Viral Photo: ಮಿಜೋರಾಂನಲ್ಲಿ ಜನ ಹೇಗೆ ಟ್ರಾಫಿಕ್ ರೂಲ್ಸ್ ಅನುಸರಿಸುತ್ತಾರೆ ಗೊತ್ತಾ?; ಆನಂದ್ ಮಹೀಂದ್ರಾ ಹಂಚಿಕೊಂಡ ಫೋಟೋ ವೈರಲ್
ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಈ ಫೋಟೋಗೆ ಈಗಾಗಲೇ 42,000ಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.
ಮಿಜೋರಾಂ: ನಗರದಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಳ್ಳುವುದು ಸರ್ವೇಸಾಮಾನ್ಯ. ಗದ್ದಲ ಮತ್ತು ನಿರಂತರ ಹಾರ್ನ್‌ಗಳ ಮಧ್ಯೆ ಜನರು ಮುಂದೆ ಬರಲು ಪರದಾಡುವುದನ್ನು ನೋಡಬಹುದು. ಆದರೆ, ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ (Anand Mahindra) ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಈ ಫೋಟೋ ಜನರು ಟ್ರಾಫಿಕ್ ಜಾಮ್‌ನಲ್ಲಿ (Traffic Jam) ಹೇಗೆ ವರ್ತಿಸಬೇಕು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ. ಈ ಫೋಟೋವನ್ನು ಆನಂದ್ ಮಹೀಂದ್ರಾ ಹಂಚಿಕೊಂಡಿದ್ದು, ಈಗಾಗಲೇ 42,000ಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.
ಟ್ವಿಟ್ಟರ್ನ ತಮ್ಮ ಇತ್ತೀಚಿನ ಪೋಸ್ಟ್‌ನಲ್ಲಿ ಆನಂದ್ ಮಹೀಂದ್ರಾ ಮಿಜೋರಾಂ ರಾಜ್ಯದ ಜನರು ಟ್ರಾಫಿಕ್ ನಿಯಮಗಳನ್ನು ಅನುಸರಿಸಿದ್ದಕ್ಕಾಗಿ ಶ್ಲಾಘಿಸಿದ್ದಾರೆ. ಈ ವಿಡಿಯೋ ನಮಗೆಲ್ಲರಿಗೂ ಉತ್ತಮವಾದ ಸಂದೇಶವನ್ನು ನೀಡುತ್ತದೆ. ಮಿಜೋರಾಂ ರಾಜ್ಯದ ಜನರನ್ನು ಹೊಗಳಿರುವ ಆನಂದ್ ಮಹೀಂದ್ರಾ ಬಹಳ ಚೆನ್ನಾಗಿ ಟ್ರಾಫಿಕ್ ರೂಲ್ಗಳನ್ನು ಫಾಲೋ ಮಾಡುತ್ತಿರುವ ಜನರ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.
What a terrific pic; Not even one vehicle straying over the road marker. Inspirational, with a strong message: it’s up to US to improve the quality of our lives. Play by the rules… A big shoutout to Mizoram. ?????? https://t.co/kVu4AbEYq8
— anand mahindra (@anandmahindra) March 1, 2022
ಎಂತಹ ಸೊಗಸಾದ ಚಿತ್ರ; ರಸ್ತೆ ಮಾರ್ಕರ್ ಮೇಲೆ ಒಂದು ವಾಹನವೂ ಅಡ್ಡಾಡುತ್ತಿಲ್ಲ. ಇದು ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. ಅಷ್ಟೇ ಅಲ್ಲದೆ ಉತ್ತಮ ಸಂದೇಶವನ್ನು ಕೂಡ ಹೊಂದಿದೆ. ನಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸುವುದು ನಮಗೇ ಬಿಟ್ಟ ವಿಚಾರವಾಗಿದೆ. ನಿಯಮಗಳನ್ನು ಪಾಲಿಸಿ… ಈ ವಿಚಾರದಲ್ಲಿ ಮಿಜೋರಾಂಗೆ ದೊಡ್ಡ ಚಪ್ಪಾಳೆ ಎಂದು ಅವರು ಸಂದೀಪ್ ಅಹ್ಲಾವತ್ ಎಂಬ ವ್ಯಕ್ತಿಯ ಟ್ವೀಟ್ ಅನ್ನು ಆನಂದ್ ಮಹೀಂದ್ರಾ ರೀಟ್ವೀಟ್ ಮಾಡಿದ್ದಾರೆ.
ಮೂಲ ಟ್ವೀಟ್ ಪ್ರಕಾರ ಈ ಫೋಟೋ ಮಿಜೋರಾಂನದ್ದಾಗಿದೆ. ರಸ್ತೆಯಲ್ಲಿ ಟ್ರಾಫಿಕ್ ಎಷ್ಟೇ ಇದ್ದರೂ ವಾಹನಗಳು ಸಾಲಿನಲ್ಲಿ ಕ್ರಮಬದ್ಧವಾಗಿ ಕಾಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಎದುರು ಬದಿಯಿಂದ ಯಾವುದೇ ವಾಹನಗಳು ಬರದಿದ್ದರೂ ಒಂದು ವಾಹನವೂ ರಸ್ತೆಯ ಮತ್ತೊಂದು ಭಾಗದಲ್ಲಿ ಸಂಚರಿಸುವುದಿಲ್ಲ.
I have seen this kind of discipline only ?in Mizoram. There are no fancy cars, no big egos, no road rage, no honking and no तू जानता नहीं है मेरा बाप कौन है…. no one is in a tearing hurry…there is calm and serenity all around… pic.twitter.com/ZAkXNNcES4
— Sandeep Ahlawat (@SandyAhlawat89) March 1, 2022
ಮಿಜೋರಾಂ ಮತ್ತು ಮೇಘಾಲಯದ ಟ್ರಾಫಿಕ್ ಪೋಲೀಸರು ತುಂಬಾ ಕಟ್ಟುನಿಟ್ಟಿನಿಂದ ಕೂಡಿದ್ದಾರೆ. ಅವರು ಶಾಸಕರನ್ನೂ ಕೂಡ ಟ್ರಾಫಿಕ್ ನಿಯಮ ಉಲ್ಲಂಘಿಸಲು ಬಿಡುವುದಿಲ್ಲ. ಈ ರೀತಿಯ ಕಟ್ಟುನಿಟ್ಟಿನ ಟ್ರಾಫಿಕ್ ನಿಯಮಗಳನ್ನು ಇತರೆ ನಗರಗಳಲ್ಲಿಯೂ ಅದರಲ್ಲೂ ವಿಶೇಷವಾಗಿ ಮುಂಬೈನಲ್ಲಿ ಜಾರಿಗೊಳಿಸಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Viral Photo: ಹಸಿರು ತುಂಬಿದ ತಮಿಳುನಾಡಿನ ರಸ್ತೆಯ ಫೋಟೋವನ್ನು ರೀ ಟ್ವೀಟ್ ಮಾಡಿದ ಆನಂದ್ ಮಹೀಂದ್ರಾ
Viral News: ಆ ಒಂದು ಫೋಟೋದಿಂದ ಅದೃಷ್ಟವೇ ಬದಲಾಯ್ತು; ಕೇರಳದ ಕೂಲಿ ಕಾರ್ಮಿಕ ಈಗ ಸೂಪರ್ ಮಾಡೆಲ್!
Published On - 5:49 pm, Wed, 2 March 22