ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೊಸ ವ್ಯವಸ್ಥೆ: ಪುರುಷರು ಕೂಡ ಬದಲಾಯಿಸಬಹುದು ಮಗುವಿನ ಡೈಪರ್!
ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಪುರುಷರ ವಾಶ್ ರೂಂ ಸನಿಹ ಡೈಪರ್ ಬದಲಾಯಿಸುವ ಕೊಠಡಿಯನ್ನು ನಿರ್ಮಿಸಿದ್ದಾರೆ.
ಬೆಂಗಳೂರು: ಪುಟ್ಟ ಕಂದಮ್ಮಗಳಿಗೆ (Baby) ಸಾರ್ವಜನಿಕ ಸ್ಥಳಗಳಲ್ಲಿ ಡೈಪರ್ (Diaper) ಬದಲಾಯಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಡೈಪರ್ ಬದಲಾಯಿಸಲು ಪ್ರತ್ಯೇಕ ಕೊಠಡಿಗಳನ್ನು (Room) ನಿರ್ಮಿಸಿರುತ್ತಾರೆ. ಈ ಕೊಠಡಿಗಳನ್ನು ಸಾಮಾನ್ಯವಾಗಿ ಮಹಿಳೆಯೆರ (Woman) ಸ್ನಾನಗೃಹದ ಪಕ್ಕದಲ್ಲಿ ನಿರ್ಮಿಸಲಾಗುತ್ತದೆ. ಇದರಿಂದಾಗಿ ಮಹಿಳೆಯರಿಗೆ ಮಾತ್ರ ಡೈಪರ್ ಬದಲಾಯಿಸಲು ಸಾಧ್ಯವಾಗುತ್ತದೆ. ಆದರೆ ಕೆಲವೊಂದು ಬಾರಿ ಪುರುಷರು (Man) ಮಕ್ಕಳ ಡೈಪರ್ ಬದಲಾಯಿಸಬೇಕಾದಂತಹ ಪರಿಸ್ಥಿತಿ ಎದುರಾಗುತ್ತದೆ.
ಇದನ್ನು ಓದಿ: ಈ ಪನ್ನೀರ್ಗೆ ಬಂದಿದೆ ಬಂಗಾರದ ಬೆಲೆ! ಇದನ್ನು ಯಾವುದರಿಂದ ತಯಾರಿಸುತ್ತಾರೆ ಗೊತ್ತಾ?
ಈ ಸಮಯದಲ್ಲಿ ಪುರುಷರು ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಆದರೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಪುರುಷರು ಕಷ್ಟ ಪಡಬೇಕಿಲ್ಲ. ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಪುರುಷರ ವಾಶ್ ರೂಂ ಸನಿಹ ಡೈಪರ್ ಬದಲಾಯಿಸುವ ಕೊಠಡಿಯನ್ನು ನಿರ್ಮಿಸಿದ್ದಾರೆ. ಡೈಪರ್ ಬದಲಾವಣೆಯ ಕೊಠಡಿಯ ಚಿತ್ರವನ್ನು ಸುಖಾದ ಎಂಬವರು ಟ್ವೀಟ್ ಮಾಡಿ “ಇದು ಸಂಭ್ರಮಿಸಬೇಕಾದ ಕ್ಷಣ ಪುರುಷರು ಕೂಡ ಮಕ್ಕಳ ಡೈಪರ್ ಬದಲಾವಣೆ ಮಾಡಬಹುದಾದ ಕೊಠಡಿ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿದೆ ಮಕ್ಕಳ ರಕ್ಷಣೆ ಕೇವಲ ಮಹಿಳೆಯ ಜವಾಬ್ದಾರಿಯಲ್ಲ ಎಂದು ಬರೆದುಕೊಂಡು @BLRAirportಗೆ ಟ್ಯಾಗ್ ಮಾಡಿದ್ದಾರೆ.
Needs to be celebrated. Spotted in a men's washroom at @BLRAirport – a diaper change station.
Childcare is not just a woman's responsibility.
??✨ pic.twitter.com/Za4CG9jZfR
— Sukhada (@appadappajappa) June 27, 2022
Yes, and they were very well maintained too! This is from earlier this year, when my boy could still fit on that changing table (unwilling to face that fact that he's growing up!) pic.twitter.com/9SmPlvumdC
— Arjun Sharma (@supersharma) June 27, 2022
This is great to see, so many places have it only in the women's washroom. It should either be in a place where it is accessible to both, ie. outside gender specific washrooms or in both. https://t.co/lYed9vIXtI
— Sandeep Sarma (@sandeep9sarma) June 28, 2022
ಬೆಂಗಳೂರು ವಿಮಾನ ನಿಲ್ದಾಣ ವ್ಯವಸ್ಥಾಪಕರು ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು “ಸುಖದಾ ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಡೈಪರ್ ಬದಲಾಯಿಸುವ ಕೊಠಡಿಯನ್ನು #BLRA ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.