AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಲಿ ಹೊಟ್ಟೆಯಲ್ಲಿ ಗೋಮೂತ್ರ ಸೇವಿಸಿ, ಕೊರೊನಾದಿಂದ ದೂರವಿರಿ: ಉತ್ತರ ಪ್ರದೇಶದ ಬಿಜೆಪಿ ಶಾಸಕ

BJP MLA Surendra Singh: ವಿಡಿಯೊದಲ್ಲಿ  ಪತಂಜಲಿ  ಗೋಮೂತ್ರದ ಬಾಟಲಿ ಹಿಡಿದುಕೊಂಡಿರುವ ಸುರೇಂದ್ರ ಸಿಂಗ್ ಅದರಿಂದ 50 ಮಿಲ್ಲಿ  ಲೀಟರ್ ಗೋಮೂತ್ರವನ್ನು ತಣ್ಣೀರಲ್ಲಿ  ಬೆರೆಸಿ  ಪ್ರತಿದಿನ ಬೆಳಗ್ಗೆ ಕುಡಿದರೆ  ಕೊರೊನಾವೈರಸ್ ವಿರುದ್ಧ ನೈಸರ್ಗಿಕ ಪ್ರತಿರೋಧಶಕ್ತಿ ಸಿಗುತ್ತದೆ ಎಂದಿದ್ದಾರೆ.

ಖಾಲಿ ಹೊಟ್ಟೆಯಲ್ಲಿ ಗೋಮೂತ್ರ ಸೇವಿಸಿ, ಕೊರೊನಾದಿಂದ ದೂರವಿರಿ: ಉತ್ತರ ಪ್ರದೇಶದ ಬಿಜೆಪಿ ಶಾಸಕ
ಸುರೇಂದ್ರ ಸಿಂಗ್
ರಶ್ಮಿ ಕಲ್ಲಕಟ್ಟ
|

Updated on:May 09, 2021 | 5:20 PM

Share

ಬೈರಿಯಾ (ಉತ್ತರ ಪ್ರದೇಶ): ಪ್ರತಿದಿನ ಬೆಳಗ್ಗೆ  ಖಾಲಿ ಹೊಟ್ಟೆಯಲ್ಲಿ  ಗೋಮೂತ್ರ ಸೇವಿಸಿದರೆ ಕೊರೊನಾವೈರಸ್ ನಿಂದ ರಕ್ಷಣೆ ಪಡೆಯಬಹುದು ಎಂದು ಬಿಜೆಪಿ  ಶಾಸಕ ಸುರೇಂದ್ರ  ಸಿಂಗ್ ಹೇಳಿದ್ದಾರೆ. ಉತ್ತರ ಪ್ರದೇಶದ ಬೈರಿಯಾ ವಿಧಾನಸಭಾ ಕ್ಷೇತ್ರದ  ಶಾಸಕ ಸುರೇಂದ್ರ ಸಿಂಗ್ ಗೋಮೂತ್ರವನ್ನು ಹೇಗೆ ಸೇವಿಸಬೇಕು ಎಂಬ ವಿಡಿಯೊವೊಂದನ್ನು  ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದಾರೆ.

ವಿಡಿಯೊದಲ್ಲಿ  ಪತಂಜಲಿ  ಗೋಮೂತ್ರದ ಬಾಟಲಿ ಹಿಡಿದುಕೊಂಡಿರುವ ಸಿಂಗ್ ಅದರಿಂದ 50 ಮಿಲ್ಲಿ  ಲೀಟರ್ ಗೋಮೂತ್ರವನ್ನು ತಣ್ಣೀರಲ್ಲಿ  ಬೆರೆಸಿ  ಪ್ರತಿದಿನ ಬೆಳಗ್ಗೆ ಕುಡಿದರೆ  ಕೊರೊನಾವೈರಸ್ ವಿರುದ್ಧ ನೈಸರ್ಗಿಕ ಪ್ರತಿರೋಧಶಕ್ತಿ ಸಿಗುತ್ತದೆ ಎಂದಿದ್ದಾರೆ.

ಭಾರತದಲ್ಲಿ  ಕೊವಿಡ್ ಎರಡನೇ ಅಲೆ ಇರುವಾಗಲೂ ನಾನು ಪ್ರತಿದಿನ ಸರಿ ಸುಮಾರು 18 ಗಂಟೆಗಳ ಕಾಲ ಜನರೊಂದಿಗೆ ಹೊರಗೆ ಇರುತ್ತೇನೆ. ಆದರೂ ನಾನು ಆರೋಗ್ಯವಂತನಾಗಿದ್ದೇನೆ ಎಂದಿದ್ದಾರೆ.

ಅನುಮಾನಿಸಬೇಡಿ, ವಿಜ್ಞಾನಿಗಳು ನಂಬುತ್ತಾರೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ಕೊವಿಡ್ -19 ನಂತಹ ಮಾರಣಾಂತಿಕ ವೈರಸ್ ಅನ್ನು ತೊಡೆದುಹಾಕಲು ಗೋಮೂತ್ರಕ್ಕೆ ಮಾತ್ರ ಶಕ್ತಿ ಇದೆ ಎಂಬ ತೀರ್ಮಾನಕ್ಕೆ ಬಂದಿದ್ದೇನೆ ಎಂದು ಸಿಂಗ್ ವಿಡಿಯೊದಲ್ಲಿ ಹೇಳಿದ್ದಾರೆ.

ಎಲ್ಲಾ ವೈಜ್ಞಾನಿಕ ಜ್ಞಾನವು ಕೊವಿಡ್ ಮುಂದೆ ವಿಫಲವಾಗಿದೆ ಎಂದು ಹೇಳಿದ ಸಿಂಗ್, “ಇಷ್ಟು ವೈಜ್ಞಾನಿಕ ಪ್ರಗತಿಯ ನಂತರವೂ ಲಕ್ಷಗಟ್ಟಲೆ ಜನ ಸಾಯುತ್ತಿದ್ದಾರೆ. ಆದ್ದರಿಂದ ಈ ಪರಿಸ್ಥಿತಿಯಲ್ಲಿ ಜನರು ದೇವರನ್ನು ನೆನಪು ಮಾಡಿಕೊಳ್ಳಬೇಕು ಮತ್ತು ಹಳೆಯ ತಲೆಮಾರುಗಳು ಅಂತಹ ವಿಷಯಗಳಿಗೆ ಚಿಕಿತ್ಸೆ ನೀಡಲು ಏನು  ಮಾಡುತ್ತಿದ್ದರು ಎಂಬುದನ್ನು ನೋಡಬೇಕು ಎಂದಿದ್ದಾರೆ.

ಇದನ್ನೂ ಓದಿ: ಗೋಶಾಲೆಯಲ್ಲಿಯೇ ಕೊವಿಡ್​ ಐಸೋಲೇಶನ್ ಕೇಂದ್ರ ಸ್ಥಾಪನೆ; ಗೋಮೂತ್ರ, ಹಾಲು, ತುಪ್ಪದ ಔಷಧಗಳಿಂದಲೇ ಚಿಕಿತ್ಸೆ

(Uttar Pradesh BJP MLA Surendra Singh claimed consuming gaumutra will guarantee protection from coronavirus)

Published On - 5:10 pm, Sun, 9 May 21

ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಸ್ಪಂದನಾ ಸೇವ್ ಆಗಿದ್ದು ಸರಿಯಲ್ಲ; ನೇರವಾಗಿ ಆರೋಪಿಸಿದ ಮಾಳು
ಸ್ಪಂದನಾ ಸೇವ್ ಆಗಿದ್ದು ಸರಿಯಲ್ಲ; ನೇರವಾಗಿ ಆರೋಪಿಸಿದ ಮಾಳು
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!