Bairagee Movie Review: ಮಚ್ಚು ಲಾಂಗು ಇಲ್ಲದೆ ಕೈಯಲ್ಲೇ ದುಷ್ಟರನ್ನು ನಾಶ ಮಾಡುವ ಎನರ್ಜಿಟಿಕ್ ‘ಬೈರಾಗಿ’

Shivarajkumar: ನಿರ್ದೇಶಕ ವಿಜಯ್ ಮಿಲ್ಟನ್ ಅವರು ತಮಿಳಿನಲ್ಲಿ ನಿರ್ದೇಶಕನಾಗಿ, ಛಾಯಾಗ್ರಾಹಕನಾಗಿ ಹೆಸರು ಮಾಡಿದ್ದಾರೆ. ಅವರು ‘ಬೈರಾಗಿ’ ಚಿತ್ರಕ್ಕಾಗಿ ಶಿವರಾಜ್​ಕುಮಾರ್ ಜತೆ ಕೈ ಜೋಡಿಸಿದಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿತ್ತು. ‘ಟಗರು’ ಬಳಿಕ ಶಿವಣ್ಣ-ಧನಂಜಯ ಮತ್ತೆ ಮುಖಾಮುಖಿ ಆಗಿರುವುದು ವಿಶೇಷ. ಹಾಗಾದರೆ ಹೇಗಿದೆ ‘ಬೈರಾಗಿ’ ಚಿತ್ರ? ಇಲ್ಲಿದೆ ವಿಮರ್ಶೆ.

Bairagee Movie Review: ಮಚ್ಚು ಲಾಂಗು ಇಲ್ಲದೆ ಕೈಯಲ್ಲೇ ದುಷ್ಟರನ್ನು ನಾಶ ಮಾಡುವ ಎನರ್ಜಿಟಿಕ್ ‘ಬೈರಾಗಿ’
ಶಿವಣ್ಣ-ಧನಂಜಯ
Follow us
ರಾಜೇಶ್ ದುಗ್ಗುಮನೆ
|

Updated on:Jul 01, 2022 | 4:33 PM

ಸಿನಿಮಾ: ಬೈರಾಗಿ

ಪಾತ್ರವರ್ಗ: ಶಿವರಾಜ್​ಕುಮಾರ್, ಧನಂಜಯ, ಪೃಥ್ವಿ ಅಂಬಾರ್, ಯಶಾ ಶಿವಕುಮಾರ್ ಮೊದಲಾದವರು

ನಿರ್ದೇಶನ: ವಿಜಯ್ ಮಿಲ್ಟನ್

ಇದನ್ನೂ ಓದಿ
Image
ಶಿವಣ್ಣ ಜತೆ ನಟಿಸುವ ಚಾನ್ಸ್​ ಸಿಕ್ಕರೂ ಮುಹೂರ್ತಕ್ಕೆ ಪ್ರಭುದೇವ ಬರಲಿಲ್ಲ; ಕಾರಣ ತಿಳಿಸಿ ಕ್ಷಮೆ ಕೇಳಿದ ನಟ
Image
ಶಿವರಾಜ್​​ಕುಮಾರ್ ಅವರನ್ನು ಬಾಯ್ತುಂಬ ಹೊಗಳಿದ ಅನುಶ್ರೀ; ಶಿವಣ್ಣನ ರಿಯಾಕ್ಷನ್ ಹೇಗಿತ್ತು ನೋಡಿ
Image
‘ನಾವು ಬೇರೆ ಭಾಷೆಯಲ್ಲಿ ಮಾತಾಡ್ತೀವಿ, ಅದು ಯಾವುದು ಅಂತ ಈಗ ಬೇಡ’: ವೇದಿಕೆಯಲ್ಲಿ ಶಿವಣ್ಣ ಮನದ ಮಾತು
Image
ರಜನಿಕಾಂತ್ ಜತೆ ಶಿವಣ್ಣ ನಟನೆ; ವಿಷಯ ಖಚಿತಪಡಿಸಿ ಹೊಸ ಅಪ್​ಡೇಟ್ ನೀಡಿದ ಶಿವರಾಜ್​ಕುಮಾರ್

ನಿರ್ಮಾಣ: ಕೃಷ್ಣ ಸಾರ್ಥಕ್

ಸಂಗೀತ: ಅನೂಪ್ ಸೀಳಿನ್

ಸ್ಟಾರ್​: 3/5

ತಮಿಳಿನಲ್ಲಿ ಯಶಸ್ಸು ಕಂಡ ‘ಕಡುಗು’ ಚಿತ್ರಕ್ಕೆ ವಿಜಯ್ ಮಿಲ್ಟನ್ ನಿರ್ದೇಶನ ಮಾಡಿದ್ದರು. ಇದೇ ಕಥೆಯನ್ನು ಕನ್ನಡಕ್ಕೆ ತಂದಿರುವ ವಿಜಯ್ ಮೇಕಿಂಗ್​ನಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ​. ‘ಟಗರು’ ಬಳಿಕ ಶಿವರಾಜ್​ಕುಮಾರ್ ಹಾಗೂ ಧನಂಜಯ ಅವರು ಮತ್ತೆ ಮುಖಾಮುಖಿ ಆಗಿದ್ದಾರೆ. ಮಾಸ್ ವಿಚಾರಗಳ ಜತೆ ಸಮಾಜಕ್ಕೆ ಸಂದೇಶ ನೀಡುವ ‘ಬೈರಾಗಿ’ ಚಿತ್ರದ ವಿಮರ್ಶೆ ಇಲ್ಲಿದೆ.

ಹುಲಿ ಶಿವಪ್ಪ (ಶಿವರಾಜ್​ಕುಮಾರ್) ಹುಲಿವೇಶ ಹಾಕಿ ಬದುಕು ನಡೆಸುವ ವ್ಯಕ್ತಿ. ಹುಲಿ ವೇಶವೇ ಆತನಿಗೆ ಹೊಟ್ಟೆಪಾಡು. ಅವನ ಬಾಳನ್ನೇ ಬದಲಿಸುವ ಘಟನೆ ಒಂದು ನಡೆಯುತ್ತದೆ. ಆತ ಜೈಲಿಗೆ ಹೋಗುವ ಸ್ಥಿತಿ ಬರುತ್ತದೆ. ಮತ್ತೊಂದು ಕಡೆಯಲ್ಲಿ ಕರಾವಳಿಯ ಹಳ್ಳಿ. ಅಲ್ಲಿರುವ ಕರ್ಣ (ಧನಂಜಯ) ಊರಿಗೆ ಒಳಿತು ಮಾಡುತ್ತಾ ಜೀವನ ಸಾಗಿಸುತ್ತಿರುತ್ತಾನೆ. ತನ್ನದೇ ಹುಡುಗರು ಹೆಣ್ಣುಮಕ್ಕಳನ್ನು ಚುಡಾಯಿಸಿದರೂ ಆತ ಸಹಿಸಿಕೊಳ್ಳುವುದಿಲ್ಲ. ಹುಲಿ ಶಿವಪ್ಪ ಹಾಗೂ ಕರ್ಣನನ್ನು ವಿಧಿ ಮುಖಾಮುಖಿಯಾಗಿಸುತ್ತದೆ ಅದು ಹೇಗೆ? ಏಕೆ? ಚಿತ್ರದಲ್ಲಿ ಅಸಲಿ ವಿಲನ್ ಯಾರು ಎಂಬುದು ಸಸ್ಪೆನ್ಸ್​.

ಶಿವರಾಜ್​ಕುಮಾರ್ ಅವರ ವಯಸ್ಸು 60 ಸಮೀಪಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಅವರು 60ನೇ ವರ್ಷದ ಬರ್ತ್​ಡೇ ಆಚರಿಸಿಕೊಳ್ಳುತ್ತಾರೆ. ಆದರೆ, ತೆರೆಮೇಲಿನ ಎನರ್ಜಿಯಲ್ಲಿ ಅವರ ವಯಸ್ಸು​ 60 ಅಲ್ಲ, ಸ್ವೀಟ್​ 16. ಎರಡು ಶೇಡ್​ನಲ್ಲಿ ಶಿವರಾಜ್​ಕುಮಾರ ಇಷ್ಟವಾಗುತ್ತಾರೆ. ಹುಲಿ ಶಿವಪ್ಪನ ಪಾತ್ರವನ್ನು ಶಿವಣ್ಣ ಜೀವಿಸಿದ್ದಾರೆ. ಕೆಲ ದೃಶ್ಯಗಳಲ್ಲಿ ಮುಗ್ಧನಾಗಿ ಕಾಣುವ ಶಿವಪ್ಪ ಮರುಕ್ಷಣವೇ ವ್ಯಾಘ್ರನಾಗಿ ಬದಲಾಗುತ್ತಾನೆ. ಆ್ಯಕ್ಷನ್​ ದೃಶ್ಯಗಳಲ್ಲಿ ಚಿರ ಯುವಕನಂತೆ ಫೈಟ್ ಮಾಡಿದ್ದಾರೆ. ಇಡೀ ಸಿನಿಮಾವನ್ನು ಅವರೇ ಆವರಿಸಿಕೊಂಡಿದ್ದಾರೆ. ಇಡೀ ಚಿತ್ರಕ್ಕೆ ಎನರ್ಜಿ ತುಂಬಿದ್ದಾರೆ. ಹಲವು ಸಿನಿಮಾಗಳಲ್ಲಿ ಶಿವರಾಜ್​ಕುಮಾರ್ ಅವರು ಮಚ್ಚು, ಲಾಂಗ್ ಹಿಡಿದುಕೊಂಡು ದುಷ್ಟರ ಸಂಹಾರ ಮಾಡಿದ್ದಾರೆ. ಆದರೆ, ಈ ಚಿತ್ರದಲ್ಲಿ ಅವರಿಗೆ ಕೈಯ್ಯೇ ಆಯುಧ. ಕೈನಿಂದಲೇ ಅವರು ದುಷ್ಟರ ನಾಶ ಮಾಡುತ್ತಾರೆ. ಶಿವರಾಜ್​ಕುಮಾರ್ ಮಾಸ್ ಆ್ಯಕ್ಷನ್​ಗೆ​ ಆಡಿಯನ್ಸ್​ನಿಂದ​ ಶಿಳ್ಳೆ ಬೀಳುತ್ತದೆ.

ಕರ್ಣನಾಗಿ ಧನಂಜಯ ಅವರು ಗಮನ ಸೆಳೆಯುತ್ತಾರೆ. ಅವರ ಪಾತ್ರಕ್ಕೆ ಚಿತ್ರದಲ್ಲಿ ಸಾಕಷ್ಟು ತೂಕವಿದೆ. ಅವರು ಓರ್ವ ನಟನಾಗಿ ಇಷ್ಟವಾಗುತ್ತಾರೆ. ಕರಾವಳಿ ಹುಡುಗನಾಗಿ ಕಾಣಿಸಿಕೊಂಡಿರುವ ಪೃಥ್ವಿ ಅಂಬಾರ್ ಅವರು ನೋಡುಗರಲ್ಲಿ ನಗು ತರಿಸುತ್ತಾರೆ. ಅವರು ನಟನೆಯಲ್ಲಿ ಅಂಕ ಗಿಟ್ಟಿಸಿಕೊಳ್ಳುತ್ತಾರೆ. ಪ್ರೇಮಿಯಾಗಿ ಅವರ ಒದ್ದಾಟ ಇಷ್ಟವಾಗುತ್ತದೆ. ಯಶಾ ಶಿವಕುಮಾರ್, ಅಂಜಲಿ, ಶಶಿಕುಮಾರ್ ನಟನೆ ಇಷ್ಟವಾಗುತ್ತದೆ. ರಾಜಕಾರಣಿ ಪಾತ್ರದಲ್ಲಿ ಶರತ್ ಲೋಹಿತಾಶ್ವ ಪ್ರಬುದ್ಧ ನಟನೆ ತೋರಿದ್ದಾರೆ.

ವಿಜಯ್ ಮಿಲ್ಟನ್ ತಮಿಳಿನವರು. ಇಲ್ಲಿನ ನೇಟಿವಿಟಿಗೆ ತಕ್ಕಂತೆ ಸಿನಿಮಾ ಮಾಡಲು ಪ್ರಯತ್ನಿಸಿದ್ದಾರೆ. ಇಡೀ ಸಿನಿಮಾದ ಕಥೆ ಕರಾವಳಿ ಭಾಗದಲ್ಲಿ ಸಾಗುತ್ತದೆ. ಆದರೆ, ಅಲ್ಲಿ ವಾತಾಪಿ (ಪೃಥ್ವಿ ಅಂಬಾರ್) ಬಿಟ್ಟು ಮತ್ತಾರೂ ಕರಾವಳಿ ಭಾಷೆಯನ್ನು ಆಡುವುದಿಲ್ಲ. ಆ ಬಗ್ಗೆ ನಿರ್ದೇಶಕರು ಕೊಂಚ ಗಮನ ಹರಿಸಬಹುದಿತ್ತು. ಉಳಿದಂತೆ ಅವರು ಹಾಕಿರುವ ಶ್ರಮ ತೆರೆಮೇಲೆ ಎದ್ದು ಕಾಣುತ್ತದೆ. ಅತ್ಯಾಚಾರ ತಡೆಯುವ ನಿಟ್ಟಿನಲ್ಲಿ ಸಮಾಜಕ್ಕೆ ಸಂದೇಶ ನೀಡುವ ಕೆಲಸ ಆಗಿರುವುದು ಇಲ್ಲಿ ಗಮನಾರ್ಹ.

ವಿಜಯ್ ಮಿಲ್ಟನ್ ಮೂಲತಃ ಛಾಯಾಗ್ರಾಹಕ. ಅವರಿಗೆ ಸಿನಿಮಾಟೋಗ್ರಫಿ ಮೇಲೆ ಸಾಕಷ್ಟು ಗ್ರಿಪ್ ಇದೆ. ‘ಬೈರಾಗಿ’ ಸಿನಿಮಾದಲ್ಲಿ ಛಾಯಾಗ್ರಹಣ ಗಮನ ಸೆಳೆಯುತ್ತದೆ. ಒಂದೇ ಟೇಕ್​ನಲ್ಲಿ ಮಾಡಿದ ಸಾಂಗ್ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಚಿತ್ರದ ಹಾಡುಗಳು ಯಾವುದೂ ಅಷ್ಟಾಗಿ ಕಿವಿಯಲ್ಲಿ ಗುನುಗುವುದಿಲ್ಲ. ಹಿನ್ನೆಲೆ ಸಂಗೀತದ ಮೂಲಕ ಅನೂಪ್ ಸೀಳಿನ್ ಗಮನ ಸೆಳೆಯುತ್ತಾರೆ.

ಇದನ್ನೂ ಓದಿ: ಜುಲೈ 1ಕ್ಕೆ ‘ಬೈರಾಗಿ’ ರಿಲೀಸ್​; ದೊಡ್ಡ ಮೊತ್ತಕ್ಕೆ ಸೇಲ್ ಆಯ್ತು ಶಿವಣ್ಣ ಸಿನಿಮಾದ ಟಿವಿ​ ರೈಟ್ಸ್​ 

Bairagee: ಶಿವರಾಜ್​ಕುಮಾರ್-ಧನಂಜಯ ನಟನೆಯ ‘ಬೈರಾಗಿ’ ಚಿತ್ರದ ಮೊದಲಾರ್ಧದ ವಿಮರ್ಶೆ

Published On - 3:02 pm, Fri, 1 July 22

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ