Viral Video: ಬಾಯಲ್ಲಿ ನೀರು ಬರಿಸುವ ಐಸ್ ಕ್ರೀಮ್ ಸ್ಯಾಂಡ್ವಿಚ್! ಇಲ್ಲಿದೆ ನೋಡಿ ವಿಡಿಯೋ
ಐಸ್ ಕ್ರೀಮ್ ಸ್ಯಾಂಡ್ವಿಚ್ ಮಾಡಲು ಬಿಳಿ ಬ್ರೆಡ್ ಅನ್ನು ಹಾರ್ಟ್ ಆಕಾರದಲ್ಲಿ ಕಟ್ ಮಾಡುತ್ತಾನೆ. ಅದರ ಮೇಲೆ ಬೆಣ್ಣೆ ಮತ್ತು ಜಾಮ್ ಅನ್ನು ಹಾಕುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಬ್ರೆಡ್ ಸ್ಲೈಸ್‌ಗಳ ಮೇಲೆ ಚಾಕೊಲೇಟ್ ಅನ್ನು ಪುಡಿ ಮಾಡಿ ಹಾಕುತ್ತಾನೆ, ನಂತರ ಒಂದು ಚಾಕೋಬಾರ್ ಐಸ್ ಕ್ರೀಮ್ ಅನ್ನು ತೆಗೆದುಕೊಂಡು, ಅದನ್ನು ಅರ್ಧದಷ್ಟು ಕತ್ತರಿಸಿ ಸ್ಯಾಂಡ್ವಿಚ್ನಲ್ಲಿ ಹಾಕುತ್ತಾನೆ
ದಿನನಿತ್ಯದ ಜೀವನದಲ್ಲಿ ಅನೇಕ ರೀತಿಯ ತಿಂಡಿಗಳನ್ನು ನೀವು ನೋಡಿರಬಹುದು ಆದರೆ ಅದು ನಿಮ್ಮ ನಾಲಿಗೆ ಅಥವಾ ಮನಸ್ಸಿಗೆ ರುಚಿಸದಿರಬಹುದು. ನಿಮ್ಮ ರಸ್ತೆಗಳಲ್ಲಿ ಮತ್ತು ನಿಮ್ಮೂರಿನಲ್ಲಿ ಬಿದಿಯಲ್ಲಿ ವಿವಿಧ ರುಚಿ- ರುಚಿಯಾದ ತಿಂಡಿಗಳನ್ನು ತಿಂದಿರಬಹುದು, ಇದರ ಜೊತೆಗೆ ಬೇರೆ ಬೇರೆ ಸ್ಯಾಂಡ್ವಿಚ್ ಗಳನ್ನು ನೀವು ತಿಂದಿರಬಹುದು. ಆದರೆ ಇಂತಹ ಸ್ಯಾಂಡ್ವಿಚ್ ನ್ನು ತಿಂದಿರಲು ಸಾಧ್ಯವಿಲ್ಲ. ಇದಕ್ಕಿಂತ ಮೊದಲು ನೀವು ಇಂತಹ ಬೇರೆ ಬೇರೆ ವಿಡಿಯೋಗಳನ್ನು ನೋಡಿರಬಹುದು, ಐಸ್ ಕ್ರೀಮ್ ಮತ್ತು ಖಿಚಡಿ ಅಥವಾ ಐಸ್ ಕ್ರೀಂನೊಂದಿಗೆ ಮ್ಯಾಗಿಯನ್ನು ಮಿಶ್ರಣ ಮಾಡಿ ಸ್ಯಾಂಡ್ವಿಚ್ ಮಾಡಿರುವುದನ್ನು ನೋಡಿರಬಹುದು. ಇದೀಗ ಇಂತಹದೇ ಒಂದು ವಿಡಿಯೋ ವೈರಲ್ ಆಗಿದೆ. ಐಸ್ ಕ್ರೀಮ್ ನಿಂದ ಹೊಸ ರೀತಿಯ ಸ್ಯಾಂಡ್ವಿಚ್ ತಯಾರು ಮಾಡಬಹುದು ಎಂಬುದನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ.
ಈ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಭಾವನಗರದಿಂದ ದಿಲ್ ವಾಲಾ ಸ್ಯಾಂಡ್‌ವಿಚ್ ಎಂಬ ಒಂದು ಕೈ ಗಾಡಿಯಲ್ಲಿ ವಿಚಿತ್ರವಾದ ಐಸ್ ಕ್ರೀಮ್ ಸ್ಯಾಂಡ್ವಿಚ್ ಮಾಡಲಾಗಿದೆ. ಈ ವಿಡಿಯೋವನ್ನು 578k ವೀಕ್ಷಣೆಯನ್ನು ಪಡೆದಿದೆ. ಗುಜರಾತ್‌ನ ಭಾವನಗರದಲ್ಲಿ ಹಿತೇಶ್ ಸ್ಯಾಂಡ್‌ವಿಚ್ ನಲ್ಲಿ ಬೀದಿ ವ್ಯಾಪಾರಿ ವಿಚಿತ್ರವಾದ ಐಸ್ ಕ್ರೀಮ್ ಸ್ಯಾಂಡ್ವಿಚ್ ಅನ್ನು ತಯಾರಿಸಿದ್ದಾರೆ.
ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಪ್ರಥಮ ವರ್ಷದ ಜನ್ಮದಿನವನ್ನು ಆಚರಣೆ ಮಾಡಿಕೊಂಡ ಮುದ್ದು ಪಾಪಯ್ಯ
ಐಸ್ ಕ್ರೀಮ್ ಸ್ಯಾಂಡ್ವಿಚ್ ಮಾಡಲು ಬಿಳಿ ಬ್ರೆಡ್ ಅನ್ನು ಹಾರ್ಟ್ ಆಕಾರದಲ್ಲಿ ಕಟ್ ಮಾಡುತ್ತಾನೆ. ಅದರ ಮೇಲೆ ಬೆಣ್ಣೆ ಮತ್ತು ಜಾಮ್ ಅನ್ನು ಹಾಕುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಬ್ರೆಡ್ ಸ್ಲೈಸ್‌ಗಳ ಮೇಲೆ ಚಾಕೊಲೇಟ್ ಅನ್ನು ಪುಡಿ ಮಾಡಿ ಹಾಕುತ್ತಾನೆ, ನಂತರ ಒಂದು ಚಾಕೋಬಾರ್ ಐಸ್ ಕ್ರೀಮ್ ಅನ್ನು ತೆಗೆದುಕೊಂಡು, ಅದನ್ನು ಅರ್ಧದಷ್ಟು ಕತ್ತರಿಸಿ ಸ್ಯಾಂಡ್ವಿಚ್ನಲ್ಲಿ ಹಾಕುತ್ತಾನೆ. ಮಾರಾಟಗಾರನು ಸ್ಯಾಂಡ್‌ವಿಚ್ ಅನ್ನು ಎರಡು ಭಾಗಗಳಾಗಿ ಕತ್ತರಿಸಿ ಗ್ರಾಹಕರಿಗೆ ನೀಡುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು.
gujaratis bc ? pic.twitter.com/gKAvnWFOhr
— P (@infallible_23) June 23, 2022
ಈ ವಿಡಿಯೋವನ್ನು ನೋಡಿದ ನೆಟ್ಟಿಗರು, ಇದೊಂದು ಅದ್ಭುತವಾದ ಐಸ್ ಕ್ರೀಮ್ ಸ್ಯಾಂಡ್ವಿಚ್, ಇದನ್ನು ಒಂದು ಬಾರಿಯಾದರು ಸವಿಯಬೇಕು ಎಂದು ಹೇಳಿದ್ದಾರೆ. ಈ ವಿಡಿಯೋದಲ್ಲಿ ಐಸ್ ಕ್ರೀಮ್ ಸ್ಯಾಂಡ್ವಿಚ್ ಮಾಡುವ ವಿಧಾನವನ್ನು ಕೂಡ ಹೇಳಿದ್ದಾರೆ.
Published On - 3:22 pm, Mon, 27 June 22