ಮುಂಬೈನಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿದೆ ‘ಕೆಜಿಎಫ್ 2’; ಯಶ್ ಸಿನಿಮಾದ ಒಟ್ಟೂ ಗಳಿಕೆ ಎಷ್ಟು?

ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಸಿನಿಮಾ ಅಬ್ಬರಿಸುತ್ತಿದೆ. ಆದಾಗ್ಯೂ ಚಿತ್ರವನ್ನು ಕೆಲವರು ಥಿಯೇಟರ್​ನಲ್ಲಿ ವೀಕ್ಷಿಸುತ್ತಿದ್ದಾರೆ. ಅದೂ ಹಿಂದಿ ವರ್ಷನ್​ನಲ್ಲಿ ಅನ್ನೋದು ವಿಶೇಷ.

ಮುಂಬೈನಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿದೆ ‘ಕೆಜಿಎಫ್ 2’; ಯಶ್ ಸಿನಿಮಾದ ಒಟ್ಟೂ ಗಳಿಕೆ ಎಷ್ಟು?
ಯಶ್
TV9kannada Web Team

| Edited By: Rajesh Duggumane

Jun 26, 2022 | 9:15 AM

‘ಕೆಜಿಎಫ್ 2’ ಸಿನಿಮಾ (KGF: Chapter 2)  ತೆರೆಗೆ ಬಂದು ಎರಡೂವರೆ ತಿಂಗಳು ಕಳೆಯುತ್ತಾ ಬಂದಿದೆ. ಶೀಘ್ರವೇ ಈ ಚಿತ್ರ 100ನೇ ದಿನಕ್ಕೆ ಕಾಲಿಡಲಿದೆ. ಬೆಂಗಳೂರಿನಲ್ಲಿ ‘ಕೆಜಿಎಫ್ 2’ ಸಿನಿಮಾ ಪ್ರದರ್ಶನ ನಿಲ್ಲಿಸಿದೆ. ಈ ಚಿತ್ರ ಇತ್ತೀಚೆಗೆ ಒಟಿಟಿಗೆ ಲಗ್ಗೆ ಇಟ್ಟಿದೆ. ಹೀಗಾಗಿ, ಪ್ರೇಕ್ಷಕರು ಯಶ್ (Yash) ನಟನೆಯ ಈ ಚಿತ್ರವನ್ನು ಈಗ ಮನೆಯಲ್ಲೇ ಕುಳಿತು ಕಣ್ತುಂಬಿಕೊಳ್ಳುತ್ತಿದ್ದಾರೆ.  ಇನ್ನು, ‘777 ಚಾರ್ಲಿ’, ‘ವಿಕ್ರಮ್​’ ಸೇರಿ ಅನೇಕ ಚಿತ್ರಗಳು ತೆರೆಗೆ ಬಂದವು. ಈ ಎಲ್ಲಾ ಕಾರಣದಿಂದ ಬೆಂಗಳೂರಿನಲ್ಲಿ ‘ಕೆಜಿಎಫ್ 2’ ಪ್ರದರ್ಶನ ನಿಲ್ಲಿಸಿದೆ. ವಿಶೇಷ ಎಂದರೆ ಮುಂಬೈನಲ್ಲಿ ಈ ಚಿತ್ರಕ್ಕೆ ಇನ್ನೂ ಶೋ ನೀಡಲಾಗುತ್ತಿದೆ.

ಏಪ್ರಿಲ್ 14ರಂದು ‘ಕೆಜಿಎಫ್ 2’ ಚಿತ್ರ ರಿಲೀಸ್ ಆಯಿತು. ಈ ಸಿನಿಮಾ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿತು. ಇದರಿಂದ ಚಿತ್ರಕ್ಕೆ ದೊಡ್ಡ ಬೂಸ್ಟ್​ ಸಿಕ್ಕಿತು. ಮೊದಲ ವೀಕೆಂಡ್​ನಲ್ಲಿ ‘ಕೆಜಿಎಫ್ 2’ಗೆ ದುಡ್ಡಿನ ಹೊಳೆ ಹರಿದುಬಂತು. ಈ ಸಿನಿಮಾ ನಂತರದ ದಿನಗಳಲ್ಲಿ ಮಾಡಿದ ದಾಖಲೆಗಳಿಗೆ ಲೆಕ್ಕವೇ ಇಲ್ಲ. ಈ ಸಿನಿಮಾ ತೆರೆಗೆ ಬಂದು 75 ದಿನ ಸಮೀಪಿಸುತ್ತಾ ಬಂದಿದೆ. ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಸಿನಿಮಾ ಅಬ್ಬರಿಸುತ್ತಿದೆ. ಆದಾಗ್ಯೂ ಚಿತ್ರವನ್ನು ಕೆಲವರು ಥಿಯೇಟರ್​ನಲ್ಲಿ ವೀಕ್ಷಿಸುತ್ತಿದ್ದಾರೆ. ಅದೂ ಹಿಂದಿ ವರ್ಷನ್​ನಲ್ಲಿ ಅನ್ನೋದು ವಿಶೇಷ.

‘ಕೆಜಿಎಫ್ 2’ ಹಿಂದಿ ಅವತರಣಿಕೆಯಲ್ಲಿ 434 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಕನ್ನಡ ಚಿತ್ರರಂಗಕ್ಕೆ ನಿಜಕ್ಕೂ ಹೆಮ್ಮೆ ತರುವ ವಿಚಾರ. ಯಾವುದೇ ಬಾಲಿವುಡ್ ಸಿನಿಮಾ ಕೂಡ ಮಾಡಲಾಗದ ದಾಖಲೆಯನ್ನು ಈ ಚಿತ್ರ ಮಾಡಿದೆ. ಮುಂಬೈನ Maxus Cinemas​ನಲ್ಲಿ ‘ಕೆಜಿಎಫ್​ 2’ಗೆ ಇಂದು (ಜೂನ್​ 26) ಎರಡು ಶೋಗಳನ್ನು ನೀಡಲಾಗಿದೆ. ಈ ಮೂಲಕ ಸಿನಿಮಾದ ಅಬ್ಬರ ಇನ್ನೂ ಕಡಿಮೆ ಆಗಿಲ್ಲ ಎನ್ನುವುದಕ್ಕೆ ಸಾಕ್ಷಿ ಎಂಬಂತಿದೆ.

‘ಕೆಜಿಎಫ್ 2’ ಸಿನಿಮಾದ ಒಟ್ಟಾರೆ ಕಲೆಕ್ಷನ್ ಲೆಕ್ಕಾಚಾರ ಸಿಕ್ಕಿದೆ. ಚಿತ್ರ ಒಟ್ಟೂ 1250 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಒಂದು ಸಿನಿಮಾ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತದೆ ಎಂದರೆ ಅದು ಸಾಮಾನ್ಯ ವಿಚಾರ ಅಲ್ಲ ಎಂದು ಬಾಕ್ಸ್ ಆಫೀಸ್ ಪಂಡಿತರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಯಶ್ ನಟನೆಯ ‘ಕೆಜಿಎಫ್ 2’ ಕಲೆಕ್ಷನ್ ಹಿಂದಿಕ್ಕಲು ರೆಡಿ ಆದ ‘ವಿಕ್ರಮ್’ ಸಿನಿಮಾ

ಇದನ್ನೂ ಓದಿ

ಅಂತಿಮವಾಗಿ ‘ಕೆಜಿಎಫ್ 2’ ಮಾಡಿದ ಕಲೆಕ್ಷನ್ ಎಷ್ಟು? ಇಲ್ಲಿದೆ ಬಾಕ್ಸ್ ಆಫೀಸ್ ಲೆಕ್ಕಾಚಾರ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada