Viral Video: ಮಹಿಳೆಯ ಬ್ಯಾಗ್​ ತಪಾಸಣೆ ವೇಳೆ ಗಲಾಟೆ; ಯುವಕನ ಕಾಲಿಗೆ ಶೂಟ್ ಮಾಡಿದ ಪೊಲೀಸ್

ಡೇರಾ ಬಸ್ಸಿಯ ಹಬೆತ್‌ಪುರ ಗ್ರಾಮದ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಮಹಿಳೆಯೊಬ್ಬರ ಬ್ಯಾಗನ್ನು ತಪಾಸಣೆ ಮಾಡಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ. ಆಕೆಯ ಸಹಾಯಕ್ಕೆ ಬಂದ ಯುವಕನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.

Viral Video: ಮಹಿಳೆಯ ಬ್ಯಾಗ್​ ತಪಾಸಣೆ ವೇಳೆ ಗಲಾಟೆ; ಯುವಕನ ಕಾಲಿಗೆ ಶೂಟ್ ಮಾಡಿದ ಪೊಲೀಸ್
Image Credit source: News18
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jun 28, 2022 | 12:53 PM

ಪಂಜಾಬ್: ಪಂಜಾಬ್‌ನಲ್ಲಿ (Punjab) ಆಘಾತಕಾರಿ ಘಟನೆಯೊಂದು ನಡೆದಿದ್ದು, ಡೇರಾ ಬಸ್ಸಿಯ ಹಬೆತ್‌ಪುರ್ ಗ್ರಾಮದಲ್ಲಿ ನಡೆದ ಗಲಾಟೆಯ ನಂತರ ಪೊಲೀಸ್ ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಿದ್ದಾರೆ. ಈ ಘಟನೆಯನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಈ ವೇಳೆ ಆ ವ್ಯಕ್ತಿ ಇತರ ಇಬ್ಬರೊಂದಿಗೆ ಸೇರಿ ಪೊಲೀಸರ ಮೇಲೆ ದಾಳಿ ಮಾಡುವುದನ್ನು ಕಾಣಬಹುದು. ಈ ವೇಳೆ ಪೊಲೀಸರು ಮತ್ತು ಆ ವ್ಯಕ್ತಿಯ ನಡುವೆ ಜಗಳ ತಾರಕಕ್ಕೇರಿದ್ದು, ಪೊಲೀಸರು ಆತನ ತೊಡೆಗೆ ಗುಂಡು ಹಾರಿಸಿದ್ದಾರೆ. ಈ ವಿಡಿಯೋ ಆತಂಕ ಮೂಡಿಸಿದೆ.

ಭಾನುವಾರ ಸಂಜೆ ಡೇರಾ ಬಸ್ಸಿಯ ಹಬೆತ್‌ಪುರ ಗ್ರಾಮದ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಮಹಿಳೆಯೊಬ್ಬರ ಬ್ಯಾಗನ್ನು ತಪಾಸಣೆ ಮಾಡಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ. ಆಕೆಯ ಸಹಾಯಕ್ಕೆ ಬಂದ ಯುವಕನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಗಾಯಗೊಂಡಿದ್ದ ಆತನನ್ನು ತಕ್ಷಣವೇ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಅಲ್ಲಿಂದ ಆತನನ್ನು ಚಂಡೀಗಢದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಿದರು.

ನಾವು ಹೆಬತ್‌ಪುರ ರಸ್ತೆಯಲ್ಲಿ ನಿಂತಿದ್ದಾಗ ಪೊಲೀಸರು ಆಗಮಿಸಿ ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು. ಅವರು ನನ್ನ ಹೆಂಡತಿಯ ಬ್ಯಾಗ್ ಪರಿಶೀಲಿಸಲು ಬಯಸಿದ್ದರು. ಆಗ ಅವರು ಕುಡಿದು ನನ್ನ ಸಹೋದರನ ಮೇಲೆ ಗುಂಡು ಹಾರಿಸಿದರು ಎಂದು ಸಂತ್ರಸ್ತ ಮಹಿಳೆಯ ಸಹೋದರ ಅಕ್ಷಯ್ ಎಎನ್‌ಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಜೋರ್ಡಾನ್​​ನ ಬಂದರಿನಲ್ಲಿ ವಿಷಾನಿಲ ಸೋರಿಕೆ; 12 ಜನ ಸಾವು, 250ಕ್ಕೂ ಹೆಚ್ಚು ಮಂದಿಗೆ ಗಾಯ

ಗುಂಡೇಟು ತಿಂದಿರುವ ಹಿತೇಶ್, ಅವರ ಹೆಂಡತಿ ಮತ್ತು ಸೋದರ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಪೊಲೀಸರು ಮದ್ಯ ಸೇವಿಸಿದ್ದರು ಮತ್ತು ಕೋಪದ ಭರದಲ್ಲಿ ಗುಂಡು ಹಾರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ ಪಂಜಾಬ್ ರಾಜ್ಯದಲ್ಲಿ ಎಎಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪೊಲೀಸರು ಆ ವ್ಯಕ್ತಿಯನ್ನು ಹಿಡಿಯಬಹುದಿತ್ತು, ಆದರೆ, ಅವರು ಅವನ ಮೇಲೆ ಗುಂಡು ಹಾರಿಸಿದ್ದು ತಪ್ಪು ಎಂದು ಹೇಳಿದ್ದಾರೆ.

ದೇರಾಬಸ್ಸಿಯಲ್ಲಿ, ಪಂಜಾಬ್ ಪೊಲೀಸರು ಮಹಿಳೆಯೊಬ್ಬರನ್ನು ಅಮಾನುಷವಾಗಿ ನಡೆಸಿಕೊಂಡರು. ಆಕೆಯ ಪತಿ ಅದಕ್ಕೆ ವಿರೋಧಿಸಿದಾಗ ಗುಂಡು ಹಾರಿಸಿದರು. ಅರವಿಂದ್ ಕೇಜ್ರಿವಾಲ್ ಅಧಿಕಾರಕ್ಕೆ ಬಂದ ನಂತರ ಪಂಜಾಬ್ ಪೊಲೀಸರು ಪಂಜಾಬ್ ನಾಗರಿಕರನ್ನು ಮನುಷ್ಯರಂತೆ ನಡೆಸಿಕೊಳ್ಳುವುದನ್ನು ನಿಲ್ಲಿಸಿದ್ದಾರೆ. ಜನರನ್ನು ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಹಲವರು ಟ್ವೀಟ್ ಮಾಡಿದ್ದಾರೆ.