‘ನನಗೂ-ನರೇಶ್ಗೂ ಡಿವೋರ್ಸ್ ಆಗಿಲ್ಲ’; ಮೂರನೇ ಹೆಂಡತಿ ರಮ್ಯಾ ರಘುಪತಿ ಮಾತು
ತೆಲುಗು ನಟ ನರೇಶ್ ಅವರು ಸದ್ಯ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರ ನಾಲ್ಕನೇ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವದಂತಿಗಳು ಹರಿದಾಡುತ್ತಿವೆ.
ತೆಲುಗು ನಟ ನರೇಶ್ (Naresh) ಅವರು ಸದ್ಯ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರ ನಾಲ್ಕನೇ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ಆದರೆ, ಈ ಬಗ್ಗೆ ಅವರು ಅಧಿಕೃತವಾಗಿ ಸ್ಪಷ್ಟನೆ ನೀಡಿಲ್ಲ. ಅವರ ಮೂರನೇ ಪತ್ನಿ ರಮ್ಯಾ ರಘುಪತಿ (Ramya Raghupathi) ಜತೆ ನರೇಶ್ ವಿಚ್ಛೇದನ ಪಡೆದಿದ್ದಾರೆ ಎನ್ನಲಾಗಿತ್ತು. ಆದರೆ, ಇದನ್ನು ರಮ್ಯಾ ಅಲ್ಲಗಳೆದಿದ್ದಾರೆ. ‘ನನ್ನಿಂದ ನರೇಶ್ ದೂರ ಹೋಗಿದ್ದಾರೆ ನಿಜ. ಆದರೆ, ಕಾನೂನಾತ್ಮಕವಾಗಿ ನಮ್ಮ ನಡುವೆ ಪತಿ-ಪತ್ನಿ ಸಂಬಂಧ ಇದೆ. ಆದರೆ, ಈಗ ಅವರು ಡಿವೋರ್ಸ್ ಲೆಟರ್ ಕಳುಹಿಸಿದ್ದಾರೆ. ಇದಕ್ಕೆ ನಾನು ಕಾನೂನಾತ್ಮಕವಾಗಿ ಉತ್ತರಿಸಬೇಕು ಎಂದು ರಮ್ಯಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Pavitra Lokesh: ಸೈಬರ್ ಠಾಣೆ ಮೆಟ್ಟಿಲೇರಿದ ನಟಿ ಪವಿತ್ರಾ ಲೋಕೇಶ್; ಗಾಸಿಪ್ ಹಬ್ಬಿಸಿದವರ ವಿರುದ್ಧ ಕಾನೂನು ಸಮರ
ಪವಿತ್ರಾ ಲೋಕೇಶ್ ನಮ್ಮ ಮನೆಗೆ ಬಂದಾಗ ಬೆಳ್ಳಿ ತಟ್ಟೆಯಲ್ಲಿ ಊಟ ಹಾಕಿದ್ವಿ; ನರೇಶ್ ಹೆಂಡತಿಯ ಮಾತು

