ಪಾಂಡವಪುರ ಬೇಬಿ ಬೆಟ್ಟದಲ್ಲಿ ಪ್ರತ್ಯಕ್ಷವಾದ ಚಿರತೆಯೊಂದು ನಾಯಿಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಪರಾರಿಯಾಯಿತು
ಬೆಟ್ಟದ ಮೇಲಿರುವ ಶ್ರೀರಾಮಯೋಗೇಶ್ವರ ಮಠದ ಬಳಿಗೆ ಬರುವ ಚಿರತೆಯು ಮೆಟ್ಟಿಲುಗಳ ಮೇಲೆ ಮಲಗಿದ್ದ ನಾಯಿಮರಿಗಳಲ್ಲಿ ಒಂದನ್ನು ಬಾಯಲ್ಲಿ ಕಚ್ಚಿಕೊಂಡು ಮಠದ ಕಂಪೌಂಡ್ ಹಾರಿ ಪರಾರಿಯಾಗುತ್ತದೆ.
Mandya: ಬುಧುವಾರವಷ್ಟೇ ಭದ್ರಾವತಿಯಲ್ಲಿ (Bhadravati) ಚಿರತೆಯೊಂದು ಪ್ರತ್ಯಕ್ಷವಾದ ವಿಡಿಯೋ ವನ್ನು ನಿಮಗೆ ತೋರಿಸಿದ್ದೆವು. ಇವತ್ತು ಅಂದರೆ, ಗುರುವಾರ ಇನ್ನೊಂದು ಚಿರತೆ ಮಂಡ್ಯ ಜಿಲ್ಲೆ ಪಾಂಡವಪುರ (Pandavapura) ತಾಲ್ಲೂಕಿನ ಬೇಬಿ ಬೆಟ್ಟದಲ್ಲಿ (Baby Hill) ಕಾಣಿಸಿಕೊಂಡಿರುವುದು ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ಬೆಟ್ಟದ ಮೇಲಿರುವ ಶ್ರೀರಾಮಯೋಗೇಶ್ವರ ಮಠದ ಬಳಿಗೆ ಬರುವ ಚಿರತೆಯು ಮೆಟ್ಟಿಲುಗಳ ಮೇಲೆ ಮಲಗಿದ್ದ ನಾಯಿಮರಿಗಳಲ್ಲಿ ಒಂದನ್ನು ಬಾಯಲ್ಲಿ ಕಚ್ಚಿಕೊಂಡು ಮಠದ ಕಂಪೌಂಡ್ ಹಾರಿ ಪರಾರಿಯಾಗುತ್ತದೆ. ಸದರಿ ಚಿರತೆ ಪದೇಪದೆ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಅರಣ್ಯಾಧಿಕಾರಿಗಳಿಗೆ ದೂರು ನೀಡಿದರೂ ಅವರಿಂದ ಯಾವುದೇ ಕ್ರಮ ಜರುಗಿಲ್ಲ ಎಂದು ಸುತ್ತಮುತ್ತಲಿನ ಜನ ದೂರುತ್ತಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos