ಇದು ಸದ್ಯಕ್ಕೆ ಗಾಸಿಪ್
‘ಪವಿತ್ರಾ ಹಾಗೂ ಲೋಕೇಶ್ ಮದುವೆ ಆಗಿದ್ದಾರೆ ಎಂಬ ವಿಚಾರ ಹರಿದಾಡುತ್ತಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ. ಇದನ್ನು ಅವರು ಖಚಿತಪಡಿಸಿಲ್ಲ. ಹೀಗಾಗಿ, ವದಂತಿಯನ್ನು ಸುದ್ದಿ ಎಂದು ಹೇಳಲು ಸಾಧ್ಯವಿಲ್ಲ’ ಎನ್ನುತ್ತಾರೆ ರಮ್ಯಾ.
ನನಗೆ ವಿಚ್ಛೇದನ ಆಗಿಲ್ಲ
ನರೇಶ್ ಹಾಗೂ ಅವರ ಮೂರನೇ ಹೆಂಡತಿ ರಮ್ಯಾ ರಘುಪತಿ ನಡುವೆ ವಿಚ್ಛೇದನ ಆಗಿದೆ ಎನ್ನಲಾಗಿತ್ತು. ಆದರೆ, ಈ ವಿಚಾರವನ್ನು ರಮ್ಯಾ ತಳ್ಳಿ ಹಾಕಿದ್ದಾರೆ. ‘2010ರಲ್ಲಿ ನಾನು ನರೇಶ್ ಅವರನ್ನು ಮದುವೆ ಆದೆ. ನಮ್ಮ ಮಗನಿಗೆ ಈಗ 9 ವರ್ಷ. ನರೇಶ್ ಹಾಗೂ ನನ್ನ ನಡುವೆ ಪತಿ-ಪತ್ನಿ ಸಂಬಂಧ ಇದೆ. ಅವರು ಈಗ ನನಗೆ ಡಿವೋರ್ಸ್ ಲೆಟರ್ ಕಳುಹಿಸಿದ್ದಾರೆ. ನಾನು ಕಾನೂನಾತ್ಮಕವಾಗಿ ಹೋರಾಡಬೇಕಿದೆ’ ಎಂದು ರಮ್ಯಾ ಅವರು ಮಾಹಿತಿ ನೀಡಿದ್ದಾರೆ.
ಪವಿತ್ರಾಗೆ ಊಟ ಬಡಿಸಿದ್ದೆ
ಪವಿತ್ರಾ ಲೋಕೇಶ್ ಅವರು ತಮ್ಮ ಮನೆಗೆ ಬಂದ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ‘ನಾಲ್ಕು ವರ್ಷಗಳ ಹಿಂದೆ ಪವಿತ್ರಾ ಲೋಕೇಶ್ ಅವರು ನಮ್ಮ ಮನೆಗೆ ಬಂದಿದ್ದರು. ಈ ವೇಳೆ ನಾವು ಅವರಿಗೆ ಬೆಳ್ಳಿ ತಟ್ಟೆಯಲ್ಲಿ ಊಟ ಹಾಕಿದ್ದೆವು’ ಎಂದು ಅವರು ಮಾಹಿತಿ ನೀಡಿದ್ದಾರೆ.
ನರೇಶ್ ಸುಳ್ಳುಬುರುಕ
‘ನರೇಶ್ ನನ್ನ ಕೈಯಲ್ಲಿ ಅನೇಕ ಬಾರಿ ಸಿಕ್ಕಿ ಬಿದ್ದಿದ್ದಾರೆ. ಪ್ರತಿ ಬಾರಿ ಸಿಕ್ಕಿ ಬಿದ್ದಾಗಲೂ ತಪ್ಪೊಪ್ಪಿಕೊಳ್ಳುತ್ತಿದ್ದರು. ಮತ್ತೆ ಮೊದಲಿನಂತೆ ಆಗುತ್ತಿದ್ದರು. ನಾನು ಅದೇ ಮನೆಯಲ್ಲೇ ಇದ್ದೇನೆ. ಅವರೇ ನಮ್ಮ ಮನೆ ಬಿಟ್ಟು ಹೋಗಿದ್ದಾರೆ’ ಎಂದಿದ್ದಾರೆ ರಮ್ಯಾ.
ಇದನ್ನೂ ಓದಿ: ‘ಕೆಜಿಎಫ್ 2’ ಯಶಸ್ಸು ನೋಡಿ ಮನಸ್ಸು ಬದಲಿಸಿದ ‘ಪುಷ್ಪ 2’ ತಂಡ; ನೂರಾರು ಕೋಟಿ ಕೊಟ್ಟರೂ ಒಪ್ಪಲಿಲ್ಲ ನಿರ್ಮಾಪಕರು?
Pavitra Lokesh: ಸೈಬರ್ ಠಾಣೆ ಮೆಟ್ಟಿಲೇರಿದ ನಟಿ ಪವಿತ್ರಾ ಲೋಕೇಶ್; ಗಾಸಿಪ್ ಹಬ್ಬಿಸಿದವರ ವಿರುದ್ಧ ಕಾನೂನು ಸಮರ