ಪ್ರಭಾಸ್​ ವರ್ಸಸ್​ ಪ್ರಭಾಸ್​: ‘ಸಲಾರ್​’ ಚಿತ್ರದಲ್ಲಿ ಡಬಲ್​ ರೋಲ್​ ಮಾಡಿಸುತ್ತಾರಾ ಪ್ರಶಾಂತ್​ ನೀಲ್​?

Salaar | Prabhas: ‘ಸಲಾರ್​’ ಸಿನಿಮಾದ ಕಥೆ ಬಗ್ಗೆ ಜನರಿಗೆ ಎಲ್ಲಿಲ್ಲದ ಕುತೂಹಲ ಇದೆ. ಕೆಲವು ವರದಿಗಳ ಪ್ರಕಾರ ಈ ಚಿತ್ರದಲ್ಲಿ ಪ್ರಭಾಸ್​ ಅವರಿಗೆ ದ್ವಿಪಾತ್ರ ಇದೆ ಎನ್ನಲಾಗುತ್ತಿದೆ.

ಪ್ರಭಾಸ್​ ವರ್ಸಸ್​ ಪ್ರಭಾಸ್​: ‘ಸಲಾರ್​’ ಚಿತ್ರದಲ್ಲಿ ಡಬಲ್​ ರೋಲ್​ ಮಾಡಿಸುತ್ತಾರಾ ಪ್ರಶಾಂತ್​ ನೀಲ್​?
ಪ್ರಭಾಸ್
TV9kannada Web Team

| Edited By: Madan Kumar

Jun 18, 2022 | 1:03 PM

ಖ್ಯಾತ ನಿರ್ದೇಶಕ ಪ್ರಶಾಂತ್​ ನೀಲ್ (Prashanth Neel) ಅವರ ಮುಂದಿನ ಸಿನಿಮಾಗಳ ಬಗ್ಗೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆದ ನಂತರ ಅವರ ಜನಪ್ರಿಯತೆ ವಿಶ್ವಾದ್ಯಂತ ಹಬ್ಬಿದೆ. ಪ್ರಸ್ತುತ ಅವರು ‘ಸಲಾರ್​’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಬಳಿಕ ಜ್ಯೂ. ಎನ್​ಟಿಆರ್​ ನಟನೆಯ ಸಿನಿಮಾದ ಶೂಟಿಂಗ್​  ಶುರುಮಾಡಲಿದ್ದಾರೆ. ಪ್ರಭಾಸ್​ (Prabhas) ಅವರಿಗೆ ‘ಸಲಾರ್​’ ಚಿತ್ರ ತುಂಬ ಮಹತ್ವದ್ದಾಗಿದೆ. ಯಾಕೆಂದರೆ, ‘ಬಾಹುಬಲಿ 2’ ಬಳಿಕ ಅವರ ಯಾವ ಸಿನಿಮಾವೂ ಗೆದ್ದಿಲ್ಲ. ‘ಸಾಹೋ’, ‘ರಾಧೆ ಶ್ಯಾಮ್​’ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಸೋತವು. ಈಗ ಅವರಿಗೆ ತುರ್ತಾಗಿ ಒಂದು ಗೆಲುವಿನ ಅನಿವಾರ್ಯತೆ ಇದೆ. ಅದಕ್ಕಾಗಿ ಅವರು ‘ಸಲಾರ್​’ (Salaar) ಮೇಲೆ ಹೆಚ್ಚು ಭರವಸೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಅನೇಕ ಗಾಸಿಪ್​ಗಳು ಕೇಳಿಬರುತ್ತಿವೆ.

‘ಸಲಾರ್​’ ಸಿನಿಮಾದ ಕಥೆ ಬಗ್ಗೆ ಜನರಿಗೆ ಎಲ್ಲಿಲ್ಲದ ಕುತೂಹಲ ಇದೆ. ಕೆಲವರು ಇದನ್ನು ‘ಉಗ್ರಂ’ ಸಿನಿಮಾದ ರಿಮೇಕ್​ ಎಂದು ಊಹಿಸಿದ್ದಾರೆ. ಇನ್ನೂ ಕೆಲವರು ಕೇಳುವ ಪ್ರಕಾರ ಈ ಚಿತ್ರದಲ್ಲಿ ಪ್ರಭಾಸ್​ ಅವರಿಗೆ ದ್ವಿಪಾತ್ರ ಇದೆಯಂತೆ! ಇಂಥದ್ದೊಂದು ಗಾಸಿಪ್​ ಈಗ ಎಲ್ಲೆಡೆ ಹರಡಿದೆ. ಅದು ನಿಜವೋ ಸುಳ್ಳೋ ಎಂಬ ಬಗ್ಗೆ ಚಿತ್ರತಂಡದಿಂದ ಸ್ಪಷ್ಟನೆ ಸಿಕ್ಕಿಲ್ಲ. ಅದಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಇದನ್ನೂ ಓದಿ: ‘ಕೆಜಿಎಫ್​ 2’ ಚಿತ್ರದ ಮುಂದುವರಿದ ಭಾಗವೇ ‘ಸಲಾರ್​’? ‘ಕೆಜಿಎಫ್​ 3’ ಪ್ರಶ್ನೆಗೆ ಉತ್ತರ ಹುಡುಕಿದ ಫ್ಯಾನ್ಸ್​

ದ್ವಿಪಾತ್ರ ಎಂದರೆ ಇದು ಸಾಮಾನ್ಯವಾದದ್ದಲ್ಲ. ಎರಡರಲ್ಲಿ ಒಂದು ಪಾತ್ರಕ್ಕಾಗಿ ಪ್ರಭಾ​ಸ್​ ಅವರು 22 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ. ಇನ್ನೊಂದು ಪಾತ್ರಕ್ಕಾಗಿ ಅವರೀಗ ತೂಕ ಇಳಿಸಿಕೊಳ್ಳುತ್ತಿದ್ದಾರೆ. ಈ ಎರಡು ಪಾತ್ರಗಳು ಸಿನಿಮಾದಲ್ಲಿ ಮುಖಾಮುಖಿ ಆಗಲಿವೆ. ಇಬ್ಬರ ನಡುವೆ ಕಾಳಗ ನಡೆಯಲಿದೆ. ಪ್ರಭಾಸ್​ ವರ್ಸಸ್​ ಪ್ರಭಾಸ್​ ಫೈಟ್​ ಮೂಲಕ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ಸಿಗಲಿದೆ ಎಂದೆಲ್ಲ ವರದಿ ಆಗಿದೆ. ಆದರೆ ಅಧಿಕೃತವಾಗಿ ಚಿತ್ರತಂಡದಿಂದ ಯಾರೊಬ್ಬರೂ ಈ ಕುರಿತು ಬಾಯಿ ಬಿಟ್ಟಿಲ್ಲದ ಕಾರಣ ಗಾಸಿಪ್​ಗೆ ಕಿವಿ ಕೊಡಬೇಕಾ ಅಥವಾ ಬಿಡಬೇಕಾ ಎಂಬುದು ಅಭಿಮಾನಿಗಳ ಆಯ್ಕೆಗೆ ಬಿಟ್ಟ ವಿಚಾರ.

ಇದನ್ನೂ ಓದಿ: ‘ಉಗ್ರಂ’ ಮತ್ತು ‘ಸಲಾರ್​’ ಕಥೆ ನಡುವೆ ಹೋಲಿಕೆ; ಎಲ್ಲ ಅನುಮಾನಗಳಿಗೆ ತೆರೆ ಎಳೆದ ಪ್ರಶಾಂತ್​ ನೀಲ್​

‘ಹೊಂಬಾಳೆ ಫಿಲ್ಮ್ಸ್​’ ಬ್ಯಾನರ್​ ಮೂಲಕ ವಿಜಯ್​ ಕಿರಗಂದೂರು ಅವರು ‘ಸಲಾರ್​’ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ ಬಳಗದ ಬಹುತೇಕ ತಂತ್ರಜ್ಞರು ಇದರಲ್ಲಿ ಕೆಲಸ ಮಾಡುತ್ತಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ, ಭುವನ್​ ಗೌಡ ಛಾಯಾಗ್ರಹಣ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada