ಹಾಸನದಲ್ಲಿ ಮರಿಯೊಂದಿಗೆ ರಸ್ತೆ ದಾಟಿದ ಕಾಡಾನೆ; ವೈರಲ್ ವಿಡಿಯೋ ಇಲ್ಲಿದೆ

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮಲಸಾವರ ಬಳಿ ಈ ಘಟನೆ ಸಂಭವಿಸಿದ್ದು, ವಿಡಿಯೋದಲ್ಲಿ ಮರಿಯೊಂದಿಗೆ ಕಾಫಿ ತೋಟದೊಳಗೆ ಕಾಡಾನೆ ಓಡಿ ಹೋಗಿದೆ.

TV9kannada Web Team

| Edited By: sandhya thejappa

Jun 29, 2022 | 9:40 AM

ಹಾಸನದಲ್ಲಿ ಕಾಡಾನೆಗಳ (Elephants) ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾಡಾನೆ ಕಾಟಕ್ಕೆ ಶಾಶ್ವತ ಪರಿಹಾರ ನೀಡಬೇಕೆಂದು ರೈತರು (Farmers) ಆಗ್ರಹಿಸುತ್ತಲೇ ಇದ್ದಾರೆ. ಈ ನಡುವೆ ಕಾಡಾನೆಯೊಂದು ತನ್ನ ಮರಿಯೊಂದಿಗೆ ರಸ್ತೆ ದಾಟಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಡಾನೆ ಕಂಡ ಜನರು ಭಯದಿಂದ ಕಿರುಚಿದ್ದರು. ಈ ವೇಳೆ ಗಾಬರಿಗೊಂಡ ಆನೆ ಓಡಿ ಹೋಗಿದೆ. ಓಡಿಕೊಂಡು ರಸ್ತೆ ದಾಟುವಾಗ ರಸ್ತೆ ಬದಿ ಅಳವಡಿಸಿದ್ದ ಬೋರ್ಡ್ಗೆ ಕಾಡಾನೆ ಡಿಕ್ಕಿ ಹೊಡೆದು ಬೀಳಿಸಿ ಮರಿಯೊಂದಿಗೆ ರಸ್ತೆ ದಾಟಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮಲಸಾವರ ಬಳಿ ಈ ಘಟನೆ ಸಂಭವಿಸಿದ್ದು, ವಿಡಿಯೋದಲ್ಲಿ ಮರಿಯೊಂದಿಗೆ ಕಾಫಿ ತೋಟದೊಳಗೆ ಕಾಡಾನೆ ಓಡಿ ಹೋಗಿದೆ. ಕಾಡಾನೆ ಓಡಾಡುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಕೆನಡಾದ ಬ್ಯಾಂಕ್​​ನಲ್ಲಿ ಶೂಟೌಟ್; ಇಬ್ಬರು ಗನ್​ಮ್ಯಾನ್​​ಗಳು ಸಾವು, 6 ಪೊಲೀಸರಿಗೆ ಗಾಯ

Follow us on

Click on your DTH Provider to Add TV9 Kannada