ನಿಮ್ಮ ವಾಹನ ಸೇಫ್ ಆಗಿದೆಯೇ?; ಭಾರತದಲ್ಲಿ ವರ್ಷಕ್ಕೆ ಎಷ್ಟು ಕಾರುಗಳು ಕಳ್ಳತನವಾಗುತ್ತದೆ ಗೊತ್ತಾ?
2023ರ ವೇಳೆಗೆ ಭಾರತದಲ್ಲಿ 30 ಮಿಲಿಯನ್‌ಗಿಂತಲೂ ಹೆಚ್ಚು ಕಾರುಗಳು ರಸ್ತೆಗಿಳಿಯಲಿವೆ ಎಂದು ಅಂದಾಜಿಸಲಾಗಿದೆ. ರಸ್ತೆಯಲ್ಲಿ ಕಾರುಗಳ ಸಂಖ್ಯೆಯಲ್ಲಿನ ಈ ಹೆಚ್ಚಳವು ಕಾರು ಕಳ್ಳತನದ ಹೆಚ್ಚಳಕ್ಕೆ ಕಾರಣವಾಗಿದೆ.
ನವದೆಹಲಿ: ಭಾರತದಲ್ಲಿ ಕಾರು (Car) ಕಳ್ಳತನವು ಒಂದು ಪ್ರಮುಖ ಸಮಸ್ಯೆ ಎಂಬುದು ನಿಮಗೆ ಗೊತ್ತಾ? ಭಾರತದಲ್ಲಿ ಪ್ರತಿ ವರ್ಷ ಸುಮಾರು 1,00,000 ಕಾರುಗಳು ಕಳ್ಳತನವಾಗುತ್ತಿವೆ ಎಂದು ಅಂದಾಜಿಸಲಾಗಿದೆ. ಆರ್ಥಿಕತೆಯು ಸುಧಾರಿಸಿದಂತೆ ಮತ್ತು ಹೆಚ್ಚಿನ ಜನರು ಕಾರುಗಳನ್ನು ಖರೀದಿಸಲು ಸಾಧ್ಯವಾಗುವಂತೆ ಈ ಸಂಖ್ಯೆಯು ಬೆಳೆಯುತ್ತಲೇ ಇರುತ್ತದೆ. ನೀವು ಭಾರತದಲ್ಲಿ ಕಾರನ್ನು ಹೊಂದಿದ್ದರೆ, ನಿಮ್ಮ ವಾಹನವನ್ನು ಕಳ್ಳರಿಂದ ರಕ್ಷಿಸಲು ಎಚ್ಚರಿಕೆ ವಹಿಸುವುದು ಮುಖ್ಯವಾಗಿದೆ. ಇದನ್ನು ಮಾಡಲು ಒಂದು ಮಾರ್ಗವೆಂದರೆ ಜಿಪಿಎಸ್ (GPS) ಟ್ರ್ಯಾಕಿಂಗ್ ಸಿಸ್ಟಮ್ ಅನ್ನು ಅಳವಡಿಸುವುದು. GPS ಟ್ರ್ಯಾಕಿಂಗ್ ವ್ಯವಸ್ಥೆಯಿಂದ ನಿಮ್ಮ ಕಾರನ್ನು ಯಾರಾದರೂ ಕದ್ದಿದ್ದರೆ ಅದನ್ನು ವಾಪಾಸ್ ಪಡೆಯಲು ನಿಮಗೆ ಸಹಾಯವಾಗುತ್ತದೆ. ಹಾಗೇ, ಕಾರು ಕಳ್ಳರನ್ನು ಪತ್ತೆಹಚ್ಚಲು ಪೊಲೀಸರಿಗೆ ಸಹಾಯವಾಗುತ್ತದೆ.
ನೀವು ಭಾರತದಲ್ಲಿ ಕಾರನ್ನು ಖರೀದಿಸಲು ಯೋಚಿಸುತ್ತಿದ್ದರೆ ಆ ಕಾರಿನ ಬಗ್ಗೆ ತಿಳಿದುಕೊಳ್ಳುವಾಗ ಅದರಲ್ಲಿ ಉತ್ತಮ GPS ಟ್ರ್ಯಾಕಿಂಗ್ ವ್ಯವಸ್ಥೆ ಇದೆಯೇ? ಎಂಬುದನ್ನು ಕೂಡ ಪರಿಶೀಲಿಸಲು ಮರೆಯಬೇಡಿ. ಇತ್ತೀಚಿನ ವರ್ಷಗಳಲ್ಲಿ, ಭಾರತದಲ್ಲಿ ತಯಾರಾದ ವಾಹನಗಳು ಇತರ ದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿವೆ. ಇತರ ದೇಶಗಳ ಮಾದರಿಗಳಿಗಿಂತ ಭಾರತದ ಕಾರುಗಳು ಅಗ್ಗವಾಗಿರುವುದು ಇದಕ್ಕೆ ಕಾರಣ. ಭಾರತೀಯ ಕಾರುಗಳು ಹೆಚ್ಚು ವಿಶ್ವಾಸಾರ್ಹವಾಗುತ್ತಿವೆ. ಹಾಗೇ, ಇತರ ಮಾರುಕಟ್ಟೆಗಳಲ್ಲಿ ಗ್ರಾಹಕರನ್ನು ಆಕರ್ಷಿಸುವ ವೈಶಿಷ್ಟ್ಯಗಳನ್ನು ನೀಡುತ್ತಿವೆ. ಈ ಹೆಚ್ಚಿದ ಬೇಡಿಕೆಯ ಪರಿಣಾಮವಾಗಿ, ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಕಾರು ಮಾರುಕಟ್ಟೆಯು ಗಣನೀಯವಾಗಿ ಬೆಳೆಯುವ ನಿರೀಕ್ಷೆಯಿದೆ.
ಇದನ್ನೂ ಓದಿ: Viral Video: ರಸ್ತೆ ಮಧ್ಯೆ ಹೊತ್ತಿ ಉರಿದ ಎಲೆಕ್ಟ್ರಿಕ್ ಕಾರು! ಇದು ಭಾರತದಲ್ಲಿ ದಾಖಲಾದ ಮೊದಲ ಪ್ರಕರಣ
ಭಾರತದಲ್ಲಿ ಕಾರು ಮಾರುಕಟ್ಟೆ ಈಗಾಗಲೇ ವೇಗವಾಗಿ ಬೆಳೆಯುತ್ತಿದೆ. ಕಳೆದ ಐದು ವರ್ಷಗಳಲ್ಲಿ, ಇದು 20%ಗಿಂತ ಹೆಚ್ಚು ಬೆಳೆದಿದೆ. ಆರ್ಥಿಕತೆಯು ಸುಧಾರಿಸುತ್ತಲೇ ಇರುವುದರಿಂದ ಈ ಬೆಳವಣಿಗೆ ಮುಂದುವರಿಯುವ ನಿರೀಕ್ಷೆಯಿದೆ. 2023ರ ವೇಳೆಗೆ, ಭಾರತದಲ್ಲಿ 30 ಮಿಲಿಯನ್‌ಗಿಂತಲೂ ಹೆಚ್ಚು ಕಾರುಗಳು ರಸ್ತೆಗಿಳಿಯಲಿವೆ ಎಂದು ಅಂದಾಜಿಸಲಾಗಿದೆ. ರಸ್ತೆಯಲ್ಲಿ ಕಾರುಗಳ ಸಂಖ್ಯೆಯಲ್ಲಿನ ಈ ಹೆಚ್ಚಳವು ಕಾರು ಕಳ್ಳತನದ ಹೆಚ್ಚಳಕ್ಕೆ ಕಾರಣವಾಗಿದೆ.
ಭಾರತದಲ್ಲಿ ಕಳುವಾದ ವಾಹನಗಳಲ್ಲಿ ಹೆಚ್ಚಿನವು ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಹುಂಡೈ i20ನಂತಹ ಕಡಿಮೆ ಬೆಲೆಯ ಕಾರುಗಳಾಗಿವೆ. ಈ ಮಾದರಿಗಳನ್ನು ಬ್ಲಾಕ್ ಮಾರ್ಕೆಟ್ನಲ್ಲಿ ಮಾರಾಟ ಮಾಡಲು ಸುಲಭವಾಗಿದೆ. ನೀವು ಈ ವಾಹನಗಳನ್ನು ಹೊಂದಿದ್ದರೆ, ಅದನ್ನು ಕಳ್ಳತನದಿಂದ ರಕ್ಷಿಸುವ ಬಗ್ಗೆ ಹೆಚ್ಚಿನ ಜಾಗರೂಕರಾಗಿರಿ.
ಭಾರತದಲ್ಲಿ ಅತಿ ಹೆಚ್ಚು ಕಾರು ಕಳ್ಳತನವಾಗಿರುವ ರಾಜ್ಯ ಮಹಾರಾಷ್ಟ್ರ. ಇದು ಭಾರತದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಎಂಬ ಕಾರಣದಿಂದ ಇಲ್ಲಿ ಕಾರು ಕಳ್ಳತನದ ಸಂಖ್ಯೆಯೂ ಹೆಚ್ಚಾಗಿದೆ. ಹಾಗೇ, ಮಹಾರಾಷ್ಟ್ರದಲ್ಲಿರುವ ಮುಂಬೈ ವಿಶ್ವದ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದಾಗಿದೆ. ಇದರಿಂದ ಕಳ್ಳರು ಕಾರುಗಳನ್ನು ಕದ್ದು ತಪ್ಪಿಸಿಕೊಳ್ಳುವುದು ಸುಲಭವಾಗುತ್ತದೆ.
ಇದನ್ನೂ ಓದಿ: President of India: ಭಾರತದ ರಾಷ್ಟ್ರಪತಿಯ ವೇತನವೆಷ್ಟು? ನಿವಾಸ ಹೇಗಿದೆ? ಬಳಸುವ ಕಾರು ಎಂಥದ್ದು? ಇತ್ಯಾದಿ ವಿವರಗಳು ಇಲ್ಲಿದೆ
ಭಾರತದಲ್ಲಿ ಕಾರಿನ ಸರಾಸರಿ ಮೈಲೇಜ್ ವರ್ಷಕ್ಕೆ ಸುಮಾರು 14,000 ಕಿಲೋಮೀಟರ್. ಇದು ಯುನೈಟೆಡ್ ಸ್ಟೇಟ್ಸ್‌ನಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಸರಾಸರಿಗಿಂತ ತುಂಬಾ ಕಡಿಮೆಯಾಗಿದೆ. ಪ್ರತಿ ವರ್ಷ ಭಾರತವು ಸುಮಾರು ನಾಲ್ಕು ಮಿಲಿಯನ್ ಕಾರುಗಳನ್ನು ತಯಾರಿಸುತ್ತದೆ. 2020-2021ರಲ್ಲಿ ಕಾರು ಮಾರಾಟದ ಸಂಖ್ಯೆ ಸುಮಾರು ಮೂರು ಮಿಲಿಯನ್ ತಲುಪಿದೆ. ಕಾರು ಉದ್ಯಮದಿಂದ ಒಟ್ಟು ಆದಾಯವು 2026ರ ವೇಳೆಗೆ ಆರು ಟ್ರಿಲಿಯನ್ ತಲುಪುವ ನಿರೀಕ್ಷೆಯಿದೆ.
ಜಿಪಿಎಸ್ ಟ್ರ್ಯಾಕರ್‌ಗೆ ಎಷ್ಟು ವೆಚ್ಚವಾಗುತ್ತದೆ?: ಕಾರಿಗೆ GPS ಟ್ರ್ಯಾಕರ್ ಹಾಕಿಸಲು 2000ರಿಂದ 3000 ರೂ. ವೆಚ್ಚವಾಗುತ್ತದೆ. ಆದರೆ, ಆ ಸಾಧನದ ವೈಶಿಷ್ಟ್ಯಗಳು ಮತ್ತು ಗುಣಮಟ್ಟವನ್ನು ಅವಲಂಬಿಸಿ ಬೆಲೆ ಬದಲಾಗುತ್ತದೆ. ನಿಮ್ಮ ಕಾರನ್ನು ಕಳ್ಳತನದಿಂದ ರಕ್ಷಿಸಲು ಉತ್ತಮ ಗುಣಮಟ್ಟದ ಜಿಪಿಎಸ್ ಟ್ರ್ಯಾಕರ್ ಹಾಕಿಸುವುದು ಉತ್ತಮ. ನೀವು ಕಷ್ಟಪಟ್ಟು ಸಂಪಾದಿಸಿದ ಹಣ ಮತ್ತು ಆಸ್ತಿಯನ್ನು ಕಾರು ಕಳ್ಳರು ದೋಚಲು ಬಿಡಬೇಡಿ. ನಿಮ್ಮ ವಾಹನವನ್ನು ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆಯೊಂದಿಗೆ ರಕ್ಷಿಸಿ.