Udaipur Murder ಸಾಮಾಜಿಕ ಮಾಧ್ಯಮಗಳಲ್ಲಿ ಬೆದರಿಕೆ ಕಾರಣ ಕನ್ಹಯ್ಯಾ ಕೆಲಸಕ್ಕೆ ಹೋಗಿರಲಿಲ್ಲ, ರಜೆ ನಂತರ ಹೋದಾಗ ಹೀಗಾಯ್ತು: ಕನ್ಹಯ್ಯಾ ಲಾಲ್ ಪತ್ನಿ

ಸಲ್ಪ ದಿನಗಳ ರಜೆ ನಂತರ ಅವರು ನಿನ್ನೆ ಮತ್ತೆ ಕೆಲಸಕ್ಕೆ ಹೋಗಲು ನಿರ್ಧರಿಸಿದ್ದರು. ಕೆಲಸದ ಸಮಯದಲ್ಲಿ ಇಬ್ಬರು ವ್ಯಕ್ತಿಗಳು ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದಿದ್ದಾರೆ.

Udaipur Murder ಸಾಮಾಜಿಕ ಮಾಧ್ಯಮಗಳಲ್ಲಿ ಬೆದರಿಕೆ ಕಾರಣ ಕನ್ಹಯ್ಯಾ ಕೆಲಸಕ್ಕೆ ಹೋಗಿರಲಿಲ್ಲ, ರಜೆ ನಂತರ ಹೋದಾಗ ಹೀಗಾಯ್ತು: ಕನ್ಹಯ್ಯಾ ಲಾಲ್ ಪತ್ನಿ
ಕನ್ಹಯ್ಯಾ ಲಾಲ್ ಅವರ ಪತ್ನಿ
Follow us
| Updated By: ರಶ್ಮಿ ಕಲ್ಲಕಟ್ಟ

Updated on: Jun 29, 2022 | 2:30 PM

ಉದಯಪುರ: ಅತ್ಯಂತ ಬರ್ಬರ ರೀತಿಯಲ್ಲಿ ಹತ್ಯೆಯಾದ(Udaipur Tailor Murder case) ಉದಯಪುರ ಟೈಲರ್ ಕನ್ಹಯ್ಯಾ ಲಾಲ್ (Kanhaiya Lal) ಅವರ ಪತ್ನಿ ಜಶೋದಾ ತನ್ನ ಪತಿಗೆ ಬೆದರಿಕೆ ಇತ್ತು. ಸಾಮಾಜಿಕ ಮಾಧ್ಯಮಗಳ (Social Media) ಮೂಲಕ ಅವರಿಗೆ ಬೆದರಿಕೆಗಳು ಬರುತ್ತಿದ್ದವು. ಹಾಗಾಗಿ ಅವರು ಹಲವಾರು ದಿನ ಕೆಲಸಕ್ಕೆ ಹೋಗಿರಲಿಲ್ಲ ಎಂದು  ಎನ್‌ಡಿಟಿವಿಗೆ ವಿವರಿಸಿದ್ದಾರೆ. ಸಲ್ಪ ದಿನಗಳ ರಜೆ ನಂತರ ಅವರು ನಿನ್ನೆ ಮತ್ತೆ ಕೆಲಸಕ್ಕೆ ಹೋಗಲು ನಿರ್ಧರಿಸಿದ್ದರು. ಕೆಲಸದ ಸಮಯದಲ್ಲಿ ಇಬ್ಬರು ವ್ಯಕ್ತಿಗಳು ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದಿದ್ದಾರೆ. 48ರ ಹರೆಯದ ಕನ್ಹಯ್ಯಾ ಲಾಲ್ ಅವರ ಅಳತೆ ತೆಗೆದುಕೊಳ್ಳುತ್ತಿದ್ದಂತೆ ಅವರ ಮೇಲೆ ವ್ಯಕ್ತಿಯೊಬ್ಬ ದಾಳಿ ನಡೆಸಿದ್ದಾನೆ. ಇನ್ನೊಬ್ಬ ವ್ಯಕ್ತಿ ಆ ಭೀಕರ ಕೃತ್ಯವನ್ನು ಚಿತ್ರೀಕರಿಸಿದ್ದಾನೆ. ನಂತರ ಆ ದುಷ್ಕರ್ಮಿಗಳು ಮೊಟಾರ್ ಸೈಕಲ್ ನಲ್ಲಿ ಓಡಿ ಹೋಗಿದ್ದಾರೆ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಇಬ್ಬರು ವ್ಯಕ್ತಿಗಳಾದ ಗೌಸ್ ಮೊಹಮ್ಮದ್ ಮತ್ತು ರಿಯಾಜ್ ಅಖ್ತರಿ ಅವರನ್ನು ಮಂಗಳವಾರ ರಾತ್ರಿ ಬಂಧಿಸಲಾಗಿದೆ. ಆರೋಪಿಗಳು ಸಾಮಾಜಿಕ ಮಾಧ್ಯಮದಲ್ಲಿ ಎರಡು ವಿಡಿಯೊಗಳನ್ನು ಮಾಡಿದ್ದು ಅದರಲ್ಲಿ ಒಂದು ಕನ್ಹಯ್ಯಾ ಲಾಲ್ ಹತ್ಯೆಯದ್ದು. ಇನ್ನೊಂದು ಕೊಲೆಯ ಬಗ್ಗೆ ಸಂತೋಷಪಡುವ ತಪ್ಪೊಪ್ಪಿಗೆಯ ವಿಡಿಯೊ ಆಗಿದ್ದು ಅದರಲ್ಲಿ ಅವರು ಪ್ರಧಾನಿಗೆ ಬೆದರಿಕೆಯನ್ನೂ ಹಾಕಿದ್ದಾರೆ. ನಗರದ ಹಲವು ಭಾಗಗಳಲ್ಲಿ ಕರ್ಫ್ಯೂ ಜಾರಿಗೊಳಿಸಿರುವ ಉದಯ್‌ಪುರದಲ್ಲಿ ಪೊಲೀಸರು ಭಾರೀ ಬಂದೋಬಸ್ತ್ ಒದಗಿಸಿದ್ದಾರೆ.

ಸುಮಾರು ಮೂರು ವಾರಗಳ ಹಿಂದೆ ಕನ್ಹಯ್ಯಾ ಲಾಲ್ ಅವರು ಪ್ರವಾದಿ ಮೊಹಮ್ಮದ್ ಬಗ್ಗೆ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದ ಬಿಜೆಪಿ ವಕ್ತಾರರಾಗಿದ್ದ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಹಾಕಿದ್ದಕ್ಕೆ ಪ್ರತಿಕಾರವಾಗಿ ಈ ಹತ್ಯೆ ನಡೆದಿದೆ.

ಇದನ್ನೂ ಓದಿ
Image
ಕನ್ಹಯ್ಯಾ ಲಾಲ್‌ ಪಾರ್ಥಿವ ಶರೀರ ಕುಟುಂಬದವರಿಗೆ ಹಸ್ತಾಂತರ; ಮುಗಿಲು‌ ಮುಟ್ಟಿದ ಆಕ್ರಂದನ, ಪೊಲೀಸರ ವಿರುದ್ಧ ಆಕ್ರೋಶದ ಕೂಗು
Image
ನೂಪುರ್ ಶರ್ಮರನ್ನು ಬೆಂಬಲಿಸಿದವನ ಶಿರಚ್ಛೇದ ಮಾಡಲಾಗುತ್ತದೆ ಅಂದರೆ ನಾವೇನು ತಾಲಿಬಾನ್​​​ನಲ್ಲಿ ವಾಸವಾಗಿದ್ದೇವಾ? ಸಿಟಿ ರವಿ
Image
Udaipur Murder: ಉದಯಪುರ ಟೈಲರ್ ಹತ್ಯೆಯ ತನಿಖೆಯ ಹೊಣೆ ಎನ್​ಐಎ ಹೆಗಲಿಗೆ; ಗೃಹ ಸಚಿವಾಲಯ ಆದೇಶ
Image
Udaipur Murder: ಉದಯ್​ಪುರದ ಬರ್ಬರ ಕೊಲೆ ಪೂರ್ವ ನಿಯೋಜಿತ, ಜೂನ್ 17ರ ವಿಡಿಯೊ ಬಹಿರಂಗ

ಏನಿದು ಪ್ರಕರಣ? ರಾಜಸ್ಥಾನದ ಉದಯಪುರ ನಗರದ ಮಾಲ್ದಾಸ್ ಸ್ಟ್ರೀಟ್ ನಲ್ಲಿ ಹಾಡಹಗಲೇ ಭೀಕರ ಹತ್ಯೆ ನಡೆದಿದೆ. ಕನ್ಹಯ್ಯಾ ಲಾಲ್ ಎಂಬ ಟೈಲರ್ ಅಂಗಡಿ ನಡೆಸುತ್ತಿದ್ದವರನ್ನು ಗೋಸ್ ಮೊಹಮ್ಮದ್ ಮಗ ರಫೀಕ್ ಮೊಹಮ್ಮದ್ ಮತ್ತು ರಿಯಾಜ್ ಮಗ ಅಬ್ದುಲ್ ಜಬ್ಬಾರ್ ಎಂಬ ದುಷ್ಕರ್ಮಿಗಳು ಹಾಡಹಗಲೇ ಕತ್ತು ಕತ್ತರಿಸಿ ಹತ್ಯೆ ಮಾಡಿದ್ದಾರೆ. ಬಿಜೆಪಿಯ ಮಾಜಿ ವಕ್ತಾರೆ ನೂಪುರ ಶರ್ಮಾ ಹೇಳಿಕೆಯನ್ನ ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಕ್ಕೆ ಪ್ರತೀಕಾರವಾಗಿ ಈ ಹತ್ಯೆ ನಡೆದಿದೆ. ಕನ್ಹಯ್ಯಾ ಲಾಲ್ ಅವರ ಎಂಟು ವರ್ಷದ ಮಗ ತಂದೆಯ ಮೊಬೈಲ್ ನಿಂದ ನೂಪುರ್ ಶರ್ಮಾ ಹೇಳಿಕೆ ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ. ಇದಾದ ಬಳಿಕ ಧನ್ಮಂಡಿ ಪೋಲೀಸರು ಕನ್ಹಯ್ಯಾ ಲಾಲ್ ರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಕನ್ಹಯ್ಯಾ ಲಾಲ್ ಗೆ ಜೀವ ಬೆದರಿಕೆ ಕರೆಗಳು ಬರುತ್ತಲೇ ಇದ್ದವು. ಇದರಿಂದ ಜೀವ ಭಯಕ್ಕೊಳಗಾದ ಕನ್ಹಯ್ಯಾ ಲಾಲ್, ಪೊಲೀಸ್ ರಕ್ಷಣೆ ನೀಡುವಂತೆ ಮನವಿ ಮಾಡಿದ್ದರು. ಆದರೆ ಪೊಲೀಸರು ಕನ್ನಯ್ಯಲಾಲ್ ಮನವಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಕನ್ಹಯ್ಯಾ ಲಾಲ್ ಗೆ ಪೊಲೀಸ್ ರಕ್ಷಣೆ ನೀಡಿರಲಿಲ್ಲ.  ಹತ್ಯೆ ಘಟನೆ ಮಾಹಿತಿ ತಿಳಿದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಎಂ.ಬಿ. ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಹತ್ಯೆಯ ಸ್ಥಳದಲ್ಲಿ ರಕ್ತದ ಕೋಡಿಯೇ ಹರಿದಿದೆ. ಹತ್ಯೆ ಬಳಿಕ ದುಷ್ಕರ್ಮಿಗಳು ಮಾರಾಕಾಸ್ತ್ರಗಳನ್ನ ಹಿಡಿದುಕೊಂಡೇ ವಿಡಿಯೊ ಮಾಡಿ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋೊದಲ್ಲಿ ಪ್ರಧಾನಿ ಮೋದಿಗೂ ಜೀವ ಬೆದರಿಕೆ ಹಾಕಿದ್ದಾರೆ. ನೀವು ಬೆಂಕಿ ಹಚ್ಚಿದ್ದೀರಿ, ಅದನ್ನು ನಾವು ಆರಿಸುತ್ತೇವೆ. ಈ ಮಾರಾಕಾಸ್ತ್ರ ಮೋದಿಯ ಕುತ್ತಿಗೆವರೆಗೂ ತಲುಪುತ್ತೆ ಎಂದು ಮಚ್ಚು ತೋರಿಸಿ ಬೆದರಿಕೆ ಹಾಕಿದ್ದಾರೆ.