IKEA ಸ್ಟೋರ್ನಲ್ಲಿ ಸರತಿ ಸಾಲುಗಳು: ಜನಸಂದಣಿಯ ತಮಾಷೆಯ ವಿಡಿಯೋಗಳು ಇಲ್ಲಿವೆ ನೋಡಿ
IKEA ಸ್ಟೋರ್ನಲ್ಲಿ ಸರತಿ ಸಾಲುಗಳನ್ನು ದಾಖಲಿಸುವ ವಿಡಿಯೋಗಳು ಮತ್ತು ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಹರಿದಾಡುತ್ತಿವೆ. ಜನಸಂದಣಿಯನ್ನು ತಮಾಷೆ ಮಾಡುವ ಮೀಮ್ಗಳು ಇಲ್ಲಿವೆ ನೋಡಿ.
ವೈರಲ್ ವಿಡಿಯೋ: ಬೆಂಗಳೂರಿನ ನಾಗಸಂದ್ರ ಪ್ರದೇಶದಲ್ಲಿ ಸ್ವೀಡಿಷ್ ಗೃಹೋಪಯೋಗಿ ಬ್ರಾಂಡ್ ಐಕೆಇಎ (IKEA) ತನ್ನ ಮೊದಲ ಮಳಿಗೆಯನ್ನು ತೆರೆದಾಗಿನಿಂದ ಭಾರಿ ಬೇಡಿಕೆ ವ್ಯಕ್ತವಾಗಿದ್ದು, ಜನಸಾಗರವೇ ಹರಿದುಬರುತ್ತಿದೆ. ಇದರ ಪರಿಣಾಮವಾಗಿ ಉದ್ದವಾದ ಅಂಕುಡೊಂಕಾದ ಸರತಿ ಸಾಲುಗಳು ಕಂಡುಬರುತ್ತವೆ. ನಿವಾಸಿಗಳು ಹೊಸದಾಗಿ ತೆರೆದ ಅಂಗಡಿಯಲ್ಲಿ ಶಾಪಿಂಗ್ ಮಾಡಲು ಆಗಮಿಸಿದ್ದರಿಂದ ವಾರಾಂತ್ಯದಲ್ಲಿ ಜನಸಂದಣಿ ಹೆಚ್ಚಾಯಿತು. ಸದ್ಯ ಅಂಗಡಿಯ ಮುಂದೆ ನಿಂತ ಸರತಿಯ ಸಾಲುಗಳು ಸಾಮಾಜಿಕ ಜಾಲತಾನದಲ್ಲಿ ಸಖತ್ ವೈರಲ್ (Viral) ಆಗುತ್ತಿದೆ.
ವೀಕೆಂಡ್ ಆಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ ಪರಿಣಾಮ ಜನರು 3 ಗಂಟೆಗಳಿಗೂ ಹೆಚ್ಚು ಕಾದು ಶಾಪಿಂಗ್ ಮಾಡುವಂತಾಯಿತು. ಈ ಬಗ್ಗೆ IKEA ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, “ನಾಗಸಂದ್ರದ ಅಂಗಡಿಯಲ್ಲಿ ಪ್ರಸ್ತುತ ಕಾಯುವ ಸಮಯ 3 ಗಂಟೆಗಳು ಆಗಿವೆ. ದಯವಿಟ್ಟು ಅದಕ್ಕೆ ಅನುಗುಣವಾಗಿ ಯೋಜಿಸಿ ಅಥವಾ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಿ” ಎಂದು ಹೇಳಿದೆ.
ಇದನ್ನೂ ಓದಿ: Viral Video: ಬಾಯಲ್ಲಿ ನೀರು ಬರಿಸುವ ಐಸ್ ಕ್ರೀಮ್ ಸ್ಯಾಂಡ್ವಿಚ್! ಇಲ್ಲಿದೆ ನೋಡಿ ವಿಡಿಯೋ
ಟ್ರೋಲ್ ಆದ ಸರತಿ ಸಾಲುಗಳು
IKEAನಲ್ಲಿ ದೀರ್ಘ ಸರತಿ ಸಾಲುಗಳನ್ನು ದಾಖಲಿಸುವ ವಿಡಿಯೋಗಳು ಮತ್ತು ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಜನಸಂದಣಿಯನ್ನು ತಮಾಷೆ ಮಾಡುವ ಮೀಮ್(Memes)ಗಳು ಸಹ ಸಾಕಷ್ಟು ವೈರಲ್ ಆಗುತ್ತಿದೆ.
It’s not MLAs queuing in Maharashtra to form government,It’s not an immigration queue to enter our country,It’s not a vaccination queue to avoid Covid wave,It’s not pilgrims queueing in Tirupati for darshan,It’s the opening of IKEA store in Bangalore! pic.twitter.com/Qqnd0p9n8v
— Harsh Goenka (@hvgoenka) June 26, 2022
RPG ಎಂಟರ್‌ಪ್ರೈಸಸ್‌ನ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಕ್ಲಿಪ್ ಅನ್ನು ಹಂಚಿಕೊಂಡು, “ಇದು ಸರ್ಕಾರ ರಚಿಸಲು ಮಹಾರಾಷ್ಟ್ರದಲ್ಲಿ ಶಾಸಕರು ಸರತಿ ಸಾಲಿನಲ್ಲಿ ನಿಂತಿಲ್ಲ, ಇದು ನಮ್ಮ ದೇಶಕ್ಕೆ ಪ್ರವೇಶಿಸಲು ವಲಸೆ ಸರತಿಯಲ್ಲ, ಇದು ಕೋವಿಡ್ ಅಲೆಯನ್ನು ತಪ್ಪಿಸಲು ವ್ಯಾಕ್ಸಿನೇಷನ್ ಸರತಿಯಲ್ಲ, ಇದು ದರ್ಶನಕ್ಕಾಗಿ ತಿರುಪತಿಯಲ್ಲಿ ಯಾತ್ರಿಕರು ಸರತಿ ಸಾಲಿನಲ್ಲಿ ನಿಂತಿಲ್ಲ, ಬೆಂಗಳೂರಿನಲ್ಲಿ IKEA ಸ್ಟೋರ್‌ನ ಉದ್ಘಾಟನೆ” ಎಂದು ಬರೆದಿದ್ದಾರೆ.
IKEA store opened…
People: pic.twitter.com/GlcNNZuKTv
— Bengaluru Betala (@gururaj_mj) June 26, 2022
IKEA store opens in Bangalore
People: pic.twitter.com/Hx29OE2Ehn
— Hemant (@Sportscasmm) June 26, 2022
Me entering Nagasandra metro station after shopping from IKEA pic.twitter.com/OAyWqVh3px
— JT Meme Store (@kaapi_kudka) June 24, 2022
Places you can go in three hours from Bengaluru.MysoreChikmagalurHassanShivanasamudra FallsNow IKEA Store also#EIIRHumor #Bengaluru #IKEA pic.twitter.com/FK0eLOEOTb
— Pareekh Jain (@pareekhjain) June 26, 2022
ಇದನ್ನೂ ಓದಿ: Viral News: 30 ಸಾವಿರ ವರ್ಷ ಹಳೆಯ ಚರ್ಮ ಮತ್ತು ಕೂದಲಿರುವ ಅಪರೂಪದ ಉಣ್ಣೆಯ ಬೃಹದ್ಗಜ ಪತ್ತೆ
Published On - 7:07 am, Tue, 28 June 22