Viral Video: ಸಾಕು ನಾಯಿಯೊಂದಿಗೆ ‘777 ಚಾರ್ಲಿ’ ವೀಕ್ಷಿಸಿದ ಮಾಜಿ ಸಚಿವ ಜನಾರ್ದನ ರೆಡ್ಡಿ
ಗಣಿ ಉದ್ಯಮಿ ಮತ್ತು ಬಿಜೆಪಿಯ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಬಳ್ಳಾರಿಯ ಮಲ್ಟಿಪ್ಲೆಕ್ಸ್ ಥಿಯೇಟರ್‌ನಲ್ಲಿ ತಮ್ಮ ಸಾಕು ನಾಯಿಯೊಂದಿಗೆ ‘777 ಚಾರ್ಲಿ’ ವೀಕ್ಷಿಸಿದರು. ಸಾಕು ನಾಯಿಯೊಂದಿಗೆ ಸಿನಿಮಾ ನೋಡುತ್ತಿರುವ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
‘777 ಚಾರ್ಲಿ’ ಸಿನಿಮಾಗೆ ಎಲ್ಲೆಡೆಯಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ನಾಯಿ ಮತ್ತು ಮನುಷ್ಯನ ನಡುವಿನ ಸಂಬಂಧದ ಕಥೆಯನ್ನು ಹೊಂದಿರುವ ಈ ಚಿತ್ರ ಎಲ್ಲ ಚಿತ್ರಮಂದಿರಗಳಲ್ಲೂ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ನಟನಾಗಿ, ನಿರ್ಮಾಪಕನಾಗಿ ರಕ್ಷಿತ್ ಶೆಟ್ಟಿ ಅವರಿಗೆ ಈ ಸಿನಿಮಾ ಮೂಲಕ ದೊಡ್ಡ ಗೆಲುವು ಸಿಕ್ಕಿದೆ. ನಿರ್ದೇಶಕ ಕಿರಣ್ ರಾಜ್ ಅವರ ಪ್ರಯತ್ನವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಪ್ರಾಣಿಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ ನಾಯಿಗಳ ಬಗ್ಗೆ ಜನರಿಗೆ ಕಾಳಜಿ ಮೂಡಿಸುವಲ್ಲಿ ಈ ಸಿನಿಮಾ ಯಶಸ್ವಿ ಆಗಿದೆ. ಇದರ ಜೊತೆಗೆ ಅನೇಕ ನಟ- ನಟಿಯರು, ಹೆಚ್ಚಾಗಿ ಸಿಎಂ ಬೊಮ್ಮಾಯಿ ನೋಡಿ ಕಣ್ಣೀರು ಹಾಕಿದ್ದಾರೆ. ಸಚಿವರು, ಶಾಸಕರು ನೋಡಿ ಮೆಚ್ಚು ವ್ಯಕ್ತಪಡಿಸಿದ್ದಾರೆ. ಇದೀಗ ಗಣಿ ಉದ್ಯಮಿ ಮತ್ತು ಬಿಜೆಪಿಯ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಬಳ್ಳಾರಿಯ ಮಲ್ಟಿಪ್ಲೆಕ್ಸ್ ಥಿಯೇಟರ್‌ನಲ್ಲಿ ತಮ್ಮ ಸಾಕು ನಾಯಿಯೊಂದಿಗೆ ‘777 ಚಾರ್ಲಿ’ ವೀಕ್ಷಿಸಿದರು. ಸಾಕು ನಾಯಿಯೊಂದಿಗೆ ಸಿನಿಮಾ ನೋಡುತ್ತಿರುವ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಜನಾರ್ದನ ರೆಡ್ಡಿ ಶ್ವಾನ ಪ್ರಿಯರಾಗಿದ್ದು, ಅವರಿಗೆ ರಾಕಿ ಎಂಬ ಲ್ಯಾಬ್ರಡಾರ್ ಶ್ವಾನ ಇದೆ. ಅವರು ತಮ್ಮ ಕುಟುಂಬ ಸದಸ್ಯರು ಮತ್ತು ಸಾಕುಪ್ರಾಣಿಗಳೊಂದಿಗೆ ‘777 ಚಾರ್ಲಿ’ ಚಲನಚಿತ್ರವನ್ನು ವೀಕ್ಷಿಸಿದರು. ತಮ್ಮ ಸಾಮಾಜಿಕ ಜಾಣಲದಲ್ಲಿ ಈ ವಿಡಿಯೋ ಫೋಟೋವನ್ನು ಫೋಸ್ಟ್ ಮಾಡಿದ್ದಾರೆ. ನಾನು ಬಾಲ್ಯದಿಂದಲೂ ಪ್ರಾಣಿಗಳ ಬಗ್ಗೆ ಒಲವು ಮತ್ತು ಪ್ರೀತಿಯನ್ನು ಬೆಳೆಸಿಕೊಂಡಿದ್ದೇನೆ. ನಾನು ಹಸುಗಳನ್ನು ಪ್ರೀತಿಸುತ್ತೇನೆ, ನಾನು ಬೆಕ್ಕುಗಳೊಂದಿಗೆ ಆಟವಾಡುತ್ತೇನೆ. ನಾನು ಪಕ್ಷಿಗಳು ಮತ್ತು ಪ್ರಾಣಿಗಳನ್ನು ತುಂಬಾ ಇಷ್ಟಪಡುತ್ತೇನೆ ಎಂದು ಫೋಸ್ಟ್ ನಲ್ಲಿ ಬರೆದುಕೊಂದಿದ್ದಾರೆ.
ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಅಮಿತಾಭ್ ಬಚ್ಚನ್ ಸಾಥ್; ಕಿಚ್ಚ ಸುದೀಪ್ ಸಿನಿಮಾಗೆ ‘ಬಿಗ್ ಬಿ’ ಬೆಂಬಲ
“ನನ್ನ ಕಷ್ಟದ ದಿನಗಳ ನಂತರ ಸಂತೋಷ ದಿನಗಳನ್ನು ರಾಕಿ ಜೊತೆಗೆ ಕಳೆದಿದ್ದೇನೆ. ಹಾಗೂ ಇಷ್ಟು ಪ್ರಾಮಾಣಿಕ, ನಂಬಿಕೆಗೆ ಅರ್ಹವಾದ ಮತ್ತು ಪ್ರೀತಿಪಾತ್ರವಾಗಿರುವ ನಾಯಿಗಳನ್ನು ದೇವರು ಏಕೆ ಮೂಕ ಮಾಡಿದ್ದಾನೆ ಎಂದು ಆಶ್ಚರ್ಯವಾಗುತ್ತಿದೆ. ರಕ್ಷಿತ್ ಶೆಟ್ಟಿ ಅವರ ‘777 ಚಾರ್ಲಿ’ ಸಿನಿಮಾ ಮನುಷ್ಯನ ಆತ್ಮೀಯ ಸ್ನೇಹಿತನ ನೈಜ ಸ್ವರೂಪವನ್ನು ಪ್ರದರ್ಶಿಸಿದೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.
View this post on Instagram
Published On - 1:04 pm, Mon, 27 June 22