ಮಂಡ್ಯದಲ್ಲಿ ಮಠಕ್ಕೆ ನುಗ್ಗಿ ಬೇಟೆಯಾಡಿದ ಚಿರತೆ! ಭಯಾನಕ ವಿಡಿಯೋ ಇಲ್ಲಿದೆ
ಮಠಕ್ಕೆ ನುಗ್ಗಿದ ಚಿರತೆ ನಾಯಿಮರಿಯನ್ನ ಕಚ್ಚಿಕೊಂಡ ಹೋಗಿದೆ. ಮಠದಲ್ಲಿ ಚಿರತೆ ದಾಳಿ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈಗಾಗಲೇ ಚಿರತೆ ಆರೇಳು ಬಾರಿ ದಾಳಿ ನಡೆಸಿದೆ.
ಮಂಡ್ಯ (Mandya) ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿರುವ ಬೇಬಿ ಬೆಟ್ಟದ ಶ್ರೀರಾಮಯೋಗೇಶ್ವರ ಮಠದಲ್ಲಿ ಚಿರತೆ (Leopard) ಪ್ರತ್ಯಕ್ಷವಾಗಿದೆ. ಮಠಕ್ಕೆ ನುಗ್ಗಿದ ಚಿರತೆ ನಾಯಿಮರಿಯನ್ನ ಕಚ್ಚಿಕೊಂಡ ಹೋಗಿದೆ. ಮಠದಲ್ಲಿ ಚಿರತೆ ದಾಳಿ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈಗಾಗಲೇ ಚಿರತೆ ಆರೇಳು ಬಾರಿ ದಾಳಿ ನಡೆಸಿದ್ದು, ಚಿರತೆ ದಾಳಿ ಬಗ್ಗೆ ಅರಣ್ಯ ಇಲಾಖೆ ತಲೆ ಕೆಡಿಸಿಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಅರಣ್ಯಾಧಿಕಾರಿ ಮಠದಲ್ಲಿ ಚಿರತೆ ಹಿಡಿಯುವ ಬೋನ್ ಇಡದೆ ನಿರ್ಲಕ್ಷ್ಯ ಮೆರೆದಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಬಳಿ ಇರುವುದು ಒಂದೇ ಬೋನ್ ಎಂಬ ಅರಣ್ಯಾಧಿಕಾರಿ ಪುಟ್ಟೇಗೌಡರ ಬೇಜವಬ್ದಾರಿ ಹೇಳಿಕೆಗೆ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.
ಇದನ್ನೂ ಓದಿ: Children Health: ಹುಷಾರಿಲ್ಲದ ಮಕ್ಕಳನ್ನು ಶಾಲೆಗೆ ಕಳಿಸುತ್ತಿರುವ ಪೋಷಕರು: ಆರೋಗ್ಯ ನಿಯಮಗಳ ಉಲ್ಲಂಘನೆ, ಸೋಂಕು ಹರಡುವ ಆತಂಕ
Published on: Jun 23, 2022 08:46 AM
Latest Videos