AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ಹಯ್ಯಾ ಲಾಲ್‌ ಪಾರ್ಥಿವ ಶರೀರ ಕುಟುಂಬದವರಿಗೆ ಹಸ್ತಾಂತರ; ಮುಗಿಲು‌ ಮುಟ್ಟಿದ ಆಕ್ರಂದನ, ಪೊಲೀಸರ ವಿರುದ್ಧ ಆಕ್ರೋಶದ ಕೂಗು

ಬಿಗಿ ಬಂದೋಬಸ್ತ್ ನಡುವೆ ಮೃತದೇಹವನ್ನು ತರಲಾಗಿದ್ದು ನೂರಾರು ಮಂದಿ ಜನರು ಮನೆ ಬಳಿ ನೆರೆದಿದ್ದರು. ಪೊಲೀಸರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಒತ್ತಾಯಿಸುವ ಕೂಗು ಅಲ್ಲಿ ಕೇಳಿ ಬಂತು.

ಕನ್ಹಯ್ಯಾ ಲಾಲ್‌ ಪಾರ್ಥಿವ ಶರೀರ ಕುಟುಂಬದವರಿಗೆ ಹಸ್ತಾಂತರ; ಮುಗಿಲು‌ ಮುಟ್ಟಿದ ಆಕ್ರಂದನ, ಪೊಲೀಸರ ವಿರುದ್ಧ ಆಕ್ರೋಶದ ಕೂಗು
ಕನ್ಹಯ್ಯಾ ಲಾಲ್ ಮೃತದೇಹImage Credit source: livehindustan.com
TV9 Web
| Edited By: |

Updated on:Jun 29, 2022 | 1:30 PM

Share

ಪ್ರವಾದಿ(Prophet muhammad) ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ(Nupur Sharma) ಬೆಂಬಲಿಸಿ ಪೋಸ್ಟ್‌ ಹಾಕಿದ್ದಕ್ಕೆ ರಾಜಸ್ಥಾನದ ಉದಯಪುರದಲ್ಲಿ ಬರ್ಬರ ಹತ್ಯೆಗೀಡಾದ ಕನ್ಹಯ್ಯಾ ಲಾಲ್‌ರ ( Kanhaiya Lal) ಮೃತದೇಹವನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಇಂದು(ಬುಧವಾರ) ಬೆಳಗ್ಗೆ 11 ಗಂಟೆಗೆ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಬಿಗಿ ಬಂದೋಬಸ್ತ್ ನಡುವೆ ಮೃತದೇಹವನ್ನು ತರಲಾಗಿದ್ದು ನೂರಾರು ಮಂದಿ ಜನರು ಮನೆ ಬಳಿ ನೆರೆದಿದ್ದರು. ಪೊಲೀಸರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಒತ್ತಾಯಿಸುವ ಕೂಗು ಅಲ್ಲಿ ಕೇಳಿ ಬಂತು. ಮೃತದೇಹ ಮನೆಗೆ ತಲುಪುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕನ್ಹಯ್ಯಾ ಅವರ ಮಗ ಅಳುತ್ತಿದ್ದುದನ್ನು ನೋಡಿ ಎಲ್ಲರೂ ಕಣ್ಣೀರಾಗುತ್ತಿದ್ದರು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರು ಕನ್ಹಯ್ಯಾ ಅಮರ್ ರಹೇ ಎಂದು ಘೋಷಣೆ ಕೂಗುತ್ತಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರನ್ನು ಸಾಕಷ್ಟು ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ.

ಅಂತಿಮ ಯಾತ್ರೆಯಲ್ಲಿ ಸಾವಿರಾರು  ಜನರು ಭಾಗಿ 

ಇದನ್ನೂ ಓದಿ
Image
Udaipur Murder: ಉದಯಪುರ ಟೈಲರ್ ಹತ್ಯೆಯ ತನಿಖೆಯ ಹೊಣೆ ಎನ್​ಐಎ ಹೆಗಲಿಗೆ; ಗೃಹ ಸಚಿವಾಲಯ ಆದೇಶ
Image
Udaipur Murder: ಉದಯ್​ಪುರದ ಬರ್ಬರ ಕೊಲೆ ಪೂರ್ವ ನಿಯೋಜಿತ, ಜೂನ್ 17ರ ವಿಡಿಯೊ ಬಹಿರಂಗ
Image
ರಾಜಸ್ತಾನದಲ್ಲಿ ನಡೆದ ಹಿಂದೂ ಟೈಲರ್ ಹತ್ಯೆ ನಾಚಿಗೇಡಿನ ಸಂಗತಿ, ಇದೊಂದು ವ್ಯವಸ್ಥಿತ ಸಂಚು: ನಳಿನ್ ಕುಮಾರ್ ‌ಕಟೀಲ್
Image
ಟೈಲರ್ ಶಿರಚ್ಛೇದ: ರಾಜಸ್ಥಾನ ರಾಜ್ಯವ್ಯಾಪಿ ನಿಷೇಧಾಜ್ಞೆ ಜಾರಿ, ಬಿಗಿ ಬಂದೋಬಸ್ತ್, ವಿಡಿಯೊ ನೋಡಬೇಡಿ ಎಂದು ಪೊಲೀಸರು

ಗೋವರ್ಧನ ವಿಲಾಸದಿಂದ ಅಂತಿಮ ಯಾತ್ರೆ ಹೊರಟಿದ್ದು  ಅಶೋಕ್ ನಗರದ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ. ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದಾರೆ. ಕಾಲ್ನಡಿಗೆಯ ಹೊರತಾಗಿ ಅನೇಕರು ಬೈಕ್ ಹಾಗೂ ಇತರ ವಾಹನಗಳಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದರು. ನಗರ ಶಾಸಕ ಮತ್ತು ವಿರೋಧ ಪಕ್ಷದ ನಾಯಕ ಗುಲಾಬ್‌ಚಂದ್ ಕಟಾರಿಯಾ ಕೂಡ ಶವಾಗಾರಕ್ಕೆ ತೆರಳಿ ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದಾರೆ.

Published On - 1:29 pm, Wed, 29 June 22

Follow Us
ತಾತನಾಗಿ ಬಡ್ತಿ ಪಡೆದ ಡಿಕೆ ಶಿವಕುಮಾರ್ ಫಸ್ಟ್ ರಿಯಾಕ್ಷನ್ ಹೇಗಿತ್ತು ನೋಡಿ
ತಾತನಾಗಿ ಬಡ್ತಿ ಪಡೆದ ಡಿಕೆ ಶಿವಕುಮಾರ್ ಫಸ್ಟ್ ರಿಯಾಕ್ಷನ್ ಹೇಗಿತ್ತು ನೋಡಿ
ದಂಡ ಕಟ್ಟಿದ ಬಳಿಕ ಫಾರ್ಮ್​ಗೆ ಮರಳಿದ ರಿಯಾನ್ ಪರಾಗ್
ದಂಡ ಕಟ್ಟಿದ ಬಳಿಕ ಫಾರ್ಮ್​ಗೆ ಮರಳಿದ ರಿಯಾನ್ ಪರಾಗ್
ಡೆಲ್ಲಿ ವಿರುದ್ಧ ಐದೇ ಎಸೆತಗಳಿಗೆ ಸುಸ್ತಾದ ಜೈಸ್ವಾಲ್, ವೈಭವ್
ಡೆಲ್ಲಿ ವಿರುದ್ಧ ಐದೇ ಎಸೆತಗಳಿಗೆ ಸುಸ್ತಾದ ಜೈಸ್ವಾಲ್, ವೈಭವ್
RV ರಸ್ತೆ-ಸಿಲ್ಕ್ ಬೋರ್ಡ್ ಡಬಲ್‌ ಡೆಕ್ಕರ್‌ ಫ್ಲೈಓವರ್​​​ಗೆ ಚಾಲನೆ
RV ರಸ್ತೆ-ಸಿಲ್ಕ್ ಬೋರ್ಡ್ ಡಬಲ್‌ ಡೆಕ್ಕರ್‌ ಫ್ಲೈಓವರ್​​​ಗೆ ಚಾಲನೆ
ಅವನ ಮರ್ಯಾದೆ ತೆಗೆಯದೇ ಬಿಡಲ್ಲ: ನಿರ್ಮಾಪಕನ ವಿರುದ್ಧ ಕಿಡಿಕಾರಿದ ಹಂಸಾ
ಅವನ ಮರ್ಯಾದೆ ತೆಗೆಯದೇ ಬಿಡಲ್ಲ: ನಿರ್ಮಾಪಕನ ವಿರುದ್ಧ ಕಿಡಿಕಾರಿದ ಹಂಸಾ
ಹಿಡಕಲ್ ಜಲಾಶಯದಲ್ಲಿ ಮುಳುಗಿ ಹೋಗಿದ್ದ ದೇಗುಲ ಗೋಚರ
ಹಿಡಕಲ್ ಜಲಾಶಯದಲ್ಲಿ ಮುಳುಗಿ ಹೋಗಿದ್ದ ದೇಗುಲ ಗೋಚರ
ಅಜ್ಜನಾದ ಡಿಕೆ ಶಿವಕುಮಾರ್, ಮೊಮ್ಮಗಳನ್ನ ನೋಡಲು ಆಸ್ಪತ್ರೆಗೆ ದೌಡು
ಅಜ್ಜನಾದ ಡಿಕೆ ಶಿವಕುಮಾರ್, ಮೊಮ್ಮಗಳನ್ನ ನೋಡಲು ಆಸ್ಪತ್ರೆಗೆ ದೌಡು
‘ವಸುದೇವ ಕುಟುಂಬ’ ಧಾರಾವಾಹಿ ನಿರ್ಮಾಪಕರ ಮೇಲೆ ಉರಿದು ಬಿದ್ದ ನಟಿ ಹಂಸ
‘ವಸುದೇವ ಕುಟುಂಬ’ ಧಾರಾವಾಹಿ ನಿರ್ಮಾಪಕರ ಮೇಲೆ ಉರಿದು ಬಿದ್ದ ನಟಿ ಹಂಸ
ಶಾಲಾ ಬಸ್‌ನಿಂದ ಇಳಿದು ರಸ್ತೆ ದಾಟುತ್ತಿದ್ದ ಮಗುವಿಗೆ ಬೈಕ್ ಡಿಕ್ಕಿ
ಶಾಲಾ ಬಸ್‌ನಿಂದ ಇಳಿದು ರಸ್ತೆ ದಾಟುತ್ತಿದ್ದ ಮಗುವಿಗೆ ಬೈಕ್ ಡಿಕ್ಕಿ
ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ಮಹಿಳೆ; ಸಿಸಿಟಿವಿ ದೃಶ್ಯ ವೈರಲ್
ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ಮಹಿಳೆ; ಸಿಸಿಟಿವಿ ದೃಶ್ಯ ವೈರಲ್