ಶಿವಣ್ಣ ಜತೆ ನಟಿಸುವ ಚಾನ್ಸ್​ ಸಿಕ್ಕರೂ ಮುಹೂರ್ತಕ್ಕೆ ಪ್ರಭುದೇವ ಬರಲಿಲ್ಲ; ಕಾರಣ ತಿಳಿಸಿ ಕ್ಷಮೆ ಕೇಳಿದ ನಟ

Prabhu Deva Shivarajkumar Movie: ವಿಡಿಯೋ ಮೂಲಕ ಪ್ರಭುದೇವ ಅವರು ಕ್ಷಮೆ ಕೇಳಿದ್ದಾರೆ. ಶಿವರಾಜ್​ಕುಮಾರ್​ ಜೊತೆ ನಟಿಸುವ ಅವಕಾಶ ಸಿಕ್ಕಿದ್ದರ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

TV9kannada Web Team

| Edited By: Madan Kumar

Jun 23, 2022 | 9:53 AM

ಬಹುವರ್ಷಗಳ ಬಳಿಕ ನಟ ಪ್ರಭದೇವ ಅವರು ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಶಿವರಾಜ್​ಕುಮಾರ್​ (Shivarajkumar) ಜೊತೆ ಅವರಿಗೆ ನಟಿಸುವ ಚಾನ್ಸ್ ಸಿಕ್ಕಿದೆ. ಇವರಿಬ್ಬರ ಕಾಂಬಿನೇಷನ್​ನ ಸಿನಿಮಾಗೆ ಯೋಗರಾಜ್​ ಭಟ್​  (Yogaraj Bhat) ನಿರ್ದೇಶನ ಮಾಡಲಿದ್ದು, ರಾಕ್​ ಲೈನ್​ ವೆಂಕಟೇಶ್​ ನಿರ್ಮಾಣ ಮಾಡುತ್ತಿದ್ದಾರೆ. ಇಂದು (ಜೂನ್​ 23) ಬೆಂಗಳೂರಿನಲ್ಲಿ ಈ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಆದರೆ ಈ ಕಾರ್ಯಕ್ರಮಕ್ಕೆ ಪ್ರಭುದೇವ (Prabhu Deva) ಬಂದಿಲ್ಲ. ಹಾಗಾಗಿ ವಿಡಿಯೋ ಮೂಲಕ ಕ್ಷಮೆ ಕೇಳಿದ್ದಾರೆ. ತಮ್ಮ ಮನೆಯಲ್ಲಿ ಕೂಡ ಇಂದು ಪೂಜೆ ಇರುವುದರಿಂದ ಬರಲು ಸಾಧ್ಯವಾಗಿಲ್ಲ ಎಂದು ಪ್ರಭುದೇವ ಹೇಳಿದ್ದಾರೆ. ‘ಶಿವರಾಜ್​ಕುಮಾರ್​ ಜೊತೆ ನಟಿಸಲು ಅವಕಾಶ ಸಿಕ್ಕಿರುವುದಕ್ಕೆ ತುಂಬ ಖುಷಿ’ ಎಂದು ಅವರು ವಿಡಿಯೋ ಸಂದೇಶ ನೀಡಿದ್ದಾನೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Click on your DTH Provider to Add TV9 Kannada