Trending: 10 ತಿಂಗಳ ಹಿಂದೆ ನದಿಗೆ ಬಿದ್ದ ಐಫೋನ್ ಪತ್ತೆ, ನಂಬಲು ಅ’ಸಾಧ್ಯ’ವಾಗಿರುವುದು ಏನು ಗೊತ್ತಾ?
ಒಬ್ಬ ವ್ಯಕ್ತಿಯು ಹತ್ತು ತಿಂಗಳ ಹಿಂದೆ ಯುನೈಟೆಡ್ ಕಿಂಗ್‌ಡಮ್‌ನ ವೈ ನದಿಯಲ್ಲಿ ದೋಣಿಯಲ್ಲಿ ಹೋಗುವಾಗ ಕಳೆದುಕೊಂಡಿದ್ದ ಐಫೋನ್ ಅನ್ನು ಮರಳಿ ಪಡೆದಿದ್ದಾನೆ. ಈ ಬಗ್ಗೆ ಸ್ಟೋರಿ ಇಲ್ಲಿದೆ ನೋಡಿ.
ಸ್ಮಾರ್ಟ್ಫೋನ್ಗಳನ್ನು ಕಳೆದುಕೊಂಡರೆ ಆಗುವ ಭೀತಿ ಅಷ್ಟಿಷ್ಟಲ್ಲ, ಕೆಲವರಿಗೆ ಮೊಬೈಲ್ ಮರಳಿ ಪಡೆಯುವ ಭಾಗ್ಯ ಇದ್ದರೆ ಇನ್ನು ಕೆಲವರಿಗೆ ಇರುವುದಿಲ್ಲ. ಅದಾಗ್ಯೂ ಒಬ್ಬ ವ್ಯಕ್ತಿಯು ಹತ್ತು ತಿಂಗಳ ಹಿಂದೆ ಯುನೈಟೆಡ್ ಕಿಂಗ್‌ಡಮ್‌ನ ವೈ ನದಿಯಲ್ಲಿ ದೋಣಿಯಲ್ಲಿ ಹೋಗುವಾಗ ಕಳೆದುಕೊಂಡಿದ್ದ ಐಫೋನ್ (iPhone) ಅನ್ನು ಮರಳಿ ಪಡೆದಿದ್ದಾನೆ.
ಇದನ್ನೂ ಓದಿ: Viral Video: ಬಾಹ್ಯಾಕಾಶದಲ್ಲಿ ಒದ್ದೆಯಾದ ಟವೆಲ್ ಹಿಂಡಿದರೆ ಏನಾಗುತ್ತದೆ ಗೊತ್ತಾ? ಇಲ್ಲಿದೆ ನೋಡಿ ವಿಡಿಯೋ
ವ್ಯಕ್ತಿಯೊಬ್ಬರು ಮಿಗ್ಗಿ ಪಿಎಸ್ ಮೂಲಕ ಮೊಬೈಲ್ ಪತ್ತೆಯಾಗಿರುವ ಬಗ್ಗೆ ಪೋಸ್ಟ್ ಮಾಡುತ್ತಾರೆ. “ಈ ಫೋಟೋದಲ್ಲಿರುವ ಜೋಡಿಯನ್ನು ಯಾರಾದರೂ ಗುರುತಿಸುತ್ತಾರೆಯೇ? ನಾನು ನಿನ್ನೆ ದೋಣಿಯಲ್ಲಿ ಹೋಗುವಾಗ ವೈ ನದಿಯಲ್ಲಿ ಈ ಐಫೋನ್ ಅನ್ನು ಕಂಡುಕೊಂಡೆ! ಇದು ಕಳೆದ ವರ್ಷ ಆಗಸ್ಟ್‌ನಿಂದ ಅದು ನೀರಿನಲ್ಲಿದೆ ಎಂದು ಅದರ ದಿನಾಂಕದಿಂದ ತಿಳಿದುಬಂದಿದೆ” ಎಂದಿದ್ದಾರೆ.
“ನಾನು ಮೊಬೈಲ್ ಅನ್ನು ಮನೆಗೆ ತೆಗೆದುಕೊಂಡು ಹೋಗಿ ಏರ್ ಲೈನ್‌ನಿಂದ ಒಣಗಿಸಿ ನಂತರ ಸರಿಯಾಗಿ ಒಣಗಿಸಿದ್ದೇನೆ. ಇಂದು ಬೆಳಿಗ್ಗೆ ಅದನ್ನು ಚಾರ್ಜ್ ಮಾಡಿದ್ದು, ಈಗ ಕಾರ್ಯನಿರ್ವಹಿಸುತ್ತಿದೆ ಎಂದು ನಂಬಲು ಸಾಧ್ಯವಾಗಿಲ್ಲ. ಮಾಲೀಕರನ್ನು ಹುಡುಕಲು ಸಂತೋಷವಾಗುತ್ತದೆ. ದಯವಿಟ್ಟು ಈ ಪೋಸ್ಟ್ ಅನ್ನು ಹಂಚಿಕೊಳ್ಳಲು ಮುಕ್ತವಾಗಿರಿ” ಎಂದಿದ್ದಾರೆ.
ಇದನ್ನೂ ಓದಿ: Viral Video: ಇದು ಇದು ಆಕ್ಚುಲಿ ಚೆನ್ನಾಗಿರೋದು! ಪ್ರೋತ್ಸಾಹ ಅಂದ್ರೆ ಹೀಗಿರಬೇಕು
ಶೀಘ್ರದಲ್ಲೇ, ಜನರು ಪೋಸ್ಟ್ ಅನ್ನು ಹಂಚಿಕೊಳ್ಳಲು ಪ್ರಾರಂಭಿಸಿದ್ದು, ಈ ಪೋಸ್ಟ್ ಮೊಬೈಲ್ನ ನಿಜವಾದ ಮಾಲೀಕನ ಕಣ್ಣಿಗೆ ಕಾಣಿಸಿದೆ. ಅದರಂತೆ ಆತ ಕಳೆದುಕೊಂಡ ಮೊಬೈಲ್ ಅನ್ನು ಮರಳಿ ಪಡೆಯುವಂತಾಗಿದೆ. ಹೊಸದಾಗಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ “ನಾವು ಫೋನ್‌ನ ಮಾಲೀಕರನ್ನು ಕಂಡುಕೊಂಡಿದ್ದೇವೆ! ಅವರು ಎಡಿನ್‌ಬರ್ಗ್‌ನವರು. ಕಳೆದ ವರ್ಷ ಆಗಸ್ಟ್ 13 ಶುಕ್ರವಾರದಂದು ಅವರು ತಮ್ಮ ಸ್ನೇಹಿತರೊಂದಿಗೆ ದೋಣಿಯಲ್ಲಿದ್ದಾಗ ಫೋನ್ ಕಳೆದುಕೊಂಡಿದ್ದರು. ಈ ಪೋಸ್ಟ್ ಅನ್ನು ಹಂಚಿಕೊಂಡ ಎಲ್ಲರಿಗೂ ಧನ್ಯವಾದಗಳು. ಈ ಮೊಬೈಲ್ ಅನ್ನು ಮಾಲೀಕರಿಗೆ ಪೋಸ್ಟ್ ಮಾಡಲಾಗುವುದು” ಎಂದಿದ್ದಾರೆ.
ಇದನ್ನೂ ಓದಿ: Viral Video: ತಾಯಿ ಕಳೆದುಕೊಂಡ ವಿದ್ಯಾರ್ಥಿಗೆ ಅಪ್ಪುಗೆಯ ಸಾಂತ್ವಾನ ಹೇಳಿದ ತರಗತಿ! ಕಣ್ಣೀರು ಬರಿಸುತ್ತದೆ ಈ ವಿಡಿಯೋ
Published On - 5:46 pm, Sun, 26 June 22