Bairagee: ಶಿವರಾಜ್ಕುಮಾರ್-ಧನಂಜಯ ನಟನೆಯ ‘ಬೈರಾಗಿ’ ಚಿತ್ರದ ಮೊದಲಾರ್ಧದ ವಿಮರ್ಶೆ
Bairagee First Half Review: ‘ಬೈರಾಗಿ’ ಚಿತ್ರದ ಮೊದಲಾರ್ಧ ಹೇಗಿದೆ? ಶಿವರಾಜ್ಕುಮಾರ್ ಅವರು ಯಾವ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂಬಿತ್ಯಾದಿ ವಿಚಾರಗಳಿಗೆ ಇಲ್ಲಿದೆ ಉತ್ತರ.
‘ಟಗರು’ ಚಿತ್ರದಲ್ಲಿ (Tagaru Movie) ಶಿವರಾಜ್ಕುಮಾರ್ ಹಾಗೂ ಡಾಲಿ ಧನಂಜಯ ಕೆಮಿಸ್ಟ್ರಿ ಚೆನ್ನಾಗಿ ಕೆಲಸ ಮಾಡಿತ್ತು. ಈ ಸಿನಿಮಾ ತೆರೆಗೆ ಬಂದ ನಾಲ್ಕು ವರ್ಷಗಳ ಬಳಿಕ ಇವರ ಕಾಂಬಿನೇಷನ್ನಲ್ಲಿ ‘ಬೈರಾಗಿ’ ಸಿನಿಮಾ (Bairageee Movie) ಮೂಡಿ ಬಂದಿದೆ. ಇಂದು (ಜುಲೈ 1) ರಿಲೀಸ್ ಆದ ‘ಬೈರಾಗಿ’ ಚಿತ್ರಕ್ಕೆ ವಿಜಯ್ ಮಿಲ್ಟನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಟೀಸರ್ ಮೂಲಕ ಸಿನಿಮಾ ಗಮನ ಸೆಳೆದಿದೆ. ಶಿವಣ್ಣ ಹಾಗೂ ಧನಂಜಯ (Dhananjay) ನಡುವೆ ಕಾದಾಟ ಇದೆ ಎಂಬುದು ಟೀಸರ್ನಲ್ಲೇ ಗೊತ್ತಾಗಿತ್ತು. ಹಾಗಾದರೆ, ಈ ಚಿತ್ರದ ಮೊದಲಾರ್ಧ ಹೇಗಿದೆ? ಶಿವರಾಜ್ಕುಮಾರ್ ಅವರು ಯಾವ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂಬಿತ್ಯಾದಿ ವಿಚಾರಗಳಿಗೆ ಇಲ್ಲಿದೆ ಉತ್ತರ.
- ಚಿತ್ರದಲ್ಲಿ ಶಿವರಾಜ್ಕುಮಾರ್ ಅವರ ಎಂಟ್ರಿ ದೃಶ್ಯ ಸೂಪರ್ ಆಗಿದೆ. ಸಿನಿಮಾ ಆರಂಭದಲ್ಲೇ ಒಂದು ಸಾಂಗ್ ಮತ್ತು ಫೈಟ್ ಇದೆ.
- ಫಸ್ಟ್ ಹಾಫ್ನಲ್ಲಿಯೇ ಶಿವಣ್ಣ ಎರಡು ಗೆಟಪ್ನಲ್ಲಿ ಕಾಣಿಸಿಕೊಳ್ಳುತ್ತಾರೆ. ಮೊದಲು ವಯ್ಲೆಂಟ್ ಆಗಿರುವ ಅವರು ನಂತರ ಸೈಲೆಂಟ್ ಆಗ್ತಾರೆ. ಯಾಕೆ ಅನ್ನೋದನ್ನು ಮುಂದೆ ನೋಡಬೇಕು.
- ಧನಂಜಯ್ ಅವರು ಹಿಂದೆಂದೂ ಮಾಡದಂತಹ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲಾರ್ಧದಲ್ಲಿ ಅವರ ಪಾತ್ರ ಕೂಡ ಗಮನ ಸೆಳೆಯುತ್ತದೆ.
- ಪೃಥ್ವಿ ಅಂಬಾರ್ ಅವರು ಕರಾವಳಿ ಹುಡುಗನಾಗಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಆ ಪ್ರದೇಶದ ಭಾಷೆ ಮತ್ತು ಪಂಚಿಂಗ್ ಡೈಲಾಗ್ ಮೂಲಕ ಅವರು ರಂಜಿಸುತ್ತಾರೆ.
- ಇಂಟರ್ವೆಲ್ಗಿಂತಲೂ ಮುನ್ನ ಪ್ರೇಕ್ಷಕರಿಗೆ ಸಖತ್ ಥ್ರಿಲ್ ನೀಡುವಂತಹ ದೃಶ್ಯ ಇದೆ. ದ್ವಿತೀಯಾರ್ಧದಲ್ಲಿ ಕಥೆ ಎತ್ತ ಸಾಗಬಹುದು ಎಂಬ ಕೌತುಕ ಮೂಡುತ್ತದೆ.
- ಮೊದಲಾರ್ಧದ ಕಥೆ ಕಾಮಿಡಿ ಟ್ರ್ಯಾಕ್ನಲ್ಲೇ ಸಾಗುತ್ತದೆ. ಅಭಿಮಾನಿಗಳನ್ನು ರಂಜಿಸುವಲ್ಲಿ ಫಸ್ಟ್ ಹಾಫ್ ಯಶಸ್ವಿ ಆಗಿದೆ. ಶಿವಣ್ಣನ ಫ್ಯಾನ್ಸ್ ಎಂಜಾಯ್ ಮಾಡಲು ಬೇಕಾದ ಅಂಶಗಳು ಇವೆ.
ಇದನ್ನೂ ಓದಿ
ಇದನ್ನೂ ಓದಿ: ಜುಲೈ 1ಕ್ಕೆ ‘ಬೈರಾಗಿ’ ರಿಲೀಸ್; ದೊಡ್ಡ ಮೊತ್ತಕ್ಕೆ ಸೇಲ್ ಆಯ್ತು ಶಿವಣ್ಣ ಸಿನಿಮಾದ ಟಿವಿ ರೈಟ್ಸ್
ಶಕ್ತಿಧಾಮದ ಮಕ್ಕಳ ಜತೆ ‘ಬೈರಾಗಿ’ ಹಾಡಿಗೆ ಡ್ಯಾನ್ಸ್ ಮಾಡಿದ ಶಿವರಾಜ್ಕುಮಾರ್