AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ತಾಯಿ ಕಳೆದುಕೊಂಡ ವಿದ್ಯಾರ್ಥಿಗೆ ಅಪ್ಪುಗೆಯ ಸಾಂತ್ವಾನ ಹೇಳಿದ ತರಗತಿ! ಕಣ್ಣೀರು ಬರಿಸುತ್ತದೆ ಈ ವಿಡಿಯೋ

ತನ್ನ ತಾಯಿಯನ್ನು ಕಳೆದುಕೊಂಡು ಶಾಲೆಗೆ ಹಿಂದಿರುಗಿದ ವಿದ್ಯಾರ್ಥಿಯನ್ನು ಇಡೀ ತರಗತಿಯೇ ಅಪ್ಪುಗೆಯ ಸಾಂತ್ವಾನ ಹೇಳಿದ ವಿಡಿಯೋ ವೈರಲ್ ಆಗುತ್ತಿದೆ. ವೀಕ್ಷಕರ ಕಣ್ಣು ಒದ್ದೆ ಮಾಡುವ ವಿಡಿಯೋ ಇಲ್ಲಿದೆ ನೋಡಿ.

Viral Video: ತಾಯಿ ಕಳೆದುಕೊಂಡ ವಿದ್ಯಾರ್ಥಿಗೆ ಅಪ್ಪುಗೆಯ ಸಾಂತ್ವಾನ ಹೇಳಿದ ತರಗತಿ! ಕಣ್ಣೀರು ಬರಿಸುತ್ತದೆ ಈ ವಿಡಿಯೋ
ತಾಯಿ ಕಳೆದುಕೊಂಡ ವಿದ್ಯಾರ್ಥಿಗೆ ಅಪ್ಪುಗೆಯ ಸಾಂತ್ವಾನ
TV9 Web
| Edited By: Rakesh Nayak Manchi|

Updated on:Jun 26, 2022 | 4:30 PM

Share

ಪೋಷಕರನ್ನು ಕಳೆದುಕೊಂಡವರ ದುಃಖ ಅವರಿಗೆ ಮಾತ್ರ ಗೊತ್ತು. ವಿದ್ಯಾರ್ಥಿಯೊಬ್ಬ ತನ್ನ ತಾಯಿಯನ್ನು ಕಳೆದುಕೊಂಡು ಹಲವು ದಿನಗಳ ನಂತರ ದುಃಖತಪ್ತನಾಗಿ ಶಾಲೆಗೆ ಬಂದಾಗ ಸಹಪಾಠಿಯನ್ನು ನೋಡಿ ಇಡೀ ತರಗತಿಯೇ ಅಪ್ಪಿಕೊಂಡ ದೃಶ್ಯಾವಳಿ ಕಣ್ಣೀರು ಬರಿಸುವಂತಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Viral Video) ಆಗುತ್ತಿದೆ.

ಇದನ್ನೂ ಓದಿ: Viral Video: ಇದು ಇದು ಆಕ್ಚುಲಿ ಚೆನ್ನಾಗಿರೋದು! ಪ್ರೋತ್ಸಾಹ ಅಂದ್ರೆ ಹೀಗಿರಬೇಕು

goodnews movemen ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಣ್ಣೀರಿನ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ”ತಾಯಿ ಹಠಾತ್ತನೆ ನಿಧನರಾದ ನಂತರ ಕೆಲವು ದಿನಗಳವರೆಗೆ ಶಾಲೆಯಿಂದ ಹೊರಗುಳಿದಿದ್ದರು. ಅವನು ಹಿಂದಿರುಗಿದ ನಂತರ, ಅವನ ಇಡೀ ವರ್ಗವು ಬೆಂಬಲ ಮತ್ತು ಒಗ್ಗಟ್ಟಿನ ಪ್ರೀತಿಯ ಪ್ರದರ್ಶನದಲ್ಲಿ ಅವನನ್ನು ಅಪ್ಪಿಕೊಂಡಿತು” ಎಂದು ಶೀರ್ಷಿಕೆ ಬರೆಯಲಾಗಿದೆ.

ಇದನ್ನೂ ಓದಿ: Viral Video: ವಿಮಾನದಲ್ಲಿ ಎಸಿ ಸ್ಥಗಿತಗೊಂಡು ಪ್ರಯಾಕರು ಸುಸ್ತೋ ಸುಸ್ತು! ವಿಮಾನ ಬಹಿಷ್ಕಾರದ ಎಚ್ಚರಿಕೆ ನೀಡಿದ ಪ್ರಯಾಣಿಕರು

ವಿಡಿಯೋದಲ್ಲಿ ಕಾಣುವಂತೆ, ವ್ಯಕ್ತಿಯೊಬ್ಬರು ವಿದ್ಯಾರ್ಥಿಗಳ ಮುಂದೆ ತಾಯಿ ಕಳೆದುಕೊಂಡ ವಿದ್ಯಾರ್ಥಿಯನ್ನು ನಿಲ್ಲಿಸಿ ಮಾತನಾಡಿಸುತ್ತಿದ್ದಾಗ ತರಗತಿಯಲ್ಲಿದ್ದ ಅಷ್ಟೂ ವಿದ್ಯಾರ್ಥಿಗಳು ಬಂದು ಆತನನ್ನು ಅಪ್ಪಿಕೊಳ್ಳುತ್ತಾರೆ. ಈ ವೇಳೆ ವಿದ್ಯಾರ್ಥಿಯ ಹೆಗಲ ಮೇಲೆ ಕೈಯಿಟ್ಟು ಮಾತನಾಡುತ್ತಿದ್ದ ವ್ಯಕ್ತಿ ಹೊರಗೆ ಹೋಗಿ ಅಳುತ್ತಾನೆ ಮತ್ತು ವಿದ್ಯಾರ್ಥಿಗಳು ಕೂಡ ಅಳುವುದನ್ನು ಕಾಣಬಹುದು.

ಕರುಳು ಚುರ್ ಎನ್ನುವಂತೆ ಮಾಡುವ ಈ ವಿಡಿಯೋ ವೈರಲ್ ಪಡೆದು 20 ಗಂಟೆಗಳಲ್ಲಿ 1.2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, 96 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದೆ. ವಿಡಿಯೋ ವೀಕ್ಷಣೆ ಮಾಡಿದ ನೆಟ್ಟಿಗರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು, “ಜಗತ್ತಿಗೆ ಹೆಚ್ಚಿನ ದಯೆ ಬೇಕು” ಎಂದು ಬಳಕೆದಾರರೊಬ್ಬರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಮಳೆಗಾಳದಲ್ಲಿ ಹೇಗೆ ನಡೆದುಕೊಂಡು ಹೋಗಬೇಕು ಗೊತ್ತಾ? ಈ ವಿಡಿಯೋ ನೋಡಿ

Published On - 4:30 pm, Sun, 26 June 22

Follow Us
50 ಗಿಡ ನೆಡುವ ಶಿಕ್ಷೆ:ಚಿಕ್ಕೋಡಿ ಕೋರ್ಟ್‌ನಿಂದ ಪರಿಸರ ಸ್ನೇಹಿ ತೀರ್ಪು
50 ಗಿಡ ನೆಡುವ ಶಿಕ್ಷೆ:ಚಿಕ್ಕೋಡಿ ಕೋರ್ಟ್‌ನಿಂದ ಪರಿಸರ ಸ್ನೇಹಿ ತೀರ್ಪು
‘ಹಳ್ಳಿ ಪವರ್ ರಿಲೋಡೆಡ್’ ರಿಯಾಲಿಟಿ ಶೋ ಸೆಟ್ ಹೇಗಿದೆ ನೋಡಿ..
‘ಹಳ್ಳಿ ಪವರ್ ರಿಲೋಡೆಡ್’ ರಿಯಾಲಿಟಿ ಶೋ ಸೆಟ್ ಹೇಗಿದೆ ನೋಡಿ..
ಬಾಗಿನ ಅರ್ಪಣೆ ವಿಳಂಬಕ್ಕೆ ಸರ್ಕಾರದ ವಿರುದ್ಧ ರೈತರ ಆಕ್ರೋಶ
ಬಾಗಿನ ಅರ್ಪಣೆ ವಿಳಂಬಕ್ಕೆ ಸರ್ಕಾರದ ವಿರುದ್ಧ ರೈತರ ಆಕ್ರೋಶ
ಸರ್ಕಾರದ ಮೇಲಿನ ಸಿಟ್ಟು ಬೈಕ್ ಸವಾರನ ಮೇಲೆ ತೋರಿಸಿದ ಬಿಜೆಪಿ ಮಾಜಿ ಶಾಸಕ
ಸರ್ಕಾರದ ಮೇಲಿನ ಸಿಟ್ಟು ಬೈಕ್ ಸವಾರನ ಮೇಲೆ ತೋರಿಸಿದ ಬಿಜೆಪಿ ಮಾಜಿ ಶಾಸಕ
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!