PM Modi-Joe Biden: G7 ಶೃಂಗಸಭೆಯಲ್ಲಿ ಶಿಷ್ಟಾಚಾರ ಪಕ್ಕಕ್ಕಿಟ್ಟು ಪ್ರಧಾನಿ ಮೋದಿ ಕೈಕುಲುಕಲು ಹಾತೊರೆದ ಅಮೆರಿಕ ಅಧ್ಯಕ್ಷ ಜೋ ಬಿಡೆನ್!

PM Modi at G7 Summit 2022: G7 ಶೃಂಗಸಭೆ 2022 ರಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ಪ್ರಧಾನಿ ಮೋದಿ ಅವರ ಕೈಕುಲುಕಿ, ಕುಶಲೋಪರಿ ವಿಚಾರಿಸಲು ಪ್ರೋಟೋಕಾಲ್ ಪಕ್ಕಕ್ಕಿಟ್ಟು ಮಾತುಕತೆ ನಡೆಸಿದರು.

PM Modi-Joe Biden: G7 ಶೃಂಗಸಭೆಯಲ್ಲಿ ಶಿಷ್ಟಾಚಾರ ಪಕ್ಕಕ್ಕಿಟ್ಟು ಪ್ರಧಾನಿ ಮೋದಿ ಕೈಕುಲುಕಲು ಹಾತೊರೆದ ಅಮೆರಿಕ ಅಧ್ಯಕ್ಷ ಜೋ ಬಿಡೆನ್!
G7 ಶೃಂಗಸಭೆಯಲ್ಲಿ ಶಿಷ್ಟಾಚಾರ ಪಕ್ಕಕ್ಕಿಟ್ಟು ಪ್ರಧಾನಿ ಮೋದಿ ಕೈಕುಲುಕಲು ಹಾತೊರೆದ ಅಮೆರಿಕ ಅಧ್ಯಕ್ಷ ಜೋ ಬಿಡೆನ್!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jun 27, 2022 | 7:39 PM

ಜರ್ಮನಿ: G7 ಶೃಂಗಸಭೆ 2022 ರಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ಪ್ರಧಾನಿ ಮೋದಿ ಅವರ ಕೈಕುಲುಕಿ, ಕುಶಲೋಪರಿ ವಿಚಾರಿಸಲು ಪ್ರೋಟೋಕಾಲ್ ಪಕ್ಕಕ್ಕಿಟ್ಟು ಮಾತುಕತೆ ನಡೆಸಿದರು. ಜರ್ಮನಿಯಲ್ಲಿ ಮಹತ್ವದ ಜಿ-7 ಸಮ್ಮೇಳನ ನಡೆಯುತ್ತಿದ್ದು, ಅದರಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ. ಜಗತ್ತಿನ ಬಲಾಢ್ಯ ರಾಷ್ಟ್ರಗಳು ಭಾರತದ ಸುತ್ತ ಠಳಾಯಿಸುತ್ತಿರುವುದು ಇದರಿಂದ ಮನದಟ್ಟಾಗಿದೆ. ಜಗತ್ತಿನ ಅತಿ ದೊಡ್ಡ ರಾಷ್ಟ್ರವಾದ ಅಮೆರಿಕಾ ಕೂಡ (usa president joe biden) ಭಾರತದ ಜೊತೆ ಮುಕ್ತಮನಸ್ಸಿನಿಂದ ಬೆರೆಯಲು ಎಲ್ಲ ಕಟ್ಟುಪಾಡುಗಳನ್ನು ಪಕ್ಕಕ್ಕಿಟ್ಟಿದೆ.

ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ (narendra modi ) ಜರ್ಮನಿ ಪ್ರವಾಸದಲ್ಲಿದ್ದಾರೆ. ಭಾನುವಾರ ಮ್ಯೂನಿಚ್‌ನಲ್ಲಿ ನಡೆದ ಡಯಾಸ್ಪೊರಾ ಸಮಾವೇಶದಲ್ಲಿ (schloss elmau in germany) ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದರು. ನಂತರ, 12 ವಿಶ್ವ ನಾಯಕರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಉತ್ಸುಕರಾಗಿದ್ದಾರೆ. ಇದೇ ಸಾಲಿನಲ್ಲಿ ಪ್ರಧಾನಿ ಕೂಡ ನಿಂತಿರುವುದು ದೊಡ್ಡ ಚರ್ಚೆಗೆ ಕಾರಣವಾಯಿತು.

ಸೋಮವಾರ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಇತರ ನಾಯಕರೊಂದಿಗೆ ಮಾತನಾಡುತ್ತಿದ್ದಾಗ, ಯುಎಸ್ ಅಧ್ಯಕ್ಷ ಜೋ ಬಿಡನ್ ಎಲ್ಲಾ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಪರ್ಕಿಸಿದರು. ಪ್ರಧಾನಿ ಅವರ ಭುಜ ತಟ್ಟಿ ಆತ್ಮೀಯವಾಗಿ ಮಾತನಾಡಿದರು. ಆ ಬಳಿಕ ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷರನ್ನು ಅಪ್ಪಿಕೊಂಡು ಹಸ್ತಲಾಘವ ಮಾಡಿದರು. ಅಧ್ಯಕ್ಷ ಜೋ ಬಿಡನ್ ಸೇರಿದಂತೆ ವಿಶ್ವದ ಇತರೆ ಹಲವು ಪ್ರಬಲ ನಾಯಕರು ಸಹ ಪ್ರಧಾನಿ ಮೋದಿ ಅವರನ್ನು ಇದೇ ರೀತಿ ಆತ್ಮೀಯವಾಗಿ ಭೇಟಿಯಾದರು. ಅಲ್ಲಿಗೆ ಬಂದಿದ್ದ ಮುಖಂಡರು ಪ್ರಧಾನಿ ಮೋದಿ ಅವರನ್ನು ಮಾತನಾಡಿಸಲು ಪೈಪೋಟಿ ನಡೆಸಿದಂತಿತ್ತು.

ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರ ಶಿಷ್ಟಾಚಾರವನ್ನು ಬದಿಗಿಟ್ಟು, ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಸಭೆಯಲ್ಲಿದ್ದವರನ್ನು ಮೆಚ್ಚಿಸಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬಿಡನ್ ನಡುವಿನ ಸೌಹಾರ್ದ ಸಂಭಾಷಣೆಯನ್ನು ಈ ಟ್ವಿಟ್ಟರ್​​ ಲಿಂಕ್​ನಲ್ಲಿ ವೀಕ್ಷಿಸಿ!

To read in Telugu click the link here

ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!