ಹಾವೇರಿ: ಲಿಂಗದಹಳ್ಳಿ ಹಿರೇಮಠದಿಂದ ದಕ್ಷಿಣ ಭಾರತದಲ್ಲೇ ಅತಿದೊಡ್ಡ ಖ್ಯಾತಿಯ ಸ್ಫಟಿಕಲಿಂಗ ಕಳುವು
ದಕ್ಷಿಣಭಾರತದಲ್ಲೇ ಅತಿ ದೊಡ್ಡ ಸ್ಫಟಿಕಲಿಂಗ ಎಂಬ ಖ್ಯಾತಿ ಈ ಲಿಂಗಕ್ಕಿದೆ. ಮಠದ ಶ್ರೀಗಳು ಶ್ರೀವೀರಭದ್ರ ಶಿವಾಚಾರ್ಯ ಅವರು ಮಠದಲ್ಲಿರದ ಸಂದರ್ಭದಲ್ಲಿ ಕಳ್ಳತನ ನಡೆದಿದೆ.
Haveri: ಕಳ್ಳಕಾಕರಿಗೆ ದೇವರು, ದೇವಸ್ಥಾನ, ವಿಗ್ರಹ ಮತ್ತು ಲಿಂಗಗಳ ಮೇಲಿನ ಶ್ರದ್ಧೆ ಇರಲ್ಲ ಅನ್ನೋದು ಶತಮಾನಗಳ ಹಿಂದೆಯೇ ಸಾಬೀತಾಗಿರುವ ಸಂಗತಿ. ಹಾಗಾಗೇ ವಿಗ್ರಹಚೋರರು (Idol thieves) ಕುಬೇರರಾಗಿ ಬೇರೆ ಬೇರೆ ದೇಶಗಳಲ್ಲಿ ಐಷಾರಾಮಿ ಜೀವನ ನಡೆಸಿದರು. ಇದನ್ನು ಹೇಳಲು ಕಾರಣವೇನೆಂದರೆ, ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಲಿಂಗದಹಳ್ಳಿಯ (Lingadahalli) ಹಿರೇಮಠದಲ್ಲಿದ್ದ 13 ಇಂಚು ಉದ್ದ, 13 ಇಂಚು ಸುತ್ತಳತೆ ಹೊಂದಿದ್ದ ಸ್ಫಟಿಕ ಲಿಂಗ (Sphatika Linga) ಕಳುವಾಗಿದೆ. ದಕ್ಷಿಣಭಾರತದಲ್ಲೇ ಅತಿ ದೊಡ್ಡ ಸ್ಫಟಿಕಲಿಂಗ ಎಂಬ ಖ್ಯಾತಿ ಈ ಲಿಂಗಕ್ಕಿದೆ. ಮಠದ ಶ್ರೀಗಳು ಶ್ರೀವೀರಭದ್ರ ಶಿವಾಚಾರ್ಯ ಅವರು ಮಠದಲ್ಲಿರದ ಸಂದರ್ಭದಲ್ಲಿ ಕಳ್ಳತನ ನಡೆದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos