Viral Video: ಬೆಂಗಾಳಿ ಆವೃತ್ತಿಯಲ್ಲಿ ಶ್ರೀವಲ್ಲಿ ಹಾಡು: ಉಷಾ ಉತ್ತಪ್​ ಕಂಠಕ್ಕೆ ಅಭಿಮಾನಿಗಳು ಫಿದಾ

ಖ್ಯಾತ ಗಾಯಕಿ ಉಶಾ ಉತ್ತಪ್​ ಶ್ರೀವಲ್ಲಿ ಹಾಡಿನ ಬೆಂಗಾಳಿ ಆವೃತ್ತಿಯನ್ನು ಹಾಡಿದ್ದಾರೆ. ಉಶಾ ಅವರ ಧ್ವನಿಯಲ್ಲಿ ಶ್ರೀವಲ್ಲಿ ಹಾಡನ್ನು ಕೇಳಿ ನೆಟ್ಟಿಗರು ಪುಳಕಗೊಂಡಿದ್ದಾರೆ. ಯುಟ್ಯೂಬ್​ನಲ್ಲಿ ಉಶಾ ಅವರು ಹಾಡಿದ ಹಾಡಿನ ವಿಡಿಯೋ ಸಖತ್​ ವೈರಲ್​ ಆಗಿದೆ. 

Viral Video: ಬೆಂಗಾಳಿ ಆವೃತ್ತಿಯಲ್ಲಿ ಶ್ರೀವಲ್ಲಿ ಹಾಡು: ಉಷಾ ಉತ್ತಪ್​ ಕಂಠಕ್ಕೆ ಅಭಿಮಾನಿಗಳು ಫಿದಾ
ಉಷಾ ಉತ್ತಪ್​
Follow us
TV9 Web
| Updated By: Pavitra Bhat Jigalemane

Updated on: Mar 02, 2022 | 3:25 PM

ಟಾಲಿವುಡ್​ನಲ್ಲಿ ಹೊಸ ಅಲೆ ಎಬ್ಬಿಸಿದ್ದ ಪುಷ್ಪ(Pushpa) ಬಿಡುಗಡೆಯಾಗಿ 3 ತಿಂಗಳು ಕಳೆದಿದೆ. ಆದರೂ ಹಾಡು, ಡೈಲಾಗ್​ನ ಕ್ರೇಜ್​ ಮಾತ್ರ ಕಡಿಮೆಯಾಗಿಲ್ಲ. ಈಗಾಗಲೇ ಹಲವು ತಾರೆಯರು ರೀಲ್ಸ್​ಗಳನ್ನು ಮಾಡಿ ಸಖತ್​ ವೈರಲ್​ ಆಗಿದೆ. ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಚಿತ್ರ ಹೊಸ ಟ್ರೆಂಡಿ ಸೃಷ್ಟಿಮಾಡಿದೆ.  ಚಿತ್ರದ ಶ್ರೀವಲ್ಲಿ(Srivalli) ಹಾಡು ರೀಲ್ಸ್​ ಪ್ರಿಯರ ನೆಚ್ಚಿನ ಗೀತೆಯಾಗಿದೆ. ಡೇವಿಡ್​ ವಾರ್ನರ್​ನಿಂದ ಹಿಡಿದು, ವಿದೇಶಿ ಪ್ರಜೆಗಳವರೆಗೂ ಶ್ರೀವಲ್ಲಿ ಹಾಡಿನ ಕ್ರೇಜ್​ ತಲುಪಿತ್ತು. ಇದೀಗ ಖ್ಯಾತ ಗಾಯಕಿ ಉಶಾ ಉತ್ತಪ್ (Usha Uthup)​ ಶ್ರೀವಲ್ಲಿ ಹಾಡಿನ ಬೆಂಗಾಳಿ ಆವೃತ್ತಿಯನ್ನು ಹಾಡಿದ್ದಾರೆ. ಉಶಾ ಅವರ ಧ್ವನಿಯಲ್ಲಿ ಶ್ರೀವಲ್ಲಿ ಹಾಡನ್ನು ಕೇಳಿ ನೆಟ್ಟಿಗರು ಪುಳಕಗೊಂಡಿದ್ದಾರೆ. ಯುಟ್ಯೂಬ್​ನಲ್ಲಿ ಉಶಾ ಅವರು ಹಾಡಿದ ಹಾಡಿನ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು ಸಖತ್​ ವೈರಲ್​ ಆಗಿದೆ.

ಉಶಾ ಉತ್ತಪ್​ ಅವರ ಕಂಠದಲ್ಲಿ ಶ್ರೀವಲ್ಲಿ ಹಾಡಿನ ಬೆಂಗಾಳಿ ಆವೃತ್ತಿ ಮೂಡಿಬಂದಿದ್ದು, ರಾಜೀವ್​ ದುತ್ತಾ ಅವರು ಶ್ರೀವಲ್ಲಿ ಹಾಡಿನ ಬೆಂಗಾಳಿ ಭಾಷೆಯ ಸಾಲುಗಳನ್ನು ಬರೆದಿದ್ದಾರೆ.  ಉಶಾ ಅವರ ಹಸ್ಕಿ ಧ್ವನಿಯಲ್ಲಿ ತಯಾರಾದ ಹಾಡು ಕೇಳುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಫೆ.28ರಂದು ವಿಡಿಯೋ ಹಂಚಿಕೊಳ್ಳಲಾಗಿದ್ದು, 3 ಲಕ್ಷಕೂ ಅಧಿಕ ವೀಕ್ಷಣೆ ಪಡೆದಿದೆ. ವಿಡಿಯೋ ಹಾಡನ್ನು ನೋಡಿದ ಬಳಕೆದಾರರು ತಮಿಳು ಸಾಲಿನಂತೆ ಬೆಂಗಾಳಿ ಸಾಲನ್ನು ಮ್ಯಾಚ್​ ಮಾಡಿ ಸಾಲುಗಳನ್ನು ಬರೆಯಲಾಗಿದೆ. ಇದಕ್ಕೆ ಉಶಾ ಅವರ ಧ್ವನಿ ಸೇರಿರುವುದು ಹಾಡಿಗೆ ಇನ್ನಷ್ಟು ಮೆರಗು ತರಿಸಿದೆ ಎಂದಿದ್ದಾರೆ.

ಮೂಲತಃ ಶ್ರೀವಲ್ಲಿ ಹಾಡನ್ನು ಚಂದ್ರಬೋಸ್​ ಅವರು ಬರೆದಿದ್ದು. ದೇವಿ ಶ್ರೀ ಪ್ರಸಾದ  ಅವರು ಕಂಪೋಸ್​ ಮಾಡಿದ್ದಾರೆ. ಶ್ರೀವಲ್ಲಿ ಹಾಡಿನ ಹಿಂದಿ ಆವೃತ್ತಿಯನ್ನು ಜಾವೆದ್​ ಅಲಿ ಅವರು ಹಾಡಿದ್ದಾರೆ. ಸದ್ಯ ಬೆಂಗಾಳಿ ಭಾಷೆಯ ಶ್ರೀವಲ್ಲಿ ಹಾಡು ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಇದನ್ನೂ ಓದಿ:

ಸಿಡ್ನಿ: ಭ್ರೂಣದ ರೀತಿಯ ಏಲಿಯನ್​ ಆಕೃತಿಯನ್ನು ಕಂಡು ಬೆರಗಾದ ವಿಜ್ಞಾನಿಗಳು

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ