Viral News: ಗಾಳಿಯ ರಭಸಕ್ಕೆ ತಲೆ ಮೇಲಿಂದ ಹಾರಿ ಹೋಯ್ತು ವಿಗ್; ನಕ್ಕು ನಕ್ಕು ಸುಸ್ತಾದ ನೆಟ್ಟಿಗರು

ಚಂಡಮಾರುತದ ಗಾಳಿಯಲ್ಲಿ ವ್ಯಕ್ತಿಯೊಬ್ಬರ ವಿಗ್ ಹಾರಿ ಹೋಗಿರುವ ಘಟನೆಯ ವಿಡಿಯೋ ಭಾರೀ ವೈರಲ್ ಆಗಿದೆ. ಈ ವಿಡಿಯೋ ನೋಡಿದವರು ನಕ್ಕು ನಕ್ಕು ಸುಸ್ತಾಗಿದ್ದಾರೆ.

Viral News: ಗಾಳಿಯ ರಭಸಕ್ಕೆ ತಲೆ ಮೇಲಿಂದ ಹಾರಿ ಹೋಯ್ತು ವಿಗ್; ನಕ್ಕು ನಕ್ಕು ಸುಸ್ತಾದ ನೆಟ್ಟಿಗರು
ಗಾಳಿಯ ರಭಸಕ್ಕೆ ಹಾರಿ ಹೋದ ವಿಗ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Feb 19, 2022 | 7:28 PM

ಕೆಲವೊಮ್ಮೆ ನಮಗರಿವಿಲ್ಲದಂತೆಯೇ ನಮ್ಮ ಸುತ್ತಲೂ ನಾವು ತೀವ್ರವಾಗಿ ಮುಜುಗರಕ್ಕೀಡಾಗುವ ಘಟನೆಗಳು ನಡೆದುಬಿಡುತ್ತವೆ. ಅದೇ ರೀತಿ ಯೂನಿಸ್ ಚಂಡಮಾರುತದಿಂದ (Storm Eunice) ಬಲವಾದ ಗಾಳಿ ಬೀಸಿದ ಪರಿಣಾಮ ಬೋಳು ತಲೆಯ ಮನುಷ್ಯನೊಬ್ಬನ ವಿಗ್ ಹಾರಿ ಹೋಗಿರುವ ಘಟನೆ ನಡೆದಿದೆ. ಗಾಳಿಯಲ್ಲಿ ಹಾರಿ ಹೋದ ತನ್ನ ವಿಗ್ ಹಿಡಿಯಲು ಆ ವ್ಯಕ್ತಿ ಕಿಲೋಮೀಟರ್​ಗಟ್ಟಲೆ ದೂರ ಓಡಿದ್ದಾರೆ. ಆ ವ್ಯಕ್ತಿ ಶುಕ್ರವಾರ ಬೆಳಿಗ್ಗೆ ಸೈಮನ್ ವಿಲ್ಕ್ಸ್ ಕಾರ್ ಪಾರ್ಕ್‌ನಲ್ಲಿ ನಿಂತಿದ್ದಾಗ ಡೆವೊನ್‌ನ ಬಾರ್ನ್‌ಸ್ಟಾಪಲ್‌ನಲ್ಲಿ ಭಾರೀ ಗಾಳಿ ಬೀಸಿದೆ. ಇದರಿಂದ ಅವರ ವಿಗ್ ತಲೆಯಿಂದ ಹಾರಿಹೋಗಿದೆ.

ಚಂಡಮಾರುತದ ಗಾಳಿಯಲ್ಲಿ ವ್ಯಕ್ತಿಯೊಬ್ಬರ ವಿಗ್ ಹಾರಿ ಹೋಗಿರುವ ಘಟನೆಯ ವಿಡಿಯೋ ಭಾರೀ ವೈರಲ್ ಆಗಿದೆ. ಈ ವಿಡಿಯೋ ನೋಡಿದವರು ನಕ್ಕು ನಕ್ಕು ಸುಸ್ತಾಗಿದ್ದಾರೆ. ಸೈಮ್ ಎಂಬಾತನೇ ಈ ರೀತಿಯ ಮುಜುಗರಕ್ಕೀಡಾದ ವ್ಯಕ್ತಿ. ತನ್ನ ವಿಗ್ ಹಾರಿ ಹೋಗುತ್ತಿದ್ದಂತೆ ಸೈಮನ್ ಆಘಾತದಿಂದ ಸುತ್ತಲೂ ನೋಡಿದ್ದಾರೆ. ನಂತರ ಗಾಳಿಯಲ್ಲಿ ಹಾರುತ್ತಿರುವ ತಮ್ಮ ವಿಗ್ ಅನ್ನು ಕಂಡು ಅದರ ಬೆನ್ನತ್ತಿ ಓಡಿದ್ದಾರೆ. ಇದನ್ನು ಅವರ ಸ್ನೇಹಿತರೊಬ್ಬರು ವಿಡಿಯೋ ಮಾಡಿಕೊಂಡು, ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿದ್ದಾರೆ.

ಇಂಗ್ಲೆಂಡ್​ಗೆ ಈ ದಶಕದಲ್ಲೇ ಅತ್ಯಂತ ಕೆಟ್ಟ ಚಂಡಮಾರುತಗಳು ಅಪ್ಪಳಿಸುತ್ತಿರುವುದರಿಂದ ಲಕ್ಷಾಂತರ ಬ್ರಿಟಿಷರು ಮನೆಯಿಂದ ಹೊರಬರಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಮೆಟ್ ಆಫೀಸ್ ಪ್ರಕಾರ, ಐಲ್ ಆಫ್ ವೈಟ್‌ನಲ್ಲಿ ಗಂಟೆಗೆ 122 ವೇಗದಲ್ಲಿ ಗಾಳಿ ಬೀಸಿದ್ದು, ದಾಖಲೆ ಸೃಷ್ಟಿಸಿದೆ. ಚಂಡಮಾರುತದಿಂದ ಈಗಾಗಲೇ ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಶಾಲೆಗಳು ಮತ್ತು ವ್ಯಾಪಾರ ಸಂಸ್ಥೆಗಳನ್ನು ಮುಚ್ಚಲಾಗಿದೆ. ಇಲ್ಲಿನ 1,10,000ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ.

ಯೂನಿಸ್ ಚಂಡಮಾರುತದಿಂದಾಗಿ ಹೀಥ್ರೂ ವಿಮಾನ ನಿಲ್ದಾಣದಲ್ಲಿ ವಿಮಾನಗಳು ಲ್ಯಾಂಡಿಂಗ್ ಅನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಲಾಗಿದೆ. ಹೀಥ್ರೂ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವಿಫಲ ಯತ್ನ ಮಾಡುವ ಮೊದಲು ವಿಮಾನವೊಂದು ಅಕ್ಕಪಕ್ಕಕ್ಕೆ ತೂಗಾಡುತ್ತಿರುವ ವಿಡಿಯೋ ಈ ಹಿಂದೆ ವೈರಲ್ ಆಗಿತ್ತು.

ಇದನ್ನೂ ಓದಿ: Viral News: 3 ವರ್ಷ ಸಿಗರೇಟ್ ಸೇದುವುದು ಬಿಟ್ಟಿದ್ದಕ್ಕೆ ಲಕ್ಷಾಧಿಪತಿಯಾದ; ಹೇಗೆ ಅಂತೀರಾ?

Viral News: ಮದುವೆಯಾಗಿ 11 ವರ್ಷ ಕಾದರೂ ಮೊದಲ ರಾತ್ರಿಗೆ ಸಿಗಲೇ ಇಲ್ಲ ಮುಹೂರ್ತ; ಆಮೇಲೇನಾಯ್ತು?

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ