Pushpa 2: ರಶ್ಮಿಕಾ ಮಂದಣ್ಣ ಪಾತ್ರ ಸಾಯುತ್ತೆ ಅನ್ನೋದು ನಿಜವೇ? ‘ಪುಷ್ಪ 2’ ನಿರ್ಮಾಪಕರು​ ನೀಡಿದ ಪ್ರತಿಕ್ರಿಯೆ ಇಲ್ಲಿದೆ..

Rashmika Mandanna | Pushpa 2: ‘ಪುಷ್ಪ 2’ ಚಿತ್ರದಲ್ಲಿ ಕಥಾನಾಯಕಿಯ ಪಾತ್ರವನ್ನು ಅಂತ್ಯಗೊಳಿಸಿ, ಬೇರೆ ಏನೋ ಟ್ವಿಸ್ಟ್​ ನೀಡಲು ಪ್ಲ್ಯಾನ್​ ಮಾಡಲಾಗಿದೆ ಎಂಬ ಗಾಸಿಪ್​ ಹಬ್ಬಿತ್ತು. ಅದನ್ನು ನಿರ್ಮಾಪಕರು ತಳ್ಳಿ ಹಾಕಿದ್ದಾರೆ.

Pushpa 2: ರಶ್ಮಿಕಾ ಮಂದಣ್ಣ ಪಾತ್ರ ಸಾಯುತ್ತೆ ಅನ್ನೋದು ನಿಜವೇ? ‘ಪುಷ್ಪ 2’ ನಿರ್ಮಾಪಕರು​ ನೀಡಿದ ಪ್ರತಿಕ್ರಿಯೆ ಇಲ್ಲಿದೆ..
ರಶ್ಮಿಕಾ ಮಂದಣ್ಣ
Follow us
TV9 Web
| Updated By: ಮದನ್​ ಕುಮಾರ್​

Updated on:Jun 22, 2022 | 9:56 AM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಬಹುಬೇಡಿಕೆಯ ಹೀರೋಯಿನ್​ ಆಗಿ ಗುರುತಿಸಿಕೊಂಡಿದ್ದಾರೆ. ಅವರ ಬಗ್ಗೆ ಪ್ರತಿದಿನವೂ ಒಂದಿಲ್ಲೊಂದು ಸುದ್ದಿ ಪ್ರಕಟ ಆಗುತ್ತದೆ. ಅದರ ಜೊತೆಗೆ ಕೇಳಿಬರುವ ಗಾಸಿಪ್​ಗಳಿಗೂ ಲೆಕ್ಕವಿಲ್ಲ. ಸದ್ಯ ರಶ್ಮಿಕಾ ಮಂದಣ್ಣ ಕೈಯಲ್ಲಿ ಹಲವು ಸಿನಿಮಾಗಳಿವೆ. ಆ ಪೈಕಿ ‘ಪುಷ್ಪ 2’ ಚಿತ್ರ ಹೆಚ್ಚು ಹೈಪ್​ ಸೃಷ್ಟಿ ಮಾಡಿದೆ. ‘ಪುಷ್ಪ’ (Pushpa) ಚಿತ್ರ ಸೂಪರ್​ ಹಿಟ್​ ಆಗಿದ್ದರಿಂದ ಈಗ ಅದರ ಎರಡನೇ ಪಾರ್ಟ್​ ಮೇಲೆ ನಿರೀಕ್ಷೆ ಮೂಡಿದೆ. ಆದರೆ ಇತ್ತೀಚೆಗೆ ಒಂದು ಸುದ್ದಿ ಹರಿದಾಡಿತ್ತು. ‘ಪುಷ್ಪ 2’ (Pushpa 2) ಸಿನಿಮಾದ ಕಥೆಯ ಆರಂಭದಲ್ಲೇ ರಶ್ಮಿಕಾ ಮಂದಣ್ಣ ಅವರ ಪಾತ್ರ ಸಾಯುತ್ತದೆ ಎಂದು ಗಾಸಿಪ್​ ಹಬ್ಬಿಸಲಾಗಿತ್ತು. ಅದಕ್ಕೆ ಈಗ ಚಿತ್ರತಂಡದ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಅದನ್ನು ಕೇಳಿ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

ಅಲ್ಲು ಅರ್ಜುನ್​ ನಟನೆಯ ‘ಪುಷ್ಪ 2’ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಗೆಲ್ಲಿಸಲೇಬೇಕು ಎಂಬ ಒತ್ತಡ ನಿರ್ದೇಶಕ ಸುಕುಮಾರ್​ ಅವರ ಮೇಲಿದೆ. ಅದಕ್ಕಾಗಿ ಅವರು ಕಥೆಯಲ್ಲಿ ಒಂದಷ್ಟು ಮಾರ್ಪಾಡು ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅದರಿಂದ ಕಥಾನಾಯಕಿಯ ಪಾತ್ರವನ್ನು ಅಂತ್ಯಗೊಳಿಸಿ, ಬೇರೆ ಏನೋ ಟ್ವಿಸ್ಟ್​ ನೀಡಲು ಅವರು ಪ್ಲ್ಯಾನ್​ ಮಾಡಿಕೊಂಡಿದ್ದಾರೆ ಎಂಬ ಗಾಸಿಪ್​ ಹಬ್ಬಿತ್ತು. ಅದನ್ನು ನಿರ್ಮಾಪಕರು ತಳ್ಳಿ ಹಾಕಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಗುಟ್ಟಾಗಿ ‘777 ಚಾರ್ಲಿ’ ನೋಡಿದ್ರಾ? ಜನರ ಅನುಮಾನಕ್ಕೆ ಕಾರಣ ಆಗಿದೆ ಈ ವಿಡಿಯೋ

ಇದನ್ನೂ ಓದಿ
Image
ಪ್ರಶಾಂತ್ ನೀಲ್ ಜತೆ ಸ್ಪರ್ಧೆಗೆ ಇಳಿಯಲಿದ್ದಾರೆ ‘ಪುಷ್ಪ 2’ ನಿರ್ದೇಶಕ ಸುಕುಮಾರ್​; ಗೆಲ್ಲೋದು ಯಾರು?
Image
ಅಬ್ಬಬ್ಬಾ.. ‘ಪುಷ್ಪ 2’ ಸಿನಿಮಾದ ನಿರ್ದೇಶನಕ್ಕೆ ಸುಕುಮಾರ್​ ಪಡೆಯುವ ಸಂಭಾವನೆ ಇಷ್ಟೊಂದಾ?
Image
‘ಕೆಜಿಎಫ್ 2’ ಎಫೆಕ್ಟ್​; ಹೆಚ್ಚಿತು ‘ಪುಷ್ಪ 2’ ಚಿತ್ರದ ಬೇಡಿಕೆ, ಶೂಟಿಂಗ್​ಗೂ​ ಮೊದಲೇ 700 ಕೋಟಿ ರೂಪಾಯಿ ಡೀಲ್
Image
‘ಪುಷ್ಪ 2’ ಚಿತ್ರದ ಬಗ್ಗೆ ಮೂಡಿದೆ ಎರಡು ಅನುಮಾನ; ಇದಕ್ಕೆಲ್ಲ ಕಾರಣ ಅಲ್ಲು ಅರ್ಜುನ್​ ಹೊಸ ಲುಕ್​

‘ಆ ರೀತಿಯ ಎಲ್ಲ ವರದಿಗಳು ಬರೀ ಗಾಸಿಪ್​ ಮಾತ್ರ. ಕೇವಲ ನಾನ್​ ಸೆನ್ಸ್​. ಈ ಸಂದರ್ಭದಲ್ಲಿ ಕಥೆ ಬಗ್ಗೆ ಯಾರಿಗೂ ಏನೂ ತಿಳಿದಿಲ್ಲ. ಹಾಗಾಗಿ ಏನೇ ಬರೆದರೂ ಜನರು ನಂಬುತ್ತಾರೆ. ಆದರೆ ಅದೆಲ್ಲವೂ ಊಹಾಪೋಹ’ ಎಂದು ‘ಪುಷ್ಪ 2’ ಸಿನಿಮಾ ನಿರ್ಮಾಪಕ ವೈ ರವಿಶಂಕರ್​ ಹೇಳಿದ್ದಾರೆ ಎಂದು ‘ಪಿಂಕ್​ವಿಲ್ಲಾ’ ವರದಿ ಮಾಡಿದೆ.

ವಿದೇಶದಲ್ಲಿ ‘ಪುಷ್ಪ 2’ ಶೂಟಿಂಗ್​?

ಮೂಲಗಳ ಪ್ರಕಾರ, ನಿರ್ದೇಶಕ ಸುಕುಮಾರ್​ ಅವರು ‘ಪುಷ್ಪ 2’ ಸಿನಿಮಾದ ಕೆಲವು ದೃಶ್ಯಗಳನ್ನು ವಿದೇಶದಲ್ಲಿ ಚಿತ್ರೀಕರಿಸಲಿದ್ದಾರೆ. ಅದಕ್ಕೆ ಕಾರಣ ಇಷ್ಟೇ.. ರಕ್ತಚಂದನದ ಕಳ್ಳ ಸಾಗಾಣಿಕೆ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಕಥಾನಾಯಕ ಪುಷ್ಪರಾಜ್​ ಮುಂದಿನ ದಿನಗಳಲ್ಲಿ ತನ್ನ ವ್ಯಾಪ್ತಿಯನ್ನು ವಿದೇಶಕ್ಕೂ ವಿಸ್ತರಿಸಿಕೊಳ್ಳುತ್ತಾನೆ. ವಿದೇಶದಲ್ಲೂ ಬೆಲೆ ಬಾಳುವ ಮರಗಳ ಸ್ಮಗ್ಲಿಂಗ್​ ಮಾಡುತ್ತಾನೆ. ಹಾಗಾಗಿ ‘ಪುಷ್ಪ 2’ ಸಿನಿಮಾದ ದೃಶ್ಯಗಳು ವಿದೇಶದಲ್ಲಿ ಚಿತ್ರೀಕರಿಸಲ್ಪಡುತ್ತವೆ ಎನ್ನಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:56 am, Wed, 22 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ