AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆಯಲ್ಲಿ ರಾ.. ರಾ.. ರಕ್ಕಮ್ಮ ಹಾಡಿಗೆ ನೂರಾರು ಜನರಿಂದ ಭರ್ಜರಿ ಸ್ಟೆಪ್

ಮುಧೋಳ ನಗರದ ಮಾಜಿ ಯೋಧ, ಮುಧೋಳ ತಾಲೂಕಿನ ಸೈನಿಕರ ಸಂಘದ ಅಧ್ಯಕ್ಷ ಶ್ರೀಶೈಲ್ ಪಸಾರ ಹಾಗೂ ಮಗ ಅರುಣ ಕುಮಾರ ಅವರಿಂದ ಇಂದು (ಜೂನ್ 26) ರಕ್ಕಮ್ಮ ಹಾಡಿಗೆ ಸಾಮೂಹಿಕ ನೃತ್ಯ ನಡೆದಿದೆ.

ಬಾಗಲಕೋಟೆಯಲ್ಲಿ ರಾ.. ರಾ.. ರಕ್ಕಮ್ಮ ಹಾಡಿಗೆ ನೂರಾರು ಜನರಿಂದ ಭರ್ಜರಿ ಸ್ಟೆಪ್
ರಕ್ಕಮ್ಮ ಹಾಡಿಗೆ ನೂರಾರು ಜನರು ಸೇರಿ ಹೆಜ್ಜೆ ಹಾಕಿದ್ದಾರೆ
TV9 Web
| Updated By: sandhya thejappa|

Updated on: Jun 26, 2022 | 2:47 PM

Share

ಬಾಗಲಕೋಟೆ: ಈಗ ಎಲ್ಲ ಕಡೆ ಕಿಚ್ಚ ಸುದೀಪ್ (Kiccha Sudeep) ಅಭಿನಯದ ವಿಕ್ರಾಂತ್ ರೋಣ (Vikrant Rona) ಸಿನಿಮಾ ಹವಾ ಶುರುವಾಗಿದೆ. ಸಿನಿಮಾ ಟ್ರೈಲರ್ ಬಿಡುಗಡೆಯಾಗಿದ್ದರೂ, ಟ್ರೈಲರ್ಗೂ ಮುಂಚೆ ಎಲ್ಲರನ್ನೂ ಹುಚ್ಚೆಬ್ಬಿಸಿ ಕುಣಿಯುವಂತೆ ಮಾಡಿದ್ದು ರಾ..ರಾ.. ರಕ್ಕಮ್ಮ ಹಾಡು ಹಾಗೂ ನೃತ್ಯ. ಸುದೀಪ್ ಮತ್ತು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹಾಕಿದ ರಕ್ಕಮ್ಮ ಹುಕ್ ಸ್ಟೆಪ್ ಎಲ್ಲರನ್ನೂ ಸೆಳೆದಿದ್ದು, ಇಡೀ ಜಗತ್ತಿನಾದ್ಯಂತ ವೈರಲ್ ಆಗಿದೆ. ನಟ-ನಟಿಯರಿಂದ ಹಿಡಿದು ಜನಸಾಮಾನ್ಯರು, ದಂಪತಿಗಳು ರಕ್ಕಮ್ಮ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ. ಇನ್ನು ಇದೇ ಬೆನ್ನಲ್ಲೇ ಮುಧೋಳ ನಗರದ ರನ್ನ ಕ್ರೀಡಾಂಗಣದಲ್ಲಿ ನೂರು ಜನರು ಒಂದೆಡೆ ಸೇರಿ ರಕ್ಕಮ್ಮ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿ ಸಂಭ್ರಮಿಸಿದ್ದಾರೆ. ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿ ಮೆಚ್ಚುಗೆ ಗಳಿಸಿದ್ದಾರೆ.

ಮಾಜಿ ಯೋಧ, ಮಗನಿಂದ ಆಯೋಜನೆ ಆಯ್ತು ರಕ್ಕಮ್ಮ ಡ್ಯಾನ್ಸ್: ಜಿಲ್ಲೆಯ ಮುಧೋಳ ನಗರದ ಮಾಜಿ ಯೋಧ, ಮುಧೋಳ ತಾಲೂಕಿನ ಸೈನಿಕರ ಸಂಘದ ಅಧ್ಯಕ್ಷ ಶ್ರೀಶೈಲ್ ಪಸಾರ ಹಾಗೂ ಮಗ ಅರುಣ ಕುಮಾರ ಅವರಿಂದ ಇಂದು (ಜೂನ್ 26) ರಕ್ಕಮ್ಮ ಹಾಡಿಗೆ ಸಾಮೂಹಿಕ ನೃತ್ಯ ನಡೆದಿದೆ. ಶ್ರೀಶೈಲ್ ಪಸಾರ ಹಾಗೂ ಮಗ ಅರುಣ ಕುಮಾರ ಕಿಚ್ಚ ಸುದೀಪ್ ಅವರ ಕಟ್ಟಾ ಅಭಿಮಾನಿಗಳಾಗಿದ್ದು, ಸುದೀಪ್ ಮೇಲಿನ ಅಭಿಮಾನದಿಂದ ರಕ್ಕಮ್ಮ ಹಾಡಿಗಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಮುಧೋಳ ನಗರದ ವಿವಿಧ ಶಾಲಾ- ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಆಹ್ವಾನ ನೀಡಿದ್ದರು. ಆ ಪ್ರಕಾರ ಇಂದು ರನ್ನ ಕ್ರೀಡಾಂಗಣದಲ್ಲಿ ರಾ.. ರಾ.. ರಕ್ಕಮ್ಮ ಹಾಡಿಗೆ ಸ್ಟೆಪ್ ಹಾಕಿದ್ದಾರೆ.

ಇದನ್ನೂ ಓದಿ: Viral Video: ಇದು ಇದು ಆಕ್ಚುಲಿ ಚೆನ್ನಾಗಿರೋದು! ಪ್ರೋತ್ಸಾಹ ಅಂದ್ರೆ ಹೀಗಿರಬೇಕು

ಇದನ್ನೂ ಓದಿ
Image
Ben Stokes: ಸಿಕ್ಸರ್​ಗಳ ಸರದಾರ: ಟೆಸ್ಟ್ ಕ್ರಿಕೆಟ್​ನಲ್ಲಿ ನೂತನ ದಾಖಲೆ ಬರೆದ ಬೆನ್ ಸ್ಟೋಕ್ಸ್
Image
ಅಲ್ಲು ಅರ್ಜುನ್​ಗೆ ಬಾಡಿ ಶೇಮಿಂಗ್; ‘ವಡಾಪಾವ್ ಲುಕ್​’ ಎಂದು ಟೀಕಿಸಿದ ಫ್ಯಾನ್ಸ್​
Image
Mann Ki Baat: ಮನ್​ ಕಿ ಬಾತ್​ನಲ್ಲಿ 1975ರ ತುರ್ತು ಪರಿಸ್ಥಿತಿ ನೆನಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ
Image
Viral Video: ವಿಮಾನದಲ್ಲಿ ಎಸಿ ಸ್ಥಗಿತಗೊಂಡು ಪ್ರಯಾಕರು ಸುಸ್ತೋ ಸುಸ್ತು! ವಿಮಾನ ಬಹಿಷ್ಕಾರದ ಎಚ್ಚರಿಕೆ ನೀಡಿದ ಪ್ರಯಾಣಿಕರು

ಈ ಬಗ್ಗೆ ಮಾತಾಡಿದ ಮಾಜಿ ಯೋಧ ಶ್ರೀಶೈಲ್ ಪಸಾರ ಹಾಗೂ ಮಗ ಅರುಣ ಕುಮಾರ ತಮ್ಮ ಅಭಿಪ್ರಾಯ ಹಂಚಿಕೊಂಡರು. ಶ್ರೀಶೈಲ್ ಪಸಾರ ಮಾತಾನಾ, ನಾನು ಮಗ ಇಬ್ಬರು ಸುದೀಪ್ ಅಭಿಮಾನಿಗಳು. ಮಗ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇತಹದ್ದೊಂದು ರೀಲ್ಸ್ ಮಾಡೋದಕ್ಕೆ ಅಂತಾನೆ ಊರಿಗೆ ಬಂದಿದ್ದು, ಅನೇಕ ವಿದ್ಯಾರ್ಥಿಗಳು, ಪುಟಾಣಿ ಮಕ್ಕಳು ನೃತ್ಯದಲ್ಲಿ ಭಾಗಿಯಾಗಿದ್ದು ಖುಷಿ ತಂದಿದೆ ಎಂದರು. ಅರುಣ ಕುಮಾರ ಪ್ರತಿಕ್ರಿಯಿಸಿ, ನಾನು, ನನ್ನ ಸ್ನೇಹಿತರು, ತಂದೆ ಎಲ್ಲರೂ ಸುದೀಪ್ ಅಭಿಮಾನಿಗಳು. ಈ ನೃತ್ಯದ ಮೂಲಕ ಸುದೀಪ್ಗೆ ನಮ್ಮದೊಂದು ಕಿರುಕಾಣಿಕೆ ಎಂದು ಹೇಳಿದರು.

ವರದಿ: ರವಿ ಮೂಕಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ