Pranitha Subhash: ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿದ ಪ್ರಣಿತಾ; ‘ಹಿಂದೂಗಳ ಜೀವ ಮುಖ್ಯ’ ಎಂದು ಫಲಕ ಹಿಡಿದ ನಟಿ

Udaipur Killing: ‘ಉದಯಪುರ ವಿಡಿಯೋವನ್ನು ನಾನು ನೋಡಲೇಬಾರದಿತ್ತು. ನಿಜಕ್ಕೂ ಭಯಾನಕ’ ಎಂದು ಪ್ರಣಿತಾ ಸುಭಾಷ್​ ಪೋಸ್ಟ್​ ಮಾಡಿದ್ದಾರೆ.

Pranitha Subhash: ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿದ ಪ್ರಣಿತಾ; ‘ಹಿಂದೂಗಳ ಜೀವ ಮುಖ್ಯ’ ಎಂದು ಫಲಕ ಹಿಡಿದ ನಟಿ
ಪ್ರಣಿತಾ ಸುಭಾಷ್
Follow us
TV9 Web
| Updated By: ಮದನ್​ ಕುಮಾರ್​

Updated on:Jun 30, 2022 | 10:17 AM

ಉದಯಪುರದ ಟೈಲರ್ ಕನ್ಹಯ್ಯ ಲಾಲ್ (Kanhaiya Lal) ಹತ್ಯೆ ಖಂಡಿಸಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಹಾಡಹಗಲೇ ಇಂಥ ಹೇಯ ಕೃತ್ಯ ನಡೆದಿರುವುದಕ್ಕೆ ಹಲವು ಸೆಲೆಬ್ರಿಟಿಗಳು ಕೂಡ ಅಸಮಾಧಾನ ಹೊರಹಾಕಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ನಟ-ನಟಿಯರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಟ ಅನುಪಮ್​ ಖೇರ್​ (Anupam Kher), ಸ್ಯಾಂಡಲ್​ವುಡ್​ ನಟಿ ಪ್ರಣಿತಾ ಸುಭಾಷ್​ ಅವರು ಕೂಡ ಈ ಕುರಿತು ಪೋಸ್ಟ್​ ಮಾಡಿದ್ದಾರೆ. ‘ಹಿಂದೂಗಳ ಜೀವ ಮುಖ್ಯ’ ಎಂದು ಪ್ರಣಿತಾ ಅವರು ಫಲಕ ಹಿಡಿದು ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಕನ್ಹಯ್ಯ ಲಾಲ್ ಹತ್ಯೆಯಿಂದಾಗಿ ಮನಸು ವಿಚಲಿತವಾಗಿದೆ ಎಂದು ಪ್ರಣಿತಾ ಸುಭಾಷ್​ (Pranitha Subhash) ಹೇಳಿದ್ದಾರೆ. ಸದ್ಯ ಅವರ ಸೋಶಿಯಲ್​ ಮೀಡಿಯಾ ಪೋಸ್ಟ್​ ವೈರಲ್​ ಆಗುತ್ತಿದೆ.

‘ಉದಯಪುರ ವಿಡಿಯೋವನ್ನು ನಾನು ನೋಡಲೇಬಾರದಿತ್ತು. ನಿಜಕ್ಕೂ ಭಯಾನಕ. ಹಿನ್ನೆಲೆಯಲ್ಲಿ ಕೇಳಿಸಿದ ಆ ಚೀರಾಟ ನಮ್ಮ ಮನದಲ್ಲಿ ಪ್ರತಿಧ್ವನಿಸುತ್ತಲೇ ಇರುತ್ತದೆ ಮತ್ತು ದೀರ್ಘ ಕಾಲದವರೆಗೆ ಕಾಡುತ್ತಲೇ ಇರುತ್ತದೆ. #JusticeForKanhaiyaLal’ ಎಂದು ಪ್ರಣಿತಾ ಸುಭಾಸ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ
Image
Swara Bhaskar: ಸಲ್ಮಾನ್​ ಖಾನ್​ ಬಳಿಕ ನಟಿ ಸ್ವರಾ ಭಾಸ್ಕರ್​ಗೆ ಕೊಲೆ ಬೆದರಿಕೆ; ಸಾವರ್ಕರ್​ ಬಗ್ಗೆ ಮಾತಾಡಿದ್ದಕ್ಕೆ ಆಕ್ರೋಶ
Image
Udaipur murder ಒಬ್ಬ ಆರೋಪಿ 2014 ರಲ್ಲಿ ಕರಾಚಿಗೆ ಹೋಗಿದ್ದ, ಪಾಕಿಸ್ತಾನದ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡುತ್ತಿದ್ದ: ಪೊಲೀಸ್
Image
Udaipur murder ಉದಯಪುರ ಹತ್ಯೆಯ ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಬಡ್ತಿ: ಅಶೋಕ್ ಗೆಹ್ಲೋಟ್
Image
Udaipur Murder ಸಾಮಾಜಿಕ ಮಾಧ್ಯಮಗಳಲ್ಲಿ ಬೆದರಿಕೆ ಕಾರಣ ಕನ್ಹಯ್ಯಾ ಕೆಲಸಕ್ಕೆ ಹೋಗಿರಲಿಲ್ಲ, ರಜೆ ನಂತರ ಹೋದಾಗ ಹೀಗಾಯ್ತು: ಕನ್ಹಯ್ಯಾ ಲಾಲ್ ಪತ್ನಿ

ಮತ್ತೊಂದು ಪೋಸ್ಟ್​ನಲ್ಲಿ ‘ಹಿಂದೂಗಳ ಜೀವ ಮುಖ್ಯ’ ಎಂದು ಪ್ರಣಿತಾ ಸುಭಾಷ್​​ ಅವರು ಫಲಕ ಹಿಡಿದು ನಿಂತಿರುವ ಫೋಟೋ ಹಂಚಿಕೊಂಡಿದ್ದಾರೆ. ‘ಯಾರಿಗಾದರೂ ಕೇಳುತ್ತಿದೆಯೇ’ ಎಂದು ಅವರ ಅದಕ್ಕೆ ಕ್ಯಾಪ್ಷನ್​ ನೀಡಿದ್ದಾರೆ. ಪೋಸ್ಟ್​ ಮಾಡಿದ ಕೆಲವೇ ಗಂಟೆಗಳಲ್ಲಿ 3 ಸಾವಿರಕ್ಕೂ ಅಧಿಕ ಜನರು ಇದಕ್ಕೆ ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: Pranitha Subhash: ನಟಿ ಪ್ರಣಿತಾ ಸುಭಾಷ್​ಗೆ ಹೆಣ್ಣುಮಗು; ಇಲ್ಲಿದೆ ಫೋಟೋ

ಭಾರತದಲ್ಲಿ ಹಿಂದೂ ಟೆರರ್​ ಇದೆ ಎಂದವರಿಗೆ ನಟಿ ಪ್ರಣಿತಾ ಸುಭಾಷ್​ ತಿರುಗೇಟು; ನಿಮ್ಮ ಬಗ್ಗೆ ಹೆಮ್ಮೆ ಆಗ್ತಿದೆ ಎಂದ ಫ್ಯಾನ್ಸ್​

Published On - 10:17 am, Thu, 30 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ