‘ಕೆಜಿಎಫ್ 2’ ಯಶಸ್ಸು ನೋಡಿ ಮನಸ್ಸು ಬದಲಿಸಿದ ‘ಪುಷ್ಪ 2’ ತಂಡ; ನೂರಾರು ಕೋಟಿ ಕೊಟ್ಟರೂ ಒಪ್ಪಲಿಲ್ಲ ನಿರ್ಮಾಪಕರು?

‘ಕೆಜಿಎಫ್ 2’ 433 ಕೋಟಿ ರೂಪಾಯಿ ಕಲೆ ಹಾಕಿತು. ಅಂದರೆ ಮೊದಲ ಚಾಪ್ಟರ್​ಗಿಂತ ಎರಡನೇ ಚಾಪ್ಟರ್​ 10 ಪಟ್ಟು ಹೆಚ್ಚು ಹಣವನ್ನು ಕಮಾಯಿ ಮಾಡಿತು. ಇದನ್ನು ‘ಪುಷ್ಪ’ ತಂಡದವರು ಗಮನದಲ್ಲಿ ಇಟ್ಟುಕೊಂಡಂತೆ ಇದೆ.

‘ಕೆಜಿಎಫ್ 2’ ಯಶಸ್ಸು ನೋಡಿ ಮನಸ್ಸು ಬದಲಿಸಿದ ‘ಪುಷ್ಪ 2’ ತಂಡ; ನೂರಾರು ಕೋಟಿ ಕೊಟ್ಟರೂ ಒಪ್ಪಲಿಲ್ಲ ನಿರ್ಮಾಪಕರು?
ಯಶ್-ಅಲ್ಲು ಅರ್ಜುನ್
TV9kannada Web Team

| Edited By: Rajesh Duggumane

Jun 29, 2022 | 2:28 PM

ಸುಕುಮಾರ್ (Sukumar) ನಿರ್ದೇಶನದ, ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ 2’ ಸಿನಿಮಾದ ಶೂಟಿಂಗ್ ಇನ್ನಷ್ಟೇ ಆರಂಭಗೊಳ್ಳಬೇಕಿದೆ. ಜುಲೈ ತಿಂಗಳಿಂದ ಈ ಚಿತ್ರದ ಶೂಟಿಂಗ್ ಆರಂಭವಾಗುವ ನಿರೀಕ್ಷೆ ಇದೆ. ‘ಪುಷ್ಪ’ ಚಿತ್ರ (Pushpa Movie) ಸೂಪರ್-ಡೂಪರ್ ಹಿಟ್ ಆಗಿದ್ದರಿಂದ ಎರಡನೇ ಪಾರ್ಟ್ ಬಗ್ಗೆ ನಿರೀಕ್ಷೆ ಹೆಚ್ಚಿರುವುದು ಸಾಮಾನ್ಯ. ಈಗ ‘ಪುಷ್ಪ 2’ ಚಿತ್ರದ ಶೂಟಿಂಗ್ ಆರಂಭಕ್ಕೂ  ಮೊದಲೇ ಸಿನಿಮಾದ ಹಕ್ಕನ್ನು ಕೊಂಡುಕೊಳ್ಳಲು ಬಾಲಿವುಡ್​​ ಮಂದಿ ಆಸಕ್ತಿ ತೋರಿದ್ದಾರೆ. ಆದರೆ, ಇದಕ್ಕೆ ‘ಪುಷ್ಪ 2’ ತಂಡದವರು ಆಸಕ್ತಿ ತೋರಿಸಿಲ್ಲ ಎಂದು ವರದಿ ಆಗಿದೆ.

ಯಶ್ ನಟನೆಯ ಕನ್ನಡದ ‘ಕೆಜಿಎಫ್’ ಸಿನಿಮಾ ಹಿಂದಿಯಲ್ಲಿ ಕಲೆ ಹಾಕಿದ್ದು ಕೇವಲ 44 ಲಕ್ಷ ರೂಪಾಯಿ. ಆದರೆ, ‘ಕೆಜಿಎಫ್ 2’ 433 ಕೋಟಿ ರೂಪಾಯಿ ಕಲೆ ಹಾಕಿತು. ಅಂದರೆ ಮೊದಲ ಚಾಪ್ಟರ್​ಗಿಂತ ಎರಡನೇ ಚಾಪ್ಟರ್​ 10 ಪಟ್ಟು ಹೆಚ್ಚು ಹಣವನ್ನು ಕಮಾಯಿ ಮಾಡಿತು. ಇದನ್ನು ‘ಪುಷ್ಪ’ ತಂಡದವರು ಗಮನದಲ್ಲಿ ಇಟ್ಟುಕೊಂಡಂತೆ ಇದೆ. ಹೀಗಾಗಿ, ‘ಪುಷ್ಪ 2’ ಹಿಂದಿ ಹಂಚಿಕೆ ಹಕ್ಕನ್ನು ಮಾರಾಟ ಮಾಡಲು ಮೈತ್ರಿ ಮೂವೀ ಮೇಕರ್ಸ್​ ಆಸಕ್ತಿ ತೋರುತ್ತಿಲ್ಲ ಎಂದು ವರದಿ ಆಗಿದೆ.

ಬಾಲಿವುಡ್​ನಲ್ಲಿ 100 ಕೋಟಿ ಕಲೆ ಹಾಕಿದ ಹೆಚ್ಚುಗಾರಿಕೆ ‘ಪುಷ್ಪ’ ಚಿತ್ರಕ್ಕೆ ಇದೆ. ಹೀಗಾಗಿ, ಜನರು ‘ಪುಷ್ಪ 2’ ಚಿತ್ರಕ್ಕೆ ಮತ್ತಷ್ಟು ಆಸಕ್ತಿ ತೋರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ‘ಕೆಜಿಎಫ್ 2’ ಮಾದರಿಯಲ್ಲೇ ಉತ್ತರ ಭಾರತದಲ್ಲಿ ಚಿತ್ರಕ್ಕೆ ಹೆಚ್ಚು ಪ್ರಚಾರ ನೀಡಿದರೆ ಸಿನಿಮಾ ಬಂಗಾರದ ಬೆಳೆ ತೆಗೆಯುವುದು ಖಚಿತ ಎಂಬುದು ಸಿನಿಮಾ ಪಂಡಿತರ ಮಾತು.

‘ಪುಷ್ಪ’ ಚಿತ್ರವನ್ನು ಹಿಂದಿಯಲ್ಲಿ ‘ಗೋಲ್ಡ್​ಮೈನ್​ ಫಿಲ್ಮ್ಸ್​’ ಹಂಚಿಕೆ ಮಾಡಿತ್ತು. ಈಗ ಹಲವು ದೊಡ್ಡ ನಿರ್ಮಾಣ ಸಂಸ್ಥೆಗಳು ‘ಪುಷ್ಪ 2’ ಹಂಚಿಕೆಗೆ ಆಸಕ್ತಿ ತೋರಿಸಿವೆ. ಆದರೆ, ಮೈತ್ರಿ ಮೂವೀ ಮೇಕರ್ಸ್​ ಇದಕ್ಕೆ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ. ಬದಲಿಗೆ ಹಿಂದಿ ಬೆಲ್ಟ್​​ನಲ್ಲಿ ತಾವೇ ಸಿನಿಮಾ ರಿಲೀಸ್ ಮಾಡಲು ಆಸಕ್ತಿ ತೋರಿಸಿದೆ ಎನ್ನಲಾಗುತ್ತಿದೆ. ಈ ಮೂಲಕ ಹಿಂದಿ ಚಿತ್ರರಂಗದಲ್ಲೂ ತಮ್ಮ ಹೆಜ್ಜೆ ಇಡಲು ಈ ನಿರ್ಮಾಣ ಸಂಸ್ಥೆ ಲೆಕ್ಕಾಚಾರ ಹಾಕಿಕೊಂಡಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಬರಬೇಕಿದೆ. ‘ಪುಷ್ಪ 2’ ಚಿತ್ರ 2023ರ ಬೇಸಿಗೆಯಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಅಲ್ಲು ಅರ್ಜುನ್​ಗೆ ಬಾಡಿ ಶೇಮಿಂಗ್; ‘ವಡಾಪಾವ್ ಲುಕ್​’ ಎಂದು ಟೀಕಿಸಿದ ಫ್ಯಾನ್ಸ್​

Sukumar: ‘ಪುಷ್ಪ’ ನೋಡಿ ಸುಕುಮಾರ್​ಗೆ ಮೆಸೇಜ್​ ಮಾಡಿದ ‘3 ಈಡಿಯಟ್ಸ್​’ ನಿರ್ದೇಶಕ ರಾಜ್​ಕುಮಾರ್​ ಹಿರಾನಿ

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada