ಸಕಲೇಶಪುರದ ಹಳ್ಳಿಗಳಿಗೆ ಪುನಃ ಕಾಡಾನೆಗಳ ಪ್ರವೇಶ, ಆನೆ ಉಪಟಳಕ್ಕೆ ಶಾಶ್ವತ ಪರಿಹಾರ ಹುಡುಕದ ಸರ್ಕಾರದ ವಿರುದ್ಧ ಜನರ ಆಕ್ರೋಶ
ಅಲ್ಲಿದ್ದವರೆಲ್ಲ ಆನೆ ಕಂಡೊಡನೆ ಹೆದರಿ ಮನೆಯೊಳಗೆ ಓಡಿ ಬಾಗಿಲು ಮುಚ್ಚಿಕೊಂಡಿದ್ದಾರೆ. ಒಂದೆರಡು ನಿಮಷಗಳ ಕಾಲ ವೀಕ್ಷಣೆ ನಡೆಸಿ ಅದು ಅಲ್ಲಿಂದ ಹಿಂದಕ್ಕೆ ತಿರುಗುತ್ತದೆ. ಅಷ್ಟರಲ್ಲಿ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಫೋನ್ ಮಾಡಿ ವಿಷಯ ತಿಳಿಸುತ್ತಾರೆ.
Hassan: ಸುಮಾರು ಒಂದೂವರೆ ತಿಂಗಳು ಹಿಂದೆ ಹಾಸನ ಜಿಲ್ಲೆ ಸಕಲೇಶಪುರ (Sakleshpur) ತಾಲ್ಲೂಕಿನ ಕೆಲ ಹಳ್ಳಿಗಳಿಗೆ ಕಾಡಾನೆಗಳು (wild elephants) ನುಗ್ಗಿ ಜನರನ್ನು ಭೀತಿಗೊಳಪಡಿಸಿದ ಬಗ್ಗೆ ನಾವು ಒಂದು ವಾರದವರೆಗೆ ಹೆಚ್ಚುಕಡಿಮೆ ಪ್ರತಿದಿನ ವರದಿ ಮಾಡಿದೆವು. ಅಲ್ಲಿಂದೀಚೆಗೆ ಆನೆಗಳು ಊರಿನತ್ತ ಮುಖಮಾಡಿರಲಿಲ್ಲ. ಅದರೆ ಸೋಮವಾರ ಬೆಳ್ಳಂಬೆಳಗ್ಗೆ (Monday early morning) ಕೆಲ ಆನೆಗಳಿಗೆ ಮತ್ತೇ ಊರುಗಳತ್ತ ಹೋಗುವ ಮನಸ್ಸಾದಂತಿದೆ ಮಾರಾಯ್ರೇ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ತಾಲ್ಲೂಕಿನ ಈಚಲವಳ್ಳಿ ಮತ್ತು ಹಲಸುಲಿಗೆ ಗ್ರಾಮಗಳಿಗೆ ಆನೆಗಳು ನುಗ್ಗಿವೆ. ನಿಮಗೆ ಕಾಣುತ್ತಿರುವ ವಿಡಿಯೋ ಹಲಸುಲಿಗೆ ಗ್ರಾಮದಲ್ಲಿ ಒಬ್ಬ ನಿವಾಸಿ ತಮ್ಮ ಮೊಬೈಲ್ನಲ್ಲಿ ಶೂಟ್ ಮಾಡಿದ್ದು. ಅರಣ್ಯ ಪ್ರದೇಶದಿಂದ ಹೆಣ್ಣಾನೆಯೊಂದು ಕಾಲುದಾರಿ ಮೂಲಕ ರಾಜಾರೋಷವಾಗಿ ನಡೆಯುತ್ತಾ ಊರು ಪ್ರವೇಶಿಸುವುದು ನಿಮಗೆ ಕಾಣುತ್ತದೆ.
ಇದೇ ಗ್ರಾಮದ ಕಿರಣ್ ಕುಶಾಲಪ್ಪ ಎನ್ನುವವರ ಮನೆ ಹತ್ತಿರ ಹೋಗಿ ಅದು ಒಂದು ಇನ್ಸ್ಪೆಕ್ಷನ್ ನಡೆಸುತ್ತದೆ. ಅಲ್ಲಿದ್ದವರೆಲ್ಲ ಆನೆ ಕಂಡೊಡನೆ ಹೆದರಿ ಮನೆಯೊಳಗೆ ಓಡಿ ಬಾಗಿಲು ಮುಚ್ಚಿಕೊಂಡಿದ್ದಾರೆ. ಒಂದೆರಡು ನಿಮಷಗಳ ಕಾಲ ವೀಕ್ಷಣೆ ನಡೆಸಿ ಅದು ಅಲ್ಲಿಂದ ಹಿಂದಕ್ಕೆ ತಿರುಗುತ್ತದೆ. ಅಷ್ಟರಲ್ಲಿ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಫೋನ್ ಮಾಡಿ ವಿಷಯ ತಿಳಿಸುತ್ತಾರೆ.
ಅರಣ್ಯ ಸಿಬ್ಬಂದಿ ಅಲ್ಲಿಗೆ ಬರುವಷ್ಟರಲ್ಲಿ ಆನೆ ಕಾಡಿನ ದಾರಿ ಹಿಡಿದಿರುತ್ತದೆ. ಆದರೆ ಗ್ರಾಮಸ್ಥರು ಅರಣ್ಯ ಇಲಾಖೆ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಡಾನೆಗಳು ನೀಡುತ್ತಿರುವ ಉಪಟಳದ ಬಗ್ಗೆ ಅವರಿಗೆ ಹಲವಾರು ಬಾರಿ ಮನವಿ ಮಾಡಿದರೂ ಒಂದು ಶಾಶ್ವತ ಪರಿಹಾರ ಕಂಡು ಹಿಡಿಯುವುದು ಅವರಿಗೆ ಸಾಧ್ಯವಾಗುತ್ತಿಲ್ಲ ಅಂತ ಅವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.