ಕೊರೊನಾ ಹೆಸರಲ್ಲಿ ಖಾಸಗಿ ಆಸ್ಪತ್ರೆಯಿಂದ ಲಕ್ಷ ಲಕ್ಷ ಲೂಟಿ; ಬಿಲ್ ಫೊಟೊ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ರೋಗಿಯ ಬಿಲ್ ವೈರಲ್ ಆಗಿದ್ದು, ಸರ್ಕಾರ, ಆರೋಗ್ಯ ಸಚಿವರಿಗೆ ಜನರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.

ಕೊರೊನಾ ಹೆಸರಲ್ಲಿ ಖಾಸಗಿ ಆಸ್ಪತ್ರೆಯಿಂದ ಲಕ್ಷ ಲಕ್ಷ ಲೂಟಿ; ಬಿಲ್ ಫೊಟೊ ವೈರಲ್
ಲಕ್ಷ್ಮೀ ಆಸ್ಪತ್ರೆ
Follow us
TV9 Web
| Updated By: ganapathi bhat

Updated on:Aug 23, 2021 | 12:43 PM

ಕೋಲಾರ: ಕೊರೊನಾ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳಿಂದ ಲಕ್ಷ ಲಕ್ಷ ಲೂಟಿ ಮಾಡುತ್ತಿದ್ದ ಪ್ರಕರಣ ಬಯಲಾಗಿದೆ. ಕೋಲಾರದ ಲಕ್ಷ್ಮೀ ಆಸ್ಪತ್ರೆಯಲ್ಲಿ 11 ದಿನಕ್ಕೆ 3.9 ಲಕ್ಷ ಬಿಲ್ ಮಾಡಿರುವುದು ಬೆಳಕಿಗೆ ಬಂದಿದೆ. ಅರವಿಂದ್ ಎಂಬ ಸೋಂಕಿತನ ಹೆಸರಲ್ಲಿ ಲಕ್ಷಗಟ್ಟಲೆ ಬಿಲ್ ಮಾಡಲಾಗಿದ್ದು, 3 ಲಕ್ಷ 90 ಸಾವಿರ ಬಿಲ್ ಮಾಡಿರುವ ರಸೀದಿ ಎಲ್ಲೆಡೆ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ರೋಗಿಯ ಬಿಲ್ ವೈರಲ್ ಆಗಿದ್ದು, ಸರ್ಕಾರ, ಆರೋಗ್ಯ ಸಚಿವರಿಗೆ ಜನರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.

Lakshmi Hospital Bill

ಆಸ್ಪತ್ರೆ ಬಿಲ್

HRCT/CT ಸ್ಕ್ಯಾನ್​ಗೆ ರಾಜ್ಯ ಸರ್ಕಾರ ದರ ನಿಗದಿಪಡಿಸಿದೆ. ಬಿಪಿಎಲ್ ಕಾರ್ಡ್​ದಾರರಿಗೆ HRCT/CT ಸ್ಕ್ಯಾನ್​ಗೆ ₹1500 ಹಾಗೂ ಬಿಪಿಎಲ್ ಕಾರ್ಡ್ ಇಲ್ಲದಿದ್ದರೆ HRCT/CT ಸ್ಕ್ಯಾನ್​ಗೆ ₹2500 ದರ ನಿಗದಿಪಡಿಸಲಾಗಿದೆ. ಜೊತೆಗೆ, ಚಿತಾಗಾರಗಳಲ್ಲಿ ಸಮರ್ಪಕ ನಿರ್ವಹಣೆಗೆ ಅಧಿಕಾರಿಗಳ ನೇಮಕ ಮಾಡಲಾಗಿದೆ. ಚಿತಾಗಾರ ಸಮನ್ವಯ ಅಧಿಕಾರಿಗಳನ್ನ ಸರ್ಕಾರ ನೇಮಿಸಿದೆ. ಬಿಬಿಎಂಪಿ ವ್ಯಾಪ್ತಿಯ 16 ಚಿತಾಗಾರಗಳಿಗೆ ಅಧಿಕಾರಿಗಳ ನೇಮಕ ಮಾಡಲಾಗಿದೆ. 2 ಶಿಫ್ಟ್​​ನಲ್ಲಿ ಕಾರ್ಯನಿರ್ವಹಿಸಲು 32 ಅಧಿಕಾರಿಗಳ ನೇಮಕ ಮಾಡಲಾಗಿದೆ.

ದೇಶದ ಉದ್ದಗಲಕ್ಕೂ ನಕಲಿ ರೆಮಿಡಿಸಿವಿರ್ ಜಾಲ ನಕಲಿ ರೆಮಿಡಿಸಿವಿರ್ ತಯಾರಿಸಿ, ಮಾರುತ್ತಿದ್ದ ಉತ್ತರಾಖಂಡ್ ರಾಜ್ಯದ ಐವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಗುಜರಾತ್, ದೆಹಲಿ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಲ್ಲೂ ಈಗ ನಕಲಿ ರೆಮಿಡಿಸಿವಿರ್ ಮಾರಾಟ ಗ್ಯಾಂಗ್ ಕಾರ್ಯಾಚರಣೆ ಮಾಡ್ತಿವೆ. ಕೆಲ ಗ್ಯಾಂಗ್ ಈಗಾಗಲೇ ಪೊಲೀಸರ ಬಲೆಗೆ ಬಿದ್ದಿವೆ. ಕೊರೊನಾ ರೋಗಿಗಳು ಹಾಗೂ ಅವರ ಸಂಬಂಧಿಕರು ಕಾಳಸಂತೆಯಲ್ಲಿ ರೆಮಿಡಿಸಿವಿರ್ ಖರೀದಿಸುವಾಗ ಎಚ್ಚರಿಕೆಯಿಂದ ಇರಬೇಕು. ನಕಲಿ ರೆಮಿಡಿಸಿವಿರ್ ಇಂಜೆಕ್ಷನ್ ನಿಮಗೆ ದುಬಾರಿ ಬೆಲೆಗೆ ಮಾರಾಟ ಮಾಡುವ ಖದೀಮರಿದ್ದಾರೆ. ಅಂಥವರ ಬಗ್ಗೆ ಎಚ್ಚರವಿರಲಿ. ಕೊರೊನಾ ರೋಗಿಗಳ ಸಂಬಂಧಿಕರು, ರೆಮಿಡಿಸಿವಿರ್ ಇಂಜೆಕ್ಷನ್ಅನ್ನು ಸರ್ಕಾರದಿಂದ ಮಾತ್ರ ಖರೀದಿಸಿ. ಸರ್ಕಾರವೇ ರೆಮಿಡಿಸಿವಿರ್ ಪೂರೈಕೆಗೆ ನೋಡಲ್ ಆಫೀಸರ್ ಗಳನ್ನು ನೇಮಿಸಿದೆ. ಇಂಥ ನೋಡಲ್ ಆಫೀಸರ್​ಗಳ ಮೂಲಕ ಮಾತ್ರ ರೆಮಿಡಿಸಿವಿರ್ ಪಡೆದು ಕೊರೊನಾ ರೋಗಿಗಳಿಗೆ ನೀಡಿ. ರೆಮಿಡಿಸಿವಿರ್ ಅನ್ನು ರೋಗಿಗಳಿಗೆ ನೀಡಬೇಕೆಂಬ ಆತುರದಲ್ಲಿ ನಕಲಿ ರೆಮಿಡಿಸಿವಿರ್ ಜಾಲದ ಬಲೆಗೆ ಬೀಳಬೇಡಿ. ಕೊರೊನಾ ಚಿಕಿತ್ಸೆ ಸಂದರ್ಭ ಜಾಗರೂಕರಾಗಿ, ವ್ಯವಸ್ಥೆಯ ಅನುಸಾರ ಔಷಧೋಪಚಾರ ಪಡೆಯಿರಿ.

ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಗೋಮೂತ್ರ ಸೇವಿಸಿ, ಕೊರೊನಾದಿಂದ ದೂರವಿರಿ: ಉತ್ತರ ಪ್ರದೇಶದ ಬಿಜೆಪಿ ಶಾಸಕ

ಅಜ್ಜಿಯನ್ನು ಕಳೆದುಕೊಂಡರೂ ಕೊರೊನಾ ರೋಗಿಗಳ ನಡುವೆ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ ಈ ನರ್ಸ್ ರಾಖಿ ಜಾನ್!

Published On - 7:26 pm, Sun, 9 May 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್