ಅಲ್ಲು ಅರ್ಜುನ್​ಗೆ ಬಾಡಿ ಶೇಮಿಂಗ್; ‘ವಡಾಪಾವ್ ಲುಕ್​’ ಎಂದು ಟೀಕಿಸಿದ ಫ್ಯಾನ್ಸ್​

ಹೀರೋಗಳು ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಈಗ ಅಲ್ಲು ಅರ್ಜುನ್ ಕೂಡ ಸಿನಿಮಾ ಉದ್ದೇಶದಿಂದಲೇ ತೂಕ ಹೆಚ್ಚಿಸಿಕೊಂಡರಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

ಅಲ್ಲು ಅರ್ಜುನ್​ಗೆ ಬಾಡಿ ಶೇಮಿಂಗ್; ‘ವಡಾಪಾವ್ ಲುಕ್​’ ಎಂದು ಟೀಕಿಸಿದ ಫ್ಯಾನ್ಸ್​
ಅಲ್ಲು ಅರ್ಜುನ್ (Credit: Manav Manglani)
Image Credit source: Manav Manglani
TV9kannada Web Team

| Edited By: Rajesh Duggumane

Jun 26, 2022 | 11:34 AM

ನಟ ಅಲ್ಲು ಅರ್ಜುನ್ (Allu Arjun) ಅವರು ಸದಾ ಫಿಟ್​ನೆಸ್​ಗೆ ಪ್ರಾಮುಖ್ಯತೆ ಕೊಡುವ ಹೀರೋ. ಅವರು ಫಿಟ್​​ನೆಸ್ ಕಾಯ್ದುಕೊಳ್ಳೋಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಹೈದರಾಬಾದ್​ನಲ್ಲಿ ಸ್ಟುಡಿಯೋ ಒಂದರಿಂದ ಅವರು ಹೊರ ಬರುವಾಗ ಕ್ಲಿಕ್ ಮಾಡಿದ ಫೋಟೋಗಳು ವೈರಲ್ ಆಗಿವೆ. ಇದರಲ್ಲಿ ಅಲ್ಲು ಅರ್ಜುನ್​ ಸಾಕಷ್ಟು ತೂಕ ಹೆಚ್ಚಿಸಿಕೊಂಡಂತೆ ಕಂಡು ಬಂದಿದೆ. ಇದನ್ನು ಕೆಲವರು ‘ವಡಾಪಾವ್​ ಲುಕ್​’ ಎಂದು ಹೀಯಾಳಿಸಿದ್ದಾರೆ. ಇನ್ನೂ ಕೆಲವರು ಇದು ‘ಪುಷ್ಪ 2’ ಚಿತ್ರದ (Pushpa 2 Movie) ಗೆಟಪ್ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಹೀರೋಗಳು ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಈಗ ಅಲ್ಲು ಅರ್ಜುನ್ ಕೂಡ ಸಿನಿಮಾ ಉದ್ದೇಶದಿಂದಲೇ ತೂಕ ಹೆಚ್ಚಿಸಿಕೊಂಡರಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಒಟ್ಟಿನಲ್ಲಿ ಅವರ ಹೊಸ ಲುಕ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಆಗುತ್ತಿರುವುದಂತೂ ನಿಜ.

ಅಲ್ಲು ಅರ್ಜುನ್ ಅವರ ನಟನೆಯ ‘ಪುಷ್ಪ’ ಸಿನಿಮಾ ಹಿಟ್ ಆಯಿತು. ಈ ಚಿತ್ರ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಚಿತ್ರದ ಪಾರ್ಟ್​ 2 ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಕಥೆಯಲ್ಲಿ ನಿರ್ದೇಶಕ ಸುಕುಮಾರ್ ಅವರು ಸಾಕಷ್ಟು ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಸಿನಿಮಾದ ಬಗ್ಗೆ ನಿತ್ಯ ಒಂದೊಂದು ವದಂತಿ ಹರಡುತ್ತಿರುವಾಗಲೇ ಅಲ್ಲು ಅರ್ಜುನ್ ಅವರು ತೂಕ ಏರಿಸಿಕೊಂಡಂತೆ ಕಂಡಿದ್ದಾರೆ.

ಅಲ್ಲು ಅರ್ಜುನ್ ಅವರು ಪುಷ್ಪರಾಜ್ ಆಗಿ ‘ಪುಷ್ಪ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎರಡನೇ ಪಾರ್ಟ್​ನಲ್ಲಿ ಸಿನಿಮಾ ಯಾವ ರೀತಿಯಲ್ಲಿ ಸಾಗಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದೆ. ಈ ಚಿತ್ರದ ಕಥೆ ವಿದೇಶದಲ್ಲಿ ಸಾಗಲಿದೆ, ರಶ್ಮಿಕಾ ಪಾತ್ರ ಆರಂಭದಲ್ಲೇ ಸಾಯಲಿದೆ ಹೀಗೆ ಹತ್ತು ಹಲವು ವದಂತಿಗಳು ಸಿನಿಮಾ ಬಗ್ಗೆ ಹರಿದಾಡುತ್ತಿದೆ.

ಜುಲೈ ತಿಂಗಳಿಂದ ‘ಪುಷ್ಪ 2’ ಶೂಟಿಂಗ್ ಆರಂಭ ಆಗಲಿದೆ ಎನ್ನುವ ಮಾತಿದೆ. ಈಗ ಅಲ್ಲು ಅರ್ಜುನ್ ಅವರು ಈ ರೀತಿ ಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದು ನೋಡಿದರೆ ಈಗಾಗಲೇ ಸಿನಿಮಾದ ಶೂಟಿಂಗ್ ಆರಂಭವಾಗಿರಬಹುದು ಎನ್ನುವ ಗುಮಾನಿ ಮೂಡಿದೆ. ತೂಕ ಹೆಚ್ಚಿಸಿಕೊಳ್ಳುವ ಉದ್ದೇಶದಿಂದಲೇ ಇಷ್ಟು ಗ್ಯಾಪ್ ನೀಡಲಾಯಿತೇ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಇದನ್ನೂ ಓದಿ: Pushpa 2: ರಶ್ಮಿಕಾ ಮಂದಣ್ಣ ಪಾತ್ರ ಸಾಯುತ್ತೆ ಅನ್ನೋದು ನಿಜವೇ? ‘ಪುಷ್ಪ 2’ ನಿರ್ಮಾಪಕರು​ ನೀಡಿದ ಪ್ರತಿಕ್ರಿಯೆ ಇಲ್ಲಿದೆ..

ಇದನ್ನೂ ಓದಿ

Pushpa 2: ಫಾರಿನ್​ ಹುಡುಗಿ ಜತೆ ಅಲ್ಲು ಅರ್ಜುನ್​​ ರೊಮ್ಯಾನ್ಸ್​; ‘ಪುಷ್ಪ 2’ ಚಿತ್ರದಲ್ಲಿ ರಶ್ಮಿಕಾ ಪಾತ್ರಕ್ಕೆ ಬೀಳುತ್ತಾ ಕತ್ತರಿ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada