್ಜಾಗಿದೆ. ದೇಶದ ಪ್ರಮುಖ ನಗರಗಳಿಗೆ ತೆರಳಿ ಸುದ್ದಿಗೋಷ್ಠಿ ನಡೆಸಲಾಗುತ್ತಿದೆ. ಕಿಚ್ಚ ಸುದೀಪ್ (Kichcha Sudeep), ನಿರ್ದೇಶಕ ಅನೂಪ್ ಭಂಡಾರಿ, ನಿರ್ಮಾಪಕರಾದ ಜಾಕ್ ಮಂಜು, ಅಲಂಕಾರ್ ಪಾಂಡಿಯನ್, ಕಲಾವಿದರಾದ ನಿರೂಪ್ ಭಂಡಾರಿ, ನೀತಾ ಅಶೋಕ್ ಸೇರಿದಂತೆ ಇಡೀ ಚಿತ್ರತಂಡದವರು ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಇಂದು (ಜೂನ್ 24) ಕೊಚ್ಚಿ (Kochi) ಮತ್ತು ಚೆನ್ನೈನಲ್ಲಿ ‘ವಿಕ್ರಾಂತ್ ರೋಣ’ ಸುದ್ದಿಗೋಷ್ಠಿ ನಡೆಯುತ್ತಿದೆ. ಕೊಚ್ಚಿಗೆ ತೆರಳಿದ ಕಿಚ್ಚ ಸುದೀಪ್ ಅವರನ್ನು ಅಲ್ಲಿನ ಅಭಿಮಾನಿಗಳು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ತಿಲಕ ಇಟ್ಟು, ಶಾಲು ಹೊದಿಸಿ, ಹೂ ಗುಚ್ಛ ನೀಡಿ ಅವರನ್ನು ಸ್ವಾಗತಿಸಲಾಗಿದೆ.
ಇದನ್ನೂ ಓದಿ: Kichcha Sudeep: ಕೆಲವೇ ಗಂಟೆಗಳಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಂಡ ‘ವಿಕ್ರಾಂತ್ ರೋಣ’ ಟ್ರೇಲರ್

Daily Devotional: ಪೂಜೆ ಸಮಯದಲ್ಲಿ ಅಗರಬತ್ತಿ ಬಳಕೆಯ ಮಹತ್ವ ತಿಳಿಯಿರಿ

ಸುನಿತಾ ವಿಲಿಯಮ್ಸ್, ವಿಲ್ಮೋರ್ ಲ್ಯಾಂಡಿಂಗ್: ಅದ್ಭುತ ವಿಡಿಯೋ ಇಲ್ಲಿದೆ ನೋಡಿ

Daily Horoscope: ಮಿಥುನ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದೆ

ಪುನೀತ್ ರಾಜ್ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
