ಮೋದಿಯವರಿಗೆ ನಾಗ್ಪುರದಲ್ಲಿ ತರಬೇತಿ ಸಿಕ್ಕರೆ ನಾನು ನೆಹರೂ, ಅಂಬೇಡ್ಕರ್ ಮತ್ತು ಫುಲೆ ಅವರಿಂದ ಪ್ರೇರಿತನಾಗಿದ್ದೇನೆ: ಮಲ್ಲಿಕಾರ್ಜುನ ಖರ್ಗೆ
ಮೋದಿಯವರಿಗೆ ನಾಗ್ಪುರನಲ್ಲಿ ತರಬೇತಿ ಸಿಕ್ಕಿದೆ, ಆದರೆ ನಾನು ಜವಾಹರಲಾಲ್ ನೆಹರೂ ಅವರ ಬಾಷಣಗಳಿಂದ ಪ್ರೇರಿತನಾಗಿ ಡಾ ಅಂಬೇಡ್ಕರ್ ಮತ್ತು ಮಹತ್ಮಾ ಫುಲೆ ಅವರ ತತ್ವ ಸಿದ್ಧಾಂತಗಳ ಮೇಲೆ ರಾಜಕೀಯ ಬದುಕು ರೂಪಿಸಿಕೊಂಡಿದ್ದೇನೆ ಎಂದು ಖರ್ಗೆ ಹೇಳಿದರು.
New Delhi: ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಶುಕ್ರವಾರ ನವದೆಹಲಿಯಲ್ಲಿ ಪತ್ರಿಕಾ ಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡುವಾಗ ತಾವು ಪ್ರಧಾನ ಮಂತ್ರಿ ನರೇಂದ್ರ ಮೋದಿಗಿಂತ (PM Narendra Modi) ಮೊದಲೇ ರಾಜಕೀಯದಲ್ಲಿರುವುದರಿಂದ ಅವರಿಂದ ಕಲಿಯಬೇಕಿರುವುದು ಏನೂ ಇಲ್ಲ ಎಂದರು. 6ನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಕಾಂಗ್ರೆಸ ಭಿತ್ತಿಪತ್ರಗಳನ್ನು ಹಂಚಲು ಶುರುಮಾಡಿ 8ನೇ ತರಗತಿಯಲ್ಲಿದ್ದಾಗ ನಾಯಕರ ಜೊತೆ ಪ್ರಚಾರಕ್ಕಾಗಿ ಹೋಗುತ್ತಿದ್ದೆ, 10 ನೇ ತರಗತಿಯಲ್ಲಿ ಓದುವಾಗ ಬಹಳಷ್ಟು ನಾಯಕರ ಭಾಷಣಗಳನ್ನು ಕೇಳುತ್ತಿದ್ದೆ.
ಮೋದಿಯವರಿಗೆ ನಾಗ್ಪುರನಲ್ಲಿ ತರಬೇತಿ ಸಿಕ್ಕಿದೆ, ಆದರೆ ನಾನು ಜವಾಹರಲಾಲ್ ನೆಹರೂ (Jawaharlal Nehru) ಅವರ ಬಾಷಣಗಳಿಂದ ಪ್ರೇರಿತನಾಗಿ ಡಾ ಅಂಬೇಡ್ಕರ್ ಮತ್ತು ಮಹತ್ಮಾ ಫುಲೆ ಅವರ ತತ್ವ ಸಿದ್ಧಾಂತಗಳ ಮೇಲೆ ರಾಜಕೀಯ ಬದುಕು ರೂಪಿಸಿಕೊಂಡಿದ್ದೇನೆ ಎಂದು ಖರ್ಗೆ ಹೇಳಿದರು.
Latest Videos