AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವರಾಜ್​ಕುಮಾರ್ ಬರ್ತ್​ಡೇ ಸ್ಪೆಷಲ್​; ಜೀ ಪಿಚ್ಚರ್​ನಲ್ಲಿ ನಿರಂತರವಾಗಿ 60 ಗಂಟೆ ಪ್ರಸಾರ ಕಾಣಲಿದೆ ಶಿವಣ್ಣನ ಸಿನಿಮಾ

ಶಿವರಾಜ್‌ಕುಮಾರ್‌ 60ನೇ ವರ್ಷದ ಬರ್ತ್​ಡೇ ಹಿನ್ನೆಲೆಯಲ್ಲಿ 60 ಗಂಟೆಗಳ ಕಾಲ ನಾನ್‌ ಸ್ಟಾಪ್‌ ಶಿವಣ್ಣನ ಸಿನಿಮಾಗಳು ಪ್ರಸಾರ ಆಗಲಿದೆ. 3 ದಿನಗಳ ಕಾಲ ಶಿವರಾಜ್‌ಕುಮಾರ್‌ ಅಭಿನಯದ 20 ಸಿನಿಮಾಗಳು ಜೀ ಪಿಚ್ಚರ್‌ನಲ್ಲಿ ಪ್ರಸಾರವಾಗಲಿದೆ.

ಶಿವರಾಜ್​ಕುಮಾರ್ ಬರ್ತ್​ಡೇ ಸ್ಪೆಷಲ್​; ಜೀ ಪಿಚ್ಚರ್​ನಲ್ಲಿ ನಿರಂತರವಾಗಿ 60 ಗಂಟೆ ಪ್ರಸಾರ ಕಾಣಲಿದೆ ಶಿವಣ್ಣನ ಸಿನಿಮಾ
ಶಿವಣ್ಣ
TV9 Web
| Edited By: |

Updated on:Jul 08, 2022 | 8:39 PM

Share

ಶಿವರಾಜ್​ಕುಮಾರ್ (Shivarajkumar) ಅವರು ಜುಲೈ 12ರಂದು 60ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. ಅವರು ಈ ವಯಸ್ಸಿನಲ್ಲೂ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ಮಾಡುತ್ತಿದ್ದಾರೆ. ಕಿರುತೆರೆಯಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಈ ಬಾರಿ 60ನೇ ವರ್ಷದ ಬರ್ತ್​ಡೇಯನ್ನು ವಿಶೇಷವಾಗಿ ಆಚರಿಸಲು ಫ್ಯಾನ್ಸ್​ ಸಿದ್ಧತೆ ಮಾಡಿಕೊಂಡಿದ್ದಾರೆ. ಅದೇ ರೀತಿ ಅನೇಕ ವಾಹಿನಿಗಳು ಶಿವರಾಜ್​ಕುಮಾರ್ ಸಿನಿಮಾವನ್ನು ಪ್ರಸಾರ ಮಾಡಲು ರೆಡಿ ಆಗಿವೆ. ವಿಶೇಷ ಎಂದರೆ ಜೀ ಪಿಚ್ಚರ್ (Zee Picchar) ಸತತ 60 ಗಂಟೆಗಳ ಕಾಲ ಶಿವಣ್ಣನ ಸಿನಿಮಾ ಪ್ರಸಾರ ಮಾಡಲಿದೆ.

ಜೀ ಪಿಚ್ಚರ್ ಆರಂಭವಾಗಿ 2 ವರ್ಷ ಆಗಿದೆ. ಹಲವು ಕಾನ್ಸೆಪ್ಟ್​ಗಳ ಮೂಲಕ ಮನರಂಜನೆ ನೀಡುವ ಕೆಲಸ ಈ ವಾಹಿನಿಯಿಂದ ಆಗುತ್ತಿದೆ. ಈಗ ಶಿವರಾಜ್‌ಕುಮಾರ್‌ 60ನೇ ವರ್ಷದ ಬರ್ತ್​ಡೇ ಹಿನ್ನೆಲೆಯಲ್ಲಿ 60 ಗಂಟೆಗಳ ಕಾಲ ನಾನ್‌ ಸ್ಟಾಪ್‌ ಶಿವಣ್ಣನ ಸಿನಿಮಾಗಳು ಪ್ರಸಾರ ಆಗಲಿದೆ. 3 ದಿನಗಳ ಕಾಲ ಶಿವರಾಜ್‌ಕುಮಾರ್‌ ಅಭಿನಯದ 20 ಸಿನಿಮಾಗಳು ಜೀ ಪಿಚ್ಚರ್‌ನಲ್ಲಿ ಪ್ರಸಾರವಾಗಲಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಜು.10ರಿಂದಲೇ (ಭಾನುವಾರ) ಸಿನಿಮಾ ಪ್ರಸಾರ ಆರಂಭ ಆಗಲಿದೆ. ಜು 10ಕ್ಕೆ ಬೆಳಗ್ಗೆ 9ಕ್ಕೆ ʻಭಾಗ್ಯದ ಬಳೆಗಾರʼ ಸಿನಿಮಾದಿಂದ ಆರಂಭವಾಗಿ ಶಿವಣ್ಣನ ಹುಟ್ಟುಹಬ್ಬದ ದಿನ ಅಂದರೆ ಮಂಗಳವಾರ (ಜು.12) ರಾತ್ರಿ ʻಭಜರಂಗಿ-2ʼ ಸಿನಿಮಾ ಮೂಲಕ ಈ ಮ್ಯಾರಾಥಾನ್ ಪೂರ್ಣಗೊಳ್ಳಲಿದೆ.

ಇದನ್ನೂ ಓದಿ
Image
‘ಪಾಸ್​ಪೋರ್ಟ್​ನಲ್ಲಿ ನನ್ನ ಹೆಸರು ಹೀಗಿಲ್ಲ’; ಅಸಲಿ ಹೆಸರು ರಿವೀಲ್ ಮಾಡಿದ ಶಿವರಾಜ್​ಕುಮಾರ್
Image
Bairagee Movie Review: ಮಚ್ಚು ಲಾಂಗು ಇಲ್ಲದೆ ಕೈಯಲ್ಲೇ ದುಷ್ಟರನ್ನು ನಾಶ ಮಾಡುವ ಎನರ್ಜಿಟಿಕ್ ‘ಬೈರಾಗಿ’
Image
ಶಿವರಾಜ್​​ಕುಮಾರ್ ಅವರನ್ನು ಬಾಯ್ತುಂಬ ಹೊಗಳಿದ ಅನುಶ್ರೀ; ಶಿವಣ್ಣನ ರಿಯಾಕ್ಷನ್ ಹೇಗಿತ್ತು ನೋಡಿ
Image
‘ನಾವು ಬೇರೆ ಭಾಷೆಯಲ್ಲಿ ಮಾತಾಡ್ತೀವಿ, ಅದು ಯಾವುದು ಅಂತ ಈಗ ಬೇಡ’: ವೇದಿಕೆಯಲ್ಲಿ ಶಿವಣ್ಣ ಮನದ ಮಾತು

ಇದನ್ನೂ ಓದಿ: ‘ಪಾಸ್​ಪೋರ್ಟ್​ನಲ್ಲಿ ನನ್ನ ಹೆಸರು ಹೀಗಿಲ್ಲ’; ಅಸಲಿ ಹೆಸರು ರಿವೀಲ್ ಮಾಡಿದ ಶಿವರಾಜ್​ಕುಮಾರ್

ಅನೇಕ ಸ್ಟಾರ್ ನಟರ ಬರ್ತ್​​ಡೇ ದಿನ 24 ಗಂಟೆ ಅವರು ನಟಿಸಿದ ಸಿನಿಮಾ ಪ್ರಸಾರ ಮಾಡಿದ ಉದಾಹರಣೆ ಇದೆ. ಹೀಗೆ ನಿರಂತರವಾಗಿ 60 ಗಂಟೆಗಳ ಸಿನಿಮಾ ಪ್ರಸಾರ ಆಗುತ್ತಿರುವುದು ಇದೇ ಮೊದಲು ಎಂದು ಜೀ ಪಿಚ್ಚರ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ‘ಜೋಗಿʼ, ʻತವರಿನ ಸಿರಿʼ, ʻಭಜರಂಗಿʼ, ʻಪ್ರೀತ್ಸೆʼ, ʻಕುರುಬನ ರಾಣಿʼ, ʻದಿ ವಿಲನ್‌ʼ, ʻಮಫ್ತಿʼ ಸಿನಿಮಾಗಳನ್ನು ಇದು ಒಳಗೊಂಡಿದೆ . ಶಿವರಾಜ್‌ಕುಮಾರ್‌ ಬರ್ತ್‌ಡೇ ಪ್ರಯುಕ್ತ ಜು.12ರಂದು ರಾತ್ರಿ 9.30ಕ್ಕೆ ಶಿವಣ್ಣ ಅವರ ವೀಕೆಂಡ್‌ ವಿತ್‌ ರಮೇಶ್‌ ಎಪಿಸೋಡ್‌ ಕೂಡ ಪ್ರಸಾರವಾಗಲಿದೆ.

Published On - 8:39 pm, Fri, 8 July 22

ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಶಾಲಾ ಬಸ್​ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು
ಶಾಲಾ ಬಸ್​ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು