ನೂಪುರ್ ಶರ್ಮರನ್ನು ಬೆಂಬಲಿಸಿದವನ ಶಿರಚ್ಛೇದ ಮಾಡಲಾಗುತ್ತದೆ ಅಂದರೆ ನಾವೇನು ತಾಲಿಬಾನ್​​​ನಲ್ಲಿ ವಾಸವಾಗಿದ್ದೇವಾ? ಸಿಟಿ ರವಿ

ನೂಪುರ್ ಹೇಳಿಕೆಯನ್ನು ಬೆಂಬಲಿಸಿದ ರಾಜಸ್ತಾನದ ಟೇಲರೊಬ್ಬರನ್ನು ಶಿರಚ್ಛೇದ ಮಾಡಿರುವುದನ್ನು ಉಗ್ರವಾಗಿ ಖಂಡಿಸಿದ ರವಿ, ನಾವೇನು ತಾಲಿಬಾನಲ್ಲಿ ವಾಸವಾಗಿದ್ದೇವಾ? ಎಂದು ಕೋಪದಿಂದ ಪ್ರಶ್ನಿಸಿದರು.

Arun Belly

|

Jun 29, 2022 | 1:11 PM

New Delhi:  ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (Ct Ravi) ಅವರು ಬುಧವಾರ ದೆಹಲಿಯಲ್ಲಿ ಮಾತಾಡುವಾಗ ಪತ್ರಕರ್ತರ ಕೆಲ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಲಾಗದೆ, ಮಾಧ್ಯಮವರು ಸೃಷ್ಟಿಕರ್ತರು ಅಂತ ಹೇಳಿ ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದರು. ಪಕ್ಷದ ಉಚ್ಚಾಟಿತ ವಕ್ತಾರೆ ನೂಪುರ್ ಶರ್ಮ (Nupur Sharma) ಅವರನ್ನು ವಹಿಸಿಕೊಂಡು ಮಾತಾಡುವ ಭರದಲ್ಲ್ಲಿ ಜಾಕಿರ್ ನಾಯಕ್ (Zakir Naik) ಮತ್ತು ಇನ್ನೂ ಅನೇಕರು ಪ್ರವಾದಿಯವರ ಬಗ್ಗೆ ಮಾತಾಡಿದ್ದಾರೆ ಎಂದು ರವಿಯವರು ಹೇಳಿದರು. ನೂಪುರ್ ಹೇಳಿಕೆಯನ್ನು ಬೆಂಬಲಿಸಿದ ರಾಜಸ್ತಾನದ ಟೇಲರೊಬ್ಬರನ್ನು ಶಿರಚ್ಛೇದ ಮಾಡಿರುವುದನ್ನು ಉಗ್ರವಾಗಿ ಖಂಡಿಸಿದ ರವಿ, ನಾವೇನು ತಾಲಿಬಾನಲ್ಲಿ ವಾಸವಾಗಿದ್ದೇವಾ? ಎಂದು ಕೋಪದಿಂದ ಪ್ರಶ್ನಿಸಿದರು.

ಇದನ್ನೂ ಓದಿ:  Viral Video: ಜೋರ್ಡಾನ್​​ನ ಬಂದರಿನಲ್ಲಿ ವಿಷಾನಿಲ ಸೋರಿಕೆ; 12 ಜನ ಸಾವು, 250ಕ್ಕೂ ಹೆಚ್ಚು ಮಂದಿಗೆ ಗಾಯ

Follow us on

Click on your DTH Provider to Add TV9 Kannada