Udaipur murder ಒಬ್ಬ ಆರೋಪಿ 2014 ರಲ್ಲಿ ಕರಾಚಿಗೆ ಹೋಗಿದ್ದ, ಪಾಕಿಸ್ತಾನದ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡುತ್ತಿದ್ದ: ಪೊಲೀಸ್

ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಿಜಿಪಿ ಎಂಎಲ್ ಲಾಥರ್, "ಇದುವರೆಗಿನ ವಿಚಾರಣೆಯಿಂದ ಅವರು ದಾವತ್ ಇ ಇಸ್ಲಾಮಿ ಎಂಬ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆಂದು ತಿಳಿದುಬಂದಿದೆ. ಅವರಲ್ಲಿ ಒಬ್ಬನಾದ ಘೌಸ್ ಮೊಹಮ್ಮದ್ "ಸಂಘಟನೆಯ ಇತರ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ

Udaipur murder ಒಬ್ಬ ಆರೋಪಿ 2014 ರಲ್ಲಿ ಕರಾಚಿಗೆ ಹೋಗಿದ್ದ, ಪಾಕಿಸ್ತಾನದ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡುತ್ತಿದ್ದ: ಪೊಲೀಸ್
ಮೊಹಮ್ಮದ್ ರಿಯಾಜ್ ಮತ್ತು ಘೌಸ್ ಮೊಹಮ್ಮದ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jun 29, 2022 | 8:27 PM

ರಾಜಸ್ಥಾನದ ಗೃಹ ಖಾತೆ ರಾಜ್ಯ ಸಚಿವ ರಾಜೇಂದ್ರ ಸಿಂಗ್ ಯಾದವ್ (Rajendra Singh Yadav) ಅವರು ಬುಧವಾರ ಉದಯಪುರ ಪ್ರಕರಣದ (Udaipur murder Case) ಆರೋಪಿಗಳಲ್ಲಿ ಒಬ್ಬರ ಪಾಕಿಸ್ತಾನದ ಕರಾಚಿಗೆ 2014 ರಲ್ಲಿ ಹೋಗಿದ್ದನು ಎಂದು ಹೇಳಿದ್ದಾರೆ. ಆರೋಪಿಗಳು ಕರಾಚಿಯಲ್ಲಿರುವ ‘ದಾವತ್ ಇ ಇಸ್ಲಾಮಿ’ ಕಚೇರಿಗೆ ಭೇಟಿ ನೀಡಲು ಹೋಗಿದ್ದರು ಎಂದು ಪೊಲೀಸ್ ಮಹಾನಿರ್ದೇಶಕ ಎಂಎಲ್ ಲಾಥರ್ (Director General of Police ML Lather) ತಿಳಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಆರೋಪಿಗಳಲ್ಲಿ ಒಬ್ಬನಾದ ಘೌಸ್ ಮೊಹಮ್ಮದ್ 2014 ರಲ್ಲಿ ಕರಾಚಿಗೆ ಹೋಗಿದ್ದು ಅಲ್ಲಿ ಸುಮಾರು 45 ದಿನಗಳನ್ನು ಕಳೆದಿದ್ದಾನೆ. ನಂತರ 2018-19 ರಲ್ಲಿ ಆತ ಅರಬ್ ದೇಶಗಳಲ್ಲಿ ಓಡಾಡಿದ್ದು ಕೆಲವು ಬಾರಿ ನೇಪಾಳಕ್ಕೆ ಭೇಟಿ ನೀಡಿದ್ದಾನೆ. ಕಳೆದ 2-3 ವರ್ಷಗಳಿಂದ ಆತ ಪಾಕಿಸ್ತಾನದಿಂದ 8-10 ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡುತ್ತಿದ್ದ ಎಂದು ಯಾದವ್ ಹೇಳಿದ್ದಾರೆ. “ಅವರು ಮಾಡಿದ ಅಪರಾಧವು ಸಾಮಾನ್ಯ ವ್ಯಕ್ತಿಯಿಂದ ಮಾಡಬಹುದಾದ ಅಪರಾಧವಲ್ಲ. ಹಾಗಾಗಿ ಎನ್‌ಐಎ ಪ್ರಕರಣ ದಾಖಲಿಸಿದ್ದು, ಅವರ ಜಾಲವನ್ನು ಪತ್ತೆ ಹಚ್ಚಿ ತಪ್ಪಿತಸ್ಥರನ್ನು ಜೈಲಿಗೆ ಹಾಕಲಾಗುವುದು ಎಂದು ಯಾದವ್ ಹೇಳಿದ್ದಾರೆ. ಇದಕ್ಕಿಂತ ಮುನ್ನ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಆರೋಪಿಗಳು ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಏಜೆನ್ಸಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಬಹಿರಂಗಪಡಿಸಲಾಗುವುದು ಎಂದು ಹೇಳಿದರು. ಜೋಧ್‌ಪುರ ಭೇಟಿಯನ್ನು ಮೊಟಕುಗೊಳಿಸಿದ ಸಿಎಂ ಬುಧವಾರ ಜೈಪುರಕ್ಕೆ ಆಗಮಿಸಿ ಮಧ್ಯಾಹ್ನ ರಾಜ್ಯದ ಉನ್ನತ ಅಧಿಕಾರಿಗಳೊಂದಿಗೆ ಕಾನೂನು ಸುವ್ಯವಸ್ಥೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಏತನ್ಮಧ್ಯೆ, ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಿಜಿಪಿ ಎಂಎಲ್ ಲಾಥರ್, “ಇದುವರೆಗಿನ ವಿಚಾರಣೆಯಿಂದ ಅವರು ದಾವತ್ ಇ ಇಸ್ಲಾಮಿ ಎಂಬ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆಂದು ತಿಳಿದುಬಂದಿದೆ. ಅವರಲ್ಲಿ ಒಬ್ಬನಾದ ಘೌಸ್ ಮೊಹಮ್ಮದ್ “ಸಂಘಟನೆಯ ಇತರ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ” ಎಂದು ಹೇಳಿದರು.

“ಘೌಸ್ ಮೊಹಮ್ಮದ್ 2014 ರಲ್ಲಿ ಕರಾಚಿಯಲ್ಲಿ ದಾವತ್ ಇ ಇಸ್ಲಾಮಿಗೆ ಭೇಟಿ ನೀಡಲು ಹೋಗಿದ್ದ. ಧಾರ್ಮಿಕ ಆಚರಣೆಗಳನ್ನು ಬೋಧಿಸುವುದು ಮತ್ತು ನಿರ್ದಿಷ್ಟ ಪಂಥವನ್ನು ಪ್ರಚಾರ ಮಾಡುವುದು ಇದರ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ . ಅವರಿಗೆ ರಾಜಸ್ಥಾನದಲ್ಲಿ ಯಾವುದೇ ಕಚೇರಿ ಇಲ್ಲ. ಭಾರತದಲ್ಲಿ, ಅವರು ಕಾನ್ಪುರದಲ್ಲಿ ಕಚೇರಿಯನ್ನು ಹೊಂದಿದ್ದಾರೆ. ಮುಂಬೈ ಮತ್ತು ದೆಹಲಿಯಲ್ಲಿ ಮುಖ್ಯ ಕಚೇರಿಗಳನ್ನು ಹೊಂದಿದ್ದಾರೆ ಎಂದು ಡಿಜಿಪಿ ಹೇಳಿದರು.

ಇದನ್ನೂ ಓದಿ
Image
ನಾನು ನೂಪುರ್ ಶರ್ಮಾ ಬೆಂಬಲಿಗ ಅಭಿಯಾನ ಶುರು ಮಾಡುತ್ತೇವೆ, ಅದೇನಾಗುತ್ತೋ ನೋಡೋಣ: ಪ್ರಮೋದ್ ಮುತಾಲಿಕ್ ಸವಾಲು
Image
Udaipur Murder ಸಾಮಾಜಿಕ ಮಾಧ್ಯಮಗಳಲ್ಲಿ ಬೆದರಿಕೆ ಕಾರಣ ಕನ್ಹಯ್ಯಾ ಕೆಲಸಕ್ಕೆ ಹೋಗಿರಲಿಲ್ಲ, ರಜೆ ನಂತರ ಹೋದಾಗ ಹೀಗಾಯ್ತು: ಕನ್ಹಯ್ಯಾ ಲಾಲ್ ಪತ್ನಿ
Image
ಕನ್ಹಯ್ಯಾ ಲಾಲ್‌ ಪಾರ್ಥಿವ ಶರೀರ ಕುಟುಂಬದವರಿಗೆ ಹಸ್ತಾಂತರ; ಮುಗಿಲು‌ ಮುಟ್ಟಿದ ಆಕ್ರಂದನ, ಪೊಲೀಸರ ವಿರುದ್ಧ ಆಕ್ರೋಶದ ಕೂಗು

ಮಂಗಳವಾರ ಮೊಹಮ್ಮದ್ ರಿಯಾಜ್ ಮತ್ತು ಘೌಸ್ ಅವರು ಬಟ್ಟೆ ಅಳತೆಗೆ ನೀಡುವ ನೆಪದಲ್ಲಿ ಉದಯಪುರದ ಟೈಲರ್ ಕನ್ಹಯ್ಯಾ ಲಾಲ್ ಅವರ ಅಂಗಡಿಗೆ ಪ್ರವೇಶಿಸಿದ್ದರು. ಅಲ್ಲಿ ಕನ್ಹಯ್ಯಾ ಲಾಲ್ ಅವರ ಮೇಲೆ ಹಲ್ಲೆ ನಡೆಸಿ ಶಿರಚ್ಛೇದನ ಮಾಡಿದ್ದರು. ಬಿಜೆಪಿ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಪ್ರವಾದಿ ಬಗ್ಗೆ ನೀಡಿದ್ದ ಹೇಳಿಕೆಯನ್ನು ಬೆಂಬಲಿಸಿ ಸೋಷ್ಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಕ್ಕೆ ಪ್ರತೀಕಾರವಾಗಿ ಈ ಹತ್ಯೆ ಮಾಡಿದ್ದೇವೆ ಎಂದು ಹಂತಕರು ಹೇಳಿಕೊಂಡಿದ್ದಾರೆ.

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ