ನಾನು ನೂಪುರ್ ಶರ್ಮಾ ಬೆಂಬಲಿಗ ಅಭಿಯಾನ ಶುರು ಮಾಡುತ್ತೇವೆ, ಅದೇನಾಗುತ್ತೋ ನೋಡೋಣ: ಪ್ರಮೋದ್ ಮುತಾಲಿಕ್ ಸವಾಲು

ನಾನೂ ಸೇರಿದಂತೆ ಲಕ್ಷಾಂತರ ಜನರು ನೂಪುರ್ ಶರ್ಮಾರನ್ನು ಬೆಂಬಲಿಸುತ್ತೇವೆ. ತಾಕತ್ತಿದ್ರೆ ಬನ್ನಿ ನೋಡೋಣ ಎಂದು ಸವಾಲು ಹಾಕಿದರು

ನಾನು ನೂಪುರ್ ಶರ್ಮಾ ಬೆಂಬಲಿಗ ಅಭಿಯಾನ ಶುರು ಮಾಡುತ್ತೇವೆ, ಅದೇನಾಗುತ್ತೋ ನೋಡೋಣ: ಪ್ರಮೋದ್ ಮುತಾಲಿಕ್ ಸವಾಲು
ಪ್ರಮೋದ್ ಮುತಾಲಿಕ್
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jun 29, 2022 | 3:01 PM

ಧಾರವಾಡ: ರಾಜಸ್ಥಾನದ ಉದಯಪುರದಲ್ಲಿ ಬಿಜೆಪಿಯ ಉಚ್ಚಾಟಿತ ವಕ್ತಾರೆ ನೂಪುರ್ ಶರ್ಮಾ ನೀಡಿದ್ದ ಹೇಳಿಕೆ ಬೆಂಬಲಿಸಿ ಪೋಸ್ಟ್ ಹಾಕಿದ್ದಕ್ಕೆ ಕನ್ಹಯ್ಯ ಲಾಲ್ ಎನ್ನುವವರನ್ನು ಹತ್ಯೆ ಮಾಡಿರುವ ಘಟನೆಯನ್ನು ಹಿಂದುತ್ವವಾದಿ ಸಂಘಟನೆ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಟುವಾಗಿ ಖಂಡಿಸಿದರು. ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹತ್ಯೆಯನ್ನು ಖಂಡಿಸದ ಬುದ್ಧಿಜೀವಿಗಳ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ‘ಸಣ್ಣಪುಟ್ಟದಕ್ಕೆಲ್ಲ ಧ್ವನಿ ಎತ್ತುತ್ತಿದ್ದ ಬುದ್ಧಿಜೀವಿಗಳು ಈಗ ಎಲ್ಲಿಗೆ ಹೋಗಿದ್ದಾರೆ’ ಎಂದು ಪ್ರಶ್ನಿಸಿದರು.

ನಾನೂ ಸೇರಿದಂತೆ ಲಕ್ಷಾಂತರ ಜನರು ನೂಪುರ್ ಶರ್ಮಾರನ್ನು ಬೆಂಬಲಿಸುತ್ತೇವೆ. ತಾಕತ್ತಿದ್ರೆ ಬನ್ನಿ ನೋಡೋಣ ಎಂದು ಸವಾಲು ಹಾಕಿದರು. ಅಂಥ ಕೃತ್ಯಗಳನ್ನು ಇಲ್ಲಿ ನಡೆಸಲು ಆಗುವುದಿಲ್ಲ. ಕನ್ಹಯ್ಯಾ ಲಾಲ್ ಹತ್ಯೆ ಕೇವಲ ಯಾರೋ ಇಬ್ಬರು ನಡೆಸಿದ ಕೃತ್ಯವಲ್ಲ. ಈ ದುಷ್ಕೃತ್ಯದ ಹಿಂದೆ ಇಸ್ಲಾಮಿಕ್​ ಶಕ್ತಿ ಇದೆ ಎಂದು ವಾಗ್ದಾಳಿ ನಡೆಸಿದರು.

ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ದೇಶಾದ್ಯಂತ ಹಿಂದುತ್ವವಾದಿ ಸಂಘಟನೆಗಳು ಅಭಿಯಾನ ನಡೆಸಲಿವೆ. ‘ನಾನು ಕನ್ಹಯ್ಯ ಲಾಲ್, ನಾನು ನೂಪುರ್ ಶರ್ಮಾ ಬೆಂಬಲಿಗ’ ಅಭಿಯಾನ ನಡೆಸುತ್ತೇವೆ. ಲಕ್ಷಾಂತರ ಜನ ನೂಪುರ್ ಶರ್ಮಾ ಬೆಂಬಲಿಸುತ್ತೇವೆ. ನಮ್ಮ ಶಕ್ತಿ ಪ್ರದರ್ಶನ ಮಾಡುತ್ತೇವೆ. ಸಾವಿರಾರು ವರ್ಷಗಳಿಂದ ನಿಮ್ಮನ್ನು ಎದುರಿಸಿ ಮಣ್ಣು ಮುಕ್ಕಿಸಿದ್ದೇವೆ. ಇದಕ್ಕೂ ಕೂಡ ಉತ್ತರ ಕೊಡುತ್ತೇವೆ ಎಂದು ಸವಾಲು ಹಾಕಿದರು.

ದೇವಸ್ಥಾನದಲ್ಲಿ ಅನ್ಯಧರ್ಮಿಯರ ವ್ಯಾಪಾರ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಬಹು ಹಿಂದಿನಿಂದಲೂ ಸರ್ಕಾರ ಮಾಡಿದ್ದ ನಿಯಮ ಜಾರಿಯಲ್ಲಿತ್ತು. ಆ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪ್ರತಿಭಟಿಸಿದ್ದರು. ಕಲ್ಲಂಗಡಿ ಒಡೆದಾಗ ರಕ್ತಪಾತವಾದಂತೆ ರಾದ್ಧಾಂತ ಮಾಡಿದ್ದರು. ಶಾಸಕ ಪ್ರಸಾದ ಅಬ್ಬಯ್ಯ ನನ್ನ ಗಡಿಪಾರಿಗೆ ಆಗ್ರಹಿಸಿದ್ದರು. ಈಗ ಕನ್ಹಯ್ಯ ಲಾಲ್ ಹತ್ಯೆ ಆಗಿದೆ. ಅಬ್ಬಯ್ಯ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.

ರಾಜಸ್ಥಾನದಲ್ಲಿ ಅಬ್ಬಯ್ಯನವರ ಕಾಂಗ್ರೆಸ್ ಸರ್ಕಾರವೇ ಇದೆ. ಈಗ ಅಬ್ಬಯ್ಯ ಬಾಯಿ ಬಿಡಬೇಕು. ಬುದ್ಧಿಜೀವಿಗಳು ಮುಸ್ಲಿಂ, ಕ್ರಿಶ್ಚಿಯನ್ನರ ಏಜೆಂಟುಗಳಂತೆ ದುಡ್ಡು ತೆಗೆದುಕೊಂಡು ಮಾತನಾಡುತ್ತಾರೆ. ಈಗ ರುಂಡ ಕತ್ತರಿಸಿದ್ದಾರೆ. ಈಗ ಸಿದ್ದರಾಮಯ್ಯ ಸಹ ಮಾತನಾಡಬೇಕು. ಆ ಮನೆ ಬಹಿಷ್ಕಾರ ಹಾಕಲು ಮುಸ್ಲಿಂ ಸಮಾಜಕ್ಕೆ ಹೇಳಬೇಕು. ಅವರ ಮನೆಗಳ ವಿರುದ್ಧ ಫತ್ವಾ ಹೊರಡಿಸಲು ಹೇಳಬೇಕು. ಹಿಂದೆ ಟಾಡಾದಂಥ ಶಕ್ತಿಶಾಲಿ ಕಾಯ್ದೆಗಳಿದ್ದವು. ಕಾಂಗ್ರೆಸ್ ಅದನ್ನು ರದ್ದು ಮಾಡಿತ್ತು. ಈಗ ಮತ್ತೆ ಅಂತಹ ಕಠಿಣ ಕಾನೂನು ತರಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada