AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pushpa 2: ಫಾರಿನ್​ ಹುಡುಗಿ ಜತೆ ಅಲ್ಲು ಅರ್ಜುನ್​​ ರೊಮ್ಯಾನ್ಸ್​; ‘ಪುಷ್ಪ 2’ ಚಿತ್ರದಲ್ಲಿ ರಶ್ಮಿಕಾ ಪಾತ್ರಕ್ಕೆ ಬೀಳುತ್ತಾ ಕತ್ತರಿ?

Rashmika Mandanna: ಹರಿದಾಡುತ್ತಿರುವ ಮಾಹಿತಿ ನಿಜವೇ ಹೌದಾದರೆ ರಶ್ಮಿಕಾ ಮಂದಣ್ಣ ಅವರಿಗೆ ತೊಂದರೆ ಆಗಲಿದೆ. ‘ಪುಷ್ಪ 2’ ಚಿತ್ರದಲ್ಲಿ ಅವರ ಪಾತ್ರವನ್ನು ಮೊಟಕುಗೊಳಿಸಿ, ಬೇರೆ ನಟಿಯ ಪಾತ್ರ ಹೆಚ್ಚು ರಾರಾಜಿಸುವ ಸಾಧ್ಯತೆ ಇರುತ್ತದೆ.

Pushpa 2: ಫಾರಿನ್​ ಹುಡುಗಿ ಜತೆ ಅಲ್ಲು ಅರ್ಜುನ್​​ ರೊಮ್ಯಾನ್ಸ್​; ‘ಪುಷ್ಪ 2’ ಚಿತ್ರದಲ್ಲಿ ರಶ್ಮಿಕಾ ಪಾತ್ರಕ್ಕೆ ಬೀಳುತ್ತಾ ಕತ್ತರಿ?
ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ
TV9 Web
| Updated By: ಮದನ್​ ಕುಮಾರ್​|

Updated on:Jun 24, 2022 | 8:31 AM

Share

ಬಹುನಿರೀಕ್ಷಿತ ‘ಪುಷ್ಪ 2’ (Pushpa 2) ಸಿನಿಮಾ ಬಗ್ಗೆ ಕೇಳಿಬರುತ್ತಿರುವ ಗಾಸಿಪ್​ಗಳು ಒಂದೆರಡಲ್ಲ. ಹೇಗಾದರೂ ಮಾಡಿ ಈ ಸಿನಿಮಾವನ್ನು ಗೆಲ್ಲಿಸಲೇಬೇಕು ಎಂದು ಚಿತ್ರತಂಡ ಭರ್ಜರಿ ಹೋಮ್​ ವರ್ಕ್​ ಮಾಡಿಕೊಳ್ಳುತ್ತಿದೆ. ಅಲ್ಲು ಅರ್ಜುನ್​ (Allu Arjun) ಅಭಿಮಾನಿಗಳು ಈ ಸಿನಿಮಾದ ಮೇಲೆ ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ನಡುವೆ ಚಿತ್ರದ ಕಥೆಯ ಬಗ್ಗೆ ಹತ್ತು ಹಲವು ಅಂತೆ-ಕಂತೆಗಳು ಕೇಳಿಬರುತ್ತಿವೆ. ಮೊದಲ ಪಾರ್ಟ್​ನಲ್ಲಿ ಅಲ್ಲು ಅರ್ಜುನ್​ ಜೊತೆ ರಶ್ಮಿಕಾ ಮಂದಣ್ಣ (Rashmika Mandanna) ಮಿಂಚಿದ್ದರು. ಆದರೆ ಈ ಎರಡನೇ ಪಾರ್ಟ್​ನಲ್ಲಿ ಮತ್ತೋರ್ವ ನಾಯಕಿ ಕೂಡ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ನಿರ್ದೇಶಕ ಸುಕುಮಾರ್​ ಅವರು ಕಥೆಯಲ್ಲಿ ಕೆಲವು ಟ್ವಿಸ್ಟ್​ಗಳನ್ನು ನೀಡಲು ಪ್ರಯತ್ನಿಸುತ್ತಿದ್ದು ಅಭಿಮಾನಿಗಳಿಗೆ ಸರ್ಪ್ರೈಸ್​ ಸಿಗಲಿದೆ ಎಂಬ ಗುಸುಗುಸು ಕೇಳಿಬಂದಿದೆ.

‘ಪುಷ್ಪ 2’ ಸಿನಿಮಾದ ಕಥೆಯ ಆರಂಭದಲ್ಲೇ ಕಥಾನಾಯಕಿಯ ಪಾತ್ರ ಅಂತ್ಯವಾಗುತ್ತದೆ ಎಂದು ಇತ್ತೀಚೆಗಷ್ಟೇ ಗಾಸಿಪ್​ ಹಬ್ಬಿತ್ತು. ಆದರೆ ಅದನ್ನು ನಿರ್ಮಾಪಕರು ತಳ್ಳಿ ಹಾಕಿದರು. ಅದರ ಬೆನ್ನಲ್ಲೇ ಫಾರಿನ್​ ನಟಿಯ ಆಯ್ಕೆ ಬಗ್ಗೆ ಹೊಸ ಗಾಸಿಪ್​ ಹರಡಿದೆ. ‘ಪುಷ್ಪ’ ಸಿನಿಮಾದ ಎರಡನೇ ಫಾರ್ಟ್​ನಲ್ಲಿ ಕಥೆಯು ವಿದೇಶಕ್ಕೆ ಶಿಫ್ಟ್​ ಆಗುತ್ತದೆ ಎಂಬ ಮಾಹಿತಿ ಇದೆ. ಪುಷ್ಪರಾಜ್​ ಫಾರಿನ್​ಗೆ ಹೋದಾಗ ಅಲ್ಲಿನ ಸುಂದರಿಯೊಬ್ಬಳ ಜೊತೆ ರೊಮ್ಯಾನ್ಸ್​ ಮಾಡುತ್ತಾನೆ. ಈ ರೀತಿಯ ಕಥೆಯನ್ನು ಸುಕುಮಾರ್​ ಸಿದ್ಧಪಡಿಸಿದ್ದು, ಅದಕ್ಕೆ ಅಲ್ಲು ಅರ್ಜುನ್​ ಕಡೆಯಿಂದ ಗ್ರೀನ್​ ಸಿಗ್ನಲ್​ ಸಿಗಬೇಕಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಒಂದು ವೇಳೆ ಈ ಅಂತೆ-ಕಂತೆಗಳು ನಿಜವೇ ಹೌದಾದರೆ ರಶ್ಮಿಕಾ ಮಂದಣ್ಣ ಅವರಿಗೆ ತೊಂದರೆ ಆಗಲಿದೆ. ಅವರ ಪಾತ್ರವನ್ನು ಮೊಟಕುಗೊಳಿಸಿ, ಬೇರೆ ನಟಿಯ ಪಾತ್ರ ಹೆಚ್ಚು ರಾರಾಜಿಸುವ ಸಾಧ್ಯತೆ ಇರುತ್ತದೆ. ಆದರೆ ಈ ಬಗ್ಗೆ ಸದ್ಯಕ್ಕಂತೂ ಚಿತ್ರತಂಡದಿಂದ ಸ್ಪಷ್ಟನೆ ಸಿಕ್ಕಿಲ್ಲ. ಒಟ್ಟಿನಲ್ಲಿ, ‘ಪುಷ್ಪ 2’ ಕಥೆಯಲ್ಲಿ ದಿನಕ್ಕೊಂದು ಗಾಸಿಪ್​ ಹರಡುವುದು ತಪ್ಪುತ್ತಿಲ್ಲ.

ಇದನ್ನೂ ಓದಿ
Image
Pushpa 2: ರಶ್ಮಿಕಾ ಮಂದಣ್ಣ ಪಾತ್ರ ಸಾಯುತ್ತೆ ಅನ್ನೋದು ನಿಜವೇ? ‘ಪುಷ್ಪ 2’ ನಿರ್ಮಾಪಕರು​ ನೀಡಿದ ಪ್ರತಿಕ್ರಿಯೆ ಇಲ್ಲಿದೆ..
Image
Rashmika Mandanna: ರಶ್ಮಿಕಾ ಮಂದಣ್ಣ ಗುಟ್ಟಾಗಿ ‘777 ಚಾರ್ಲಿ’ ನೋಡಿದ್ರಾ? ಜನರ ಅನುಮಾನಕ್ಕೆ ಕಾರಣ ಆಗಿದೆ ಈ ವಿಡಿಯೋ
Image
ಅತಿ ಹೆಚ್ಚು ಸಂಬಳ ಪಡೆಯುವ ದಕ್ಷಿಣ ಭಾರತದ ಟಾಪ್​ 10 ನಟಿಯರು ಇವರು; ರಶ್ಮಿಕಾ, ಸಮಂತಾ ಸಂಭಾವನೆ ಎಷ್ಟು?
Image
ರಶ್ಮಿಕಾ ಮಂದಣ್ಣ ಹೊಸ ವಿಡಿಯೋ ವೈರಲ್​; ಎನರ್ಜಿ ಕಂಡು ವಾವ್​ ಎಂದ ಅಭಿಮಾನಿಗಳು

ಮೊದಲ ಪಾರ್ಟ್​ನಲ್ಲಿ ರಕ್ತಚಂದನದ ಕಳ್ಳ ಸಾಗಾಣಿಕೆ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಕಥಾನಾಯಕ ಪುಷ್ಪರಾಜ್​ ಮುಂದಿನ ದಿನಗಳಲ್ಲಿ ತನ್ನ ವ್ಯಾಪ್ತಿಯನ್ನು ವಿದೇಶಕ್ಕೂ ವಿಸ್ತರಿಸಿಕೊಳ್ಳುತ್ತಾನೆ. ವಿದೇಶದಲ್ಲೂ ಬೆಲೆ ಬಾಳುವ ಮರಗಳ ಸ್ಮಗ್ಲಿಂಗ್​ ಮಾಡುತ್ತಾನೆ. ಹಾಗಾಗಿ ‘ಪುಷ್ಪ 2’ ಸಿನಿಮಾದ ದೃಶ್ಯಗಳು ವಿದೇಶದಲ್ಲಿ ಚಿತ್ರೀಕರಿಸಲ್ಪಡುತ್ತವೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Sukumar: ‘ಪುಷ್ಪ’ ನೋಡಿ ಸುಕುಮಾರ್​ಗೆ ಮೆಸೇಜ್​ ಮಾಡಿದ ‘3 ಈಡಿಯಟ್ಸ್​’ ನಿರ್ದೇಶಕ ರಾಜ್​ಕುಮಾರ್​ ಹಿರಾನಿ

ಪ್ರಶಾಂತ್ ನೀಲ್ ಜತೆ ಸ್ಪರ್ಧೆಗೆ ಇಳಿಯಲಿದ್ದಾರೆ ‘ಪುಷ್ಪ 2’ ನಿರ್ದೇಶಕ ಸುಕುಮಾರ್​; ಗೆಲ್ಲೋದು ಯಾರು?

Published On - 8:31 am, Fri, 24 June 22

ಕಿರೀಟಿ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂದಿಕೊಂಡಿದ್ವಿ: ರವಿಚಂದ್ರನ್
ಕಿರೀಟಿ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂದಿಕೊಂಡಿದ್ವಿ: ರವಿಚಂದ್ರನ್
ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ