AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಗರ್ಭಿಣಿಯಾಗಿದ್ದಾಗಲೇ ಮತ್ತೆ ಗರ್ಭ ಧರಿಸಿದ ಮಹಿಳೆ; ಹೇಗಿದು ಅಂತೀರಾ?

ಒಂದು ಮಗುವಿನ ಗರ್ಭ ಧರಿಸಿದ 1 ವಾರದ ನಂತರ ಮತ್ತೊಂದು ಮಗುವಿನ ಗರ್ಭ ಧರಿಸಿರುವ ಆ ಮಹಿಳೆ ಎರಡೂ ಮಕ್ಕಳಿಗೆ ಒಟ್ಟಿಗೇ ಜನ್ಮ ನೀಡಿದ್ದಾಳೆ. ಈ ಅಪರೂಪದ ಪ್ರಕ್ರಿಯೆಯನ್ನು ಸೂಪರ್ಫೆಟೇಶನ್ ಎಂದು ಕರೆಯಲಾಗುತ್ತದೆ.

Viral News: ಗರ್ಭಿಣಿಯಾಗಿದ್ದಾಗಲೇ ಮತ್ತೆ ಗರ್ಭ ಧರಿಸಿದ ಮಹಿಳೆ; ಹೇಗಿದು ಅಂತೀರಾ?
ಒಂದೇ ದಿನ ಜನಿಸಿದ ಮಕ್ಕಳು
TV9 Web
| Edited By: |

Updated on: Mar 02, 2022 | 8:41 PM

Share

ನಮ್ಮ ಸುತ್ತಮುತ್ತಲೂ ಅದೆಷ್ಟೋ ಅಚ್ಚರಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಒಮ್ಮೆ ಗರ್ಭಿಣಿಯಾದ ಮಹಿಳೆ (Pregnant Woman) ಮಗುವನ್ನು ಹೆರುವ ಮೊದಲೇ ಮತ್ತೊಮ್ಮೆ ಗರ್ಭ ಧರಿಸುವ ವಿಚಿತ್ರ ನಡೆಯುತ್ತದೆ ಎಂದು ನಿಮಗೆ ಗೊತ್ತಾ? ಅದು ಸಾಧ್ಯವಾ? ಖಂಡಿತವಾಗಿಯೂ ಇದು ಸಾಧ್ಯ. ಏಕೆಂದರೆ ಈ ರೀತಿಯ ಒಂದು ಘಟನೆ ಕೆಲವು ದಿನಗಳ ಹಿಂದೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಕೇವಲ ಐದು ದಿನಗಳ ಅಂತರದಲ್ಲಿ ಎರಡು ಬಾರಿ ಗರ್ಭ ಧರಿಸಿದ ಮಹಿಳೆ ಇದೀಗ ಇಬ್ಬರು ಹೆಣ್ಣುಮಕ್ಕಳನ್ನು ಹೆತ್ತಿದ್ದಾಳೆ.

ಕ್ಯಾಲಿಫೋರ್ನಿಯಾದ ಸ್ಯಾನ್ ಪ್ಯಾಬ್ಲೋದ ಒಡಾಲಿಸ್ ಮತ್ತು ಆಂಟೋನಿಯೊ ಮಾರ್ಟಿನೆಜ್ ದಂಪತಿ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. ಒಡಾಲಿಸ್ ಅವರಿಗೆ ಈ ಹಿಂದೆ ಗರ್ಭಪಾತ ಉಂಟಾಗಿತ್ತು. ಆದರೆ, ನವೆಂಬರ್ 2020ರಲ್ಲಿ ಮತ್ತೆ ಗರ್ಭ ಧರಿಸಿದ್ದರು.  25 ವರ್ಷ ವಯಸ್ಸಿನ ಆ ಮಹಿಳೆಗೆ ತನ್ನ ಮೊದಲ ಸ್ಕ್ಯಾನ್‌ನಲ್ಲಿ ತನ್ನ ಹೊಟ್ಟೆಯಲ್ಲಿ ಎರಡು ಶಿಶುಗಳು ಇರುವುದು ಗೊತ್ತಾಯಿತು. ಆದರೆ, ಆಕೆ ಒಂದು ವಾರದ ಅಂತರದಲ್ಲಿ ಎರಡು ಬಾರಿ ಗರ್ಭ ಧರಿಸಿದ್ದಳು. ಆ ಎರಡು ಮಕ್ಕಳ ನಡುವೆ 1 ವಾರದ ಅಂತರವಿತ್ತು.

ಇಬ್ಬರು ಮಕ್ಕಳೊಂದಿಗೆ ಪೋಷಕರು

ಇದೊಂದು ಬಹಳ ಅಪರೂಪದ ಘಟನೆ ಎಂದು ವೈದ್ಯರು ಕೂಡ ಹೇಳಿದ್ದರು. ಒಂದು ಮಗುವಿನ ಗರ್ಭ ಧರಿಸಿದ 1 ವಾರದ ನಂತರ ಮತ್ತೊಂದು ಮಗುವಿನ ಗರ್ಭ ಧರಿಸಿರುವ ಆ ಮಹಿಳೆ ಎರಡೂ ಮಕ್ಕಳಿಗೆ ಒಟ್ಟಿಗೇ ಜನ್ಮ ನೀಡಿದ್ದಾಳೆ. ಈ ಅಪರೂಪದ ಪ್ರಕ್ರಿಯೆಯನ್ನು ಸೂಪರ್ಫೆಟೇಶನ್ ಎಂದು ಕರೆಯಲಾಗುತ್ತದೆ. ಇದೀಗ ಹುಟ್ಟಿರುವ ಎರಡೂ ಮಕ್ಕಳು ಒಂದೇ ರೀತಿ ಇವೆ. ಆದರೆ, ಒಂದು ಮಗುವಿಗೆ 1 ವಾರ ಕಡಿಮೆ ವಯಸ್ಸಾಗಿದೆ. ಕಳೆದ ವರ್ಷ ಆಗಸ್ಟ್ 10ರಂದು ಎರಡೂ ಶಿಶುಗಳು ಜನಿಸಿವೆ. ಇವರಿಬ್ಬರನ್ನು ಅವಳಿ ಮಕ್ಕಳು ಎಂದು ಕರೆಯಲು ಸಾಧ್ಯವಾಗದಿದ್ದರೂ ಅವಳಿ ಮಕ್ಕಳ ಗುಂಪಿಗೆ ಸೇರಿವೆ.

ಇದನ್ನೂ ಓದಿ: Viral News: ಗಾಳಿಯ ರಭಸಕ್ಕೆ ತಲೆ ಮೇಲಿಂದ ಹಾರಿ ಹೋಯ್ತು ವಿಗ್; ನಕ್ಕು ನಕ್ಕು ಸುಸ್ತಾದ ನೆಟ್ಟಿಗರು

Viral News: ವಧು-ವರರ ಜೊತೆ ಫೋಟೋ ತೆಗೆಸಿಕೊಳ್ಳಲು ಹೋಗಿ ಮದುವೆ ಮಂಟಪದಿಂದ ಹಣ, ಒಡವೆ ಕದ್ದ ಕಳ್ಳ!

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್