Viral Video: ಕೊಲಂಬಿಯಾದಲ್ಲಿ ಗೂಳಿ ಕಾಳಗದ ವೇಳೆ ಕುಸಿದ ಪ್ರೇಕ್ಷಕರ ಗ್ಯಾಲರಿ; 4 ಜನ ಸಾವು, ನೂರಾರು ಮಂದಿಗೆ ಗಾಯ

ಟೋಲಿಮಾ ರಾಜ್ಯದ ಎಲ್ ಎಸ್ಪಿನಾಲ್ ನಗರದ ಕ್ರೀಡಾಂಗಣದಲ್ಲಿ "ಕೊರಲೆಜಾ" ಎಂಬ ಸಾಂಪ್ರದಾಯಿಕ ಗೂಳಿ ಕಾಳಗದ ಕಾರ್ಯಕ್ರಮದ ಸಂದರ್ಭದಲ್ಲಿ ಈ ಅನಾಹುತ ಸಂಭವಿಸಿದೆ. ಪ್ರೇಕ್ಷಕರ ಗ್ಯಾಲರಿ ಕುಸಿದು ಬೀಳುತ್ತಿರುವ ವಿಡಿಯೋ ವೈರಲ್ ಆಗಿದೆ.

Viral Video: ಕೊಲಂಬಿಯಾದಲ್ಲಿ ಗೂಳಿ ಕಾಳಗದ ವೇಳೆ ಕುಸಿದ ಪ್ರೇಕ್ಷಕರ ಗ್ಯಾಲರಿ; 4 ಜನ ಸಾವು, ನೂರಾರು ಮಂದಿಗೆ ಗಾಯ
Image Credit source: India.com
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jun 27, 2022 | 2:13 PM

ಬೊಗೋಟಾ: ಸೆಂಟ್ರಲ್ ಕೊಲಂಬಿಯಾದಲ್ಲಿ ನಡೆದ ಗೂಳಿ ಕಾಳಗದ (Bull Fight) ವೇಳೆ ಸುತ್ತಲೂ ಪ್ರೇಕ್ಷಕರು ಕುಳಿತಿದ್ದ ದೊಡ್ಡ ಸ್ಟ್ಯಾಂಡ್‌ನ ಒಂದು ಭಾಗ ಕುಸಿದು ಬಿದ್ದಿದೆ. ಇದರ ಪರಿಣಾಮವಾಗಿ ವೀಕ್ಷಕರು ನೆಲಕ್ಕೆ ಬಿದ್ದಿದ್ದು, ಪ್ರೇಕ್ಷಕರ ಗ್ಯಾಲರಿಯ ಅವಶೇಷಗಳಡಿ ಸಿಲುಕಿ ನಾಲ್ವರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟೋಲಿಮಾ ರಾಜ್ಯದ ಎಲ್ ಎಸ್ಪಿನಾಲ್ ನಗರದ ಕ್ರೀಡಾಂಗಣದಲ್ಲಿ “ಕೊರಲೆಜಾ” ಎಂಬ ಸಾಂಪ್ರದಾಯಿಕ ಗೂಳಿ ಕಾಳಗದ ಕಾರ್ಯಕ್ರಮದ ಸಂದರ್ಭದಲ್ಲಿ ಈ ಅನಾಹುತ ಸಂಭವಿಸಿದೆ. ಇದರಲ್ಲಿ ಜನರು ಗೂಳಿಗಳನ್ನು ಕಾಳಗಕ್ಕೆ ಬಿಡಲು ರಿಂಗ್ ಪ್ರವೇಶಿಸುತ್ತಾರೆ. ಬುಲ್‌ಫೈಟ್‌ನ ಸಮಯದಲ್ಲಿ ತೆಗೆದ ವೀಡಿಯೋಗಳಲ್ಲಿ ಯಾವ ರೀತಿ ಪ್ರೇಕ್ಷಕರು ಕುಳಿತಿದ್ದ ಸ್ಟ್ಯಾಂಡ್‌ಗಳ (ಗ್ಯಾಲರಿ) ಕುಸಿದು ಬಿದ್ದಿದೆ ಎಂಬುದು ದಾಖಲಾಗಿದೆ.

ಸಾಕಷ್ಟು ಜನರು ಈ ಘಟನೆಯಲ್ಲಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಟೋಲಿಮಾ ಗವರ್ನರ್ ಜೋಸ್ ರಿಕಾರ್ಡೊ ಒರೊಜ್ಕೊ ಸ್ಥಳೀಯ ಬ್ಲೂ ರೇಡಿಯೊಗೆ ತಿಳಿಸಿದ್ದಾರೆ. ಈ ಘಟನೆಯಲ್ಲಿ ಸದ್ಯಕ್ಕೆ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರು ಮಹಿಳೆಯರು, ಒಬ್ಬ ಪುರುಷ ಮತ್ತು ಅಪ್ರಾಪ್ತ ವಯಸ್ಕರಿದ್ದಾರೆ.

ಇದನ್ನೂ ಓದಿ: Viral Video: ತಡವಾಗಿ ಬಂದ ಶಿಕ್ಷಕಿಗೆ ಚಪ್ಪಲಿಯಲ್ಲಿ ಥಳಿಸಿದ ಪ್ರಿನ್ಸಿಪಾಲ್; ಶಾಕಿಂಗ್ ವಿಡಿಯೋ ವೈರಲ್

ಕುಸಿದ ಪ್ರೇಕ್ಷಕರ ಗ್ಯಾಲರಿಯಲ್ಲಿ 800 ಜನರು ಕುಳಿತಿದ್ದರು. ಸದ್ಯಕ್ಕೆ ನಾಲ್ವರು ಸಾವನನ್ಪ್ಪಿದ್ದು, ಇನ್ನೂ ನಾಲ್ಕು ಜನರು ತೀವ್ರ ನಿಗಾದಲ್ಲಿದ್ದಾರೆ. ಇಬ್ಬರು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಈ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.