ಬೆಂಗಳೂರಲ್ಲಿ ಅಪಘಾತ: ‘ಕೆಜಿಎಫ್ 2’ ನಟನ ಬೆಂಜ್ ಕಾರು ಸಂಪೂರ್ಣ ಜಖಂ; ಕೂದಲೆಳೆ ಅಂತರದಲ್ಲಿ ನಟ ಪಾರು

ಇಂದು ಮುಂಜಾನೆ 6 ಗಂಟೆ ಸುಮಾರಿಗೆ ಅವಿನಾಶ್ ಅವರು ಬೆಂಗಳೂರಿನ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಗೂಡ್ಸ್ ಲಾರಿ ಒಂದು ಬಂದು ಕಾರಿಗೆ ಡಿಕ್ಕಿ ಹೊಡೆದಿದೆ.

ಬೆಂಗಳೂರಲ್ಲಿ ಅಪಘಾತ: ‘ಕೆಜಿಎಫ್ 2’ ನಟನ ಬೆಂಜ್ ಕಾರು ಸಂಪೂರ್ಣ ಜಖಂ; ಕೂದಲೆಳೆ ಅಂತರದಲ್ಲಿ ನಟ ಪಾರು
ಅವಿನಾಶ್
TV9kannada Web Team

| Edited By: Rajesh Duggumane

Jun 29, 2022 | 8:31 PM

‘ಕೆಜಿಎಫ್’ (KGF Chapter 1) ಸರಣಿಯಲ್ಲಿ ಮೂಡಿ ಬಂದ ಎರಡು ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದವು. ಈ ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿ ಪಾತ್ರಗಳು ಕೂಡ ಹೈಲೈಟ್ ಆಗಿವೆ. ಈ ಚಿತ್ರದಿಂದ ಅನೇಕರ ಬದುಕು ಬದಲಾಗಿದೆ. ಈ ಸಿನಿಮಾದಲ್ಲಿ ಆ್ಯಂಡ್ರೂಸ್ ಪಾತ್ರ ಮಾಡಿದ್ದ ಬಿಎಸ್ಅವಿನಾಶ್ (Avinash) ಅವರು ಈಗ ಸುದ್ದಿ ಆಗಿದ್ದಾರೆ. ಬೆಂಗಳೂರಿನಲ್ಲಿ ಇಂದು (ಜೂನ್​ 29) ಮುಂಜಾನೆ ಅವರ ಬೆಂಜ್ ಕಾರು ಅಪಘಾತಕ್ಕೆ ಒಳಗಾಗಿದೆ. ಅದೃಷ್ಟವಶಾತ್ ಅವಿನಾಶ್ ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.

ಇಂದು ಮುಂಜಾನೆ 6 ಗಂಟೆ ಸುಮಾರಿಗೆ ಅವಿನಾಶ್ ಅವರು ಬೆಂಗಳೂರಿನ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದರು. ಅವರು ಎಂ.ಜಿ. ರಸ್ತೆ ಕಡೆ ತೆರಳುವವರಿದ್ದರು. ಈ ವೇಳೆ ಗೂಡ್ಸ್ ಲಾರಿ ಒಂದು ಬಂದು ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಅವಿನಾಶ್ ಅವರ ಬೆಂಜ್ ಕಾರು ಸಂಪೂರ್ಣ ಜಖಂಗೊಂಡಿದೆ. ಅವಿನಾಶ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಕ್ಯಾಂಟರ್ ಚಾಲಕ ಶಿವಗೌಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಅವಿನಾಶ್ ಮಾಡಿದ್ದ ಆ್ಯಂಡ್ರೂಸ್ ಪಾತ್ರ ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಎರಡಲ್ಲೂ ಹೈಲೈಟ್ ಆಗಿದೆ. ‘ಕೆಜಿಎಫ್ 2’ ಕ್ಲೈಮ್ಯಾಕ್ಸ್​ನಲ್ಲಿ ಆ್ಯಂಡ್ರೂಸ್ ಹತನಾಗುತ್ತಾನೆ. ಈ ಚಿತ್ರದಿಂದ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ಸಿಕ್ಕಿದೆ. ಹಲವು ಕಡೆಗಳಿಂದ ಅವಿನಾಶ್​ಗೆ ಆಫರ್​ಗಳು ಬರುತ್ತಿವೆ.

ಏಪ್ರಿಲ್ 14ರಂದು ‘ಕೆಜಿಎಫ್ 2’ ಚಿತ್ರ ರಿಲೀಸ್ ಆಯಿತು. ಈ ಸಿನಿಮಾ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿತು. ಇದರಿಂದ ಚಿತ್ರಕ್ಕೆ ದೊಡ್ಡ ಬೂಸ್ಟ್​ ಸಿಕ್ಕಿತು. ಮೊದಲ ವೀಕೆಂಡ್​ನಲ್ಲಿ ‘ಕೆಜಿಎಫ್ 2’ಗೆ ದುಡ್ಡಿನ ಹೊಳೆ ಹರಿದುಬಂತು. ಈ ಸಿನಿಮಾ ನಂತರದ ದಿನಗಳಲ್ಲಿ ಮಾಡಿದ ದಾಖಲೆಗಳಿಗೆ ಲೆಕ್ಕವೇ ಇಲ್ಲ. ‘ಕೆಜಿಎಫ್ 2’ ಸಿನಿಮಾದ ಒಟ್ಟಾರೆ ಕಲೆಕ್ಷನ್ ಲೆಕ್ಕಾಚಾರ ಸಿಕ್ಕಿದೆ. ಚಿತ್ರ ಒಟ್ಟೂ 1250 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಒಂದು ಸಿನಿಮಾ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತದೆ ಎಂದರೆ ಅದು ಸಾಮಾನ್ಯ ವಿಚಾರ ಅಲ್ಲ ಎಂದು ಬಾಕ್ಸ್ ಆಫೀಸ್ ಪಂಡಿತರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ

ಇದನ್ನೂ ಓದಿ: ‘ಕೆಜಿಎಫ್ 2’ ಯಶಸ್ಸು ನೋಡಿ ಮನಸ್ಸು ಬದಲಿಸಿದ ‘ಪುಷ್ಪ 2’ ತಂಡ; ನೂರಾರು ಕೋಟಿ ಕೊಟ್ಟರೂ ಒಪ್ಪಲಿಲ್ಲ ನಿರ್ಮಾಪಕರು?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada