Rashmika Mandanna: ರಶ್ಮಿಕಾ ಮಂದಣ್ಣ ಗುಟ್ಟಾಗಿ ‘777 ಚಾರ್ಲಿ’ ನೋಡಿದ್ರಾ? ಜನರ ಅನುಮಾನಕ್ಕೆ ಕಾರಣ ಆಗಿದೆ ಈ ವಿಡಿಯೋ

Rakshit Shetty | 777 Charlie: ‘777 ಚಾರ್ಲಿ’ ನೋಡಿದ ನಂತರ ಅನೇಕರು ತಮ್ಮ ಸಾಕುನಾಯಿಯ ಜೊತೆ ಭಾವುಕವಾಗಿ ವಿಡಿಯೋ ಹಂಚಿಕೊಂಡಿದ್ದಾರೆ. ಅದೇ ರೀತಿ ರಶ್ಮಿಕಾ ಮಂದಣ್ಣ ಕೂಡ ವಿಡಿಯೋ ಪೋಸ್ಟ್​ ಮಾಡಿರಬಹುದು ಎಂಬುದು ಹಲವರ ಊಹೆ.

Rashmika Mandanna: ರಶ್ಮಿಕಾ ಮಂದಣ್ಣ ಗುಟ್ಟಾಗಿ ‘777 ಚಾರ್ಲಿ’ ನೋಡಿದ್ರಾ? ಜನರ ಅನುಮಾನಕ್ಕೆ ಕಾರಣ ಆಗಿದೆ ಈ ವಿಡಿಯೋ
ರಶ್ಮಿಕಾ ಮಂದಣ್ಣ, ರಕ್ಷಿತ್ ಶೆಟ್ಟಿ
TV9kannada Web Team

| Edited By: Madan Kumar

Jun 18, 2022 | 8:11 AM

ರಕ್ಷಿತ್​ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ (777 Charlie) ಎಲ್ಲ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಯ ಪ್ರೇಕ್ಷಕರು ಕೂಡ ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ಈ ಚಿತ್ರಕ್ಕೆ ಫಿದಾ ಆಗಿದ್ದಾರೆ. ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಅನೇಕ ರಾಜಕಾರಣಿಗಳಿಗೂ ‘777 ಚಾರ್ಲಿ’ ಇಷ್ಟ ಆಗಿದೆ. ಎಲ್ಲರೂ ರಕ್ಷಿತ್​ ಶೆಟ್ಟಿ (Rakshit Shetty) ಮತ್ತು ಅವರ ಚಿತ್ರತಂಡವನ್ನು ಹೊಗಳುತ್ತಿದ್ದಾರೆ. ಈ ನಡುವೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಕೂಡ ಈ ಸಿನಿಮಾ ನೋಡಿದ್ರಾ? ಹೀಗೊಂದು ಅನುಮಾನ ನೆಟ್ಟಿಗರಲ್ಲಿ ಮೂಡಿದೆ. ಅದಕ್ಕೆ ಕಾರಣ ಆಗಿರುವುದು ಒಂದು ವಿಡಿಯೋ. ಯಾವುದದು ವಿಡಿಯೋ? ಈ ಸ್ಟೋರಿಯಲ್ಲಿದೆ ವಿವರ..

ರಶ್ಮಿಕಾ ಮಂದಣ್ಣ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಈ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಶೂಟಿಂಗ್​ ಬಿಡುವಿನಲ್ಲಿ ತಮ್ಮ ಮುದ್ದಾದ ಸಾಕುನಾಯಿ ಜೊತೆ ಅವರು ಕಾಲ ಕಳೆಯುತ್ತಿದ್ದಾರೆ. ಈ ಶ್ವಾನದ ಹೆಸರು ಔರಾ. ಇದನ್ನು ಕಂಡರೆ ರಶ್ಮಿಕಾ ಅವರಿಗೆ ಎಲ್ಲಿಲ್ಲದ ಪ್ರೀತಿ. ‘777 ಚಾರ್ಲಿ’ ಸಿನಿಮಾದಲ್ಲಿ ಬರುವ ಧರ್ಮ ಮತ್ತು ಚಾರ್ಲಿ ಪಾತ್ರಗಳ ರೀತಿಯೇ ರಿಯಲ್​ ಲೈಫ್​ನಲ್ಲಿ ರಶ್ಮಿಕಾ ಮತ್ತು ಔರಾ ನಡುವೆ ಬೆಟ್ಟದಷ್ಟು ಪ್ರೀತಿ ಇದೆ.

ಇದನ್ನೂ ಓದಿ: Tejasvi Surya: ‘777 ಚಾರ್ಲಿ’ ನೋಡಿದ ತೇಜಸ್ವಿ ಸೂರ್ಯ; ರಕ್ಷಿತ್​ ಶೆಟ್ಟಿ ಸಿನಿಮಾ ಬಗ್ಗೆ ಸಂಸದ ನೀಡಿದ ವಿಮರ್ಶೆ ಇಲ್ಲಿದೆ..

ಔರಾ ಶ್ವಾನವನ್ನು ರಶ್ಮಿಕಾ ಮಂದಣ್ಣ ಅವರು ಮುದ್ದಿಸುತ್ತಿರುವ ದೃಶ್ಯ ಈ ವಿಡಿಯೋದಲ್ಲಿ ಇದೆ. ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 33 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಿಣೆಗೆ ಒಳಪಟ್ಟಿದೆ. 7 ಲಕ್ಷಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ. 4 ಸಾವಿರಕ್ಕಿಂತ ಹೆಚ್ಚು ಕಮೆಂಟ್​ಗಳು ಬಂದಿವೆ. ‘777 ಚಾರ್ಲಿ ಸಿನಿಮಾ ನೋಡಿದ ಮೇಲೆ ರಶ್ಮಿಕಾ ಈ ರೀತಿ ಮಾಡುತ್ತಿದ್ದಾರೆ’ ಎಂದು ಹಲವರು ಕಮೆಂಟ್​ ಮಾಡಿದ್ದಾರೆ. ‘ನೀವು 777 ಚಾರ್ಲಿ ಸಿನಿಮಾ ನೋಡಿದ್ರಾ? ಏನು ಇಷ್ಟ ಆಯ್ತು’ ಎಂದು ಕೂಡ ಜನರು ಪ್ರಶ್ನೆ ಮಾಡಿದ್ದಾರೆ. ಸದ್ಯ ಇದಕ್ಕೆಲ್ಲ ರಶ್ಮಿಕಾ ಉತ್ತರ ನೀಡಿಲ್ಲ.

‘777 ಚಾರ್ಲಿ’ ಸಿನಿಮಾ ನೋಡಿದ ನಂತರ ಅನೇಕರು ತಮ್ಮ ಸಾಕುನಾಯಿಯ ಜೊತೆ ಭಾವುಕವಾಗಿ ವಿಡಿಯೋ ಹಂಚಿಕೊಂಡಿದ್ದಾರೆ. ಅದೇ ರೀತಿ ರಶ್ಮಿಕಾ ಕೂಡ ವಿಡಿಯೋ ಪೋಸ್ಟ್​ ಮಾಡಿರಬಹುದು ಎಂಬುದು ಹಲವರ ಊಹೆ. ಗಮನಿಸಬೇಕಾದ ಅಂಶ ಎಂದರೆ ರಶ್ಮಿಕಾ ಅವರು ಮುಂಚಿನಿಂದಲೂ ಶ್ವಾನಪ್ರಿಯೆ. ಈ ಮೊದಲು ಕೂಡ ಅವರು ಇಂಥ ಹಲವು ವಿಡಿಯೋ ಮತ್ತು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada