ಬೋಳುತಲೆ ಸಮಸ್ಯೆ ಹೊಂದಿರುವ ಪುರುಷರಲ್ಲಿ ಕೊರೊನಾ ವೈರಾಣು ಹೆಚ್ಚು ಪ್ರಭಾವ ಬೀರಬಲ್ಲದು!
ಕೊವಿಡ್‌ನಿಂದಾಗಿ ಆಸ್ಪತ್ರೆಗೆ ದಾಖಲಾದ ಪುರುಷರಲ್ಲಿ, ಶೇಕಡಾ 79 ರಷ್ಟು ಜನರು ಆಂಡ್ರೊಜೆನೆಟಿಕ್ ಅಲೋಪೆಸಿಯಾವನ್ನು ಹೊಂದಿದ್ದಾರೆ ಎಂದು ಫಲಿತಾಂಶಗಳು ಸೂಚಿಸಿದೆ.
ನ್ಯೂಯಾರ್ಕ್: ಸಾಮಾನ್ಯ ರೀತಿಯ ಹಾರ್ಮೋನ್ ಸೂಕ್ಷ್ಮ ಕೂದಲು ಉದುರುವಿಕೆ ಸಮಸ್ಯೆ ಹೊಂದಿರುವ ಪುರುಷರು ಕೊವಿಡ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಆಂಡ್ರೊಜೆನೆಟಿಕ್ ಅಲೋಪೆಸಿಯಾವು ಶಾಶ್ವತವಾಗಿ ಕೂದಲು ಉದುರುವ ಸ್ಥಿತಿಯಾಗಿದ್ದು, ಬೋಳು ತಲೆ ಉಂಟಾಗುತ್ತದೆ. ಯುಎಸ್ ಮೂಲದ ಜೈವಿಕ ತಂತ್ರಜ್ಞಾನ ಕಂಪನಿ ಅಪ್ಲೈಡ್ ಬಯಾಲಜಿಯ ಸಂಶೋಧಕರ ನೇತೃತ್ವದಲ್ಲಿ ನಡೆಸಿದ ಅಧ್ಯಯನವು ಆಂಡ್ರೊಜೆನ್ ರಿಸೆಪ್ಟರ್ (ಎಆರ್) ಜೀನ್ ಮತ್ತು ಕೊವಿಡ್ -19 ನಡುವಿನ ಸಂಬಂಧವನ್ನು ಕಂಡುಹಿಡಿದಿದ್ದಾರೆ.
ಕೊವಿಡ್‌ನಿಂದಾಗಿ ಆಸ್ಪತ್ರೆಗೆ ದಾಖಲಾದ ಪುರುಷರಲ್ಲಿ, ಶೇಕಡಾ 79 ರಷ್ಟು ಜನರು ಆಂಡ್ರೊಜೆನೆಟಿಕ್ ಅಲೋಪೆಸಿಯಾವನ್ನು ಹೊಂದಿದ್ದಾರೆ ಎಂದು ಫಲಿತಾಂಶಗಳು ಸೂಚಿಸಿದೆ. ಆಂಡ್ರೊಜೆನೆಟಿಕ್ ಅಲೋಪೆಸಿಯಾವನ್ನು ಎಆರ್ ಜೀನ್‌ನಲ್ಲಿನ ವ್ಯತ್ಯಾಸಗಳಿಂದ ನಿಯಂತ್ರಿಸಲಾಗುತ್ತದೆ ಎಂದು ತಂಡವು ಕಂಡುಹಿಡಿದಿದೆ. ಇದು ಆಂಡ್ರೋಜೆನ್‌ಗಳಿಗೆ (ಟೆಸ್ಟೋಸ್ಟೆರಾನ್ ನಂತಹ ಹಾರ್ಮೋನುಗಳು) ದೇಹವು ಎಷ್ಟು ಸೂಕ್ಷ್ಮವಾಗಿರುತ್ತದೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ.
ಇದರ ಜೊತೆಯಲ್ಲಿ, ಕೊವಿಡ್-19 ಸೋಂಕಿಗೆ ಪ್ರಮುಖವಾದ ಟಿಎಂಪಿಆರ್ಸ್ಎಸ್ 2 (TMPRSS 2) ಎಂಬ ಕಿಣ್ವವು ಆಂಡ್ರೊಜೆನ್ ಸೂಕ್ಷ್ಮವಾಗಿರುತ್ತದೆ ಮತ್ತು ಎಆರ್ ಜೀನ್‌ನಲ್ಲಿನ ವ್ಯತ್ಯಾಸಗಳಿಂದ ಪ್ರಭಾವಿತವಾಗಿರುತ್ತದೆ. ಅಧ್ಯಯನಕ್ಕಾಗಿ, ತಂಡವು ಕೋವಿಡ್‌ನೊಂದಿಗೆ ಆಸ್ಪತ್ರೆಗೆ ದಾಖಲಾದ 65 ಪುರುಷರ ಆನುವಂಶಿಕ ವಿಶ್ಲೇಷಣೆಯನ್ನು ನಡೆಸಿತ್ತು.
ಎಆರ್ ಜೀನ್‌ನಲ್ಲಿ ಕೆಲವು ರಚನಾತ್ಮಕ ವ್ಯತ್ಯಾಸಗಳನ್ನು ಹೊಂದಿರುವ ಪುರುಷರು ಇತರರಿಗಿಂತ ತೀವ್ರವಾದ ಕೊವಿಡ್ ಸೋಂಕು ಅಭಿವೃದ್ಧಿಪಡಿಸುವ ಸಾಧ್ಯತೆಯಿದೆ ಎಂದು ಅವರು ಕಂಡುಕೊಂಡಿದ್ದಾರೆ. ಮೇ 6-7 ರಂದು ಆನ್‌ಲೈನ್‌ನಲ್ಲಿ ನಡೆದ ಎರಡು ದಿನಗಳ ಇಎಡಿವಿಯ 2021 ಸ್ಪ್ರಿಂಗ್ ಸಿಂಪೋಸಿಯಂನಲ್ಲಿ ಈ ಸಂಶೋಧನೆಗಳನ್ನು ಪ್ರಸ್ತುತಪಡಿಸಲಾಗಿದೆ.
ಇದನ್ನೂ ಓದಿ: ಕೊರೊನಾ ಹೆಸರಲ್ಲಿ ಖಾಸಗಿ ಆಸ್ಪತ್ರೆಯಿಂದ ಲಕ್ಷ ಲಕ್ಷ ಲೂಟಿ; ಬಿಲ್ ಫೊಟೊ ವೈರಲ್
ಕೊವಿಡ್ ವಾರ್ಡ್ನಲ್ಲಿ ಹಾಡು, ನೃತ್ಯ; ಮಾನಸಿಕ ಖಿನ್ನತೆ ಕಡಿಮೆಯಾಗಿ ಸಂತಸದ ವಾತಾವರಣ ನಿರ್ಮಾಣ: ವಿಡಿಯೋ ನೋಡಿ
Published On - 8:54 pm, Sun, 9 May 21