‘ಪಾಸ್​ಪೋರ್ಟ್​ನಲ್ಲಿ ನನ್ನ ಹೆಸರು ಹೀಗಿಲ್ಲ’; ಅಸಲಿ ಹೆಸರು ರಿವೀಲ್ ಮಾಡಿದ ಶಿವರಾಜ್​ಕುಮಾರ್

ಶಿವರಾಜ್​ಕುಮಾರ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿ ವೇದಿಕೆ ಮೇಲೆ ಮಾತನಾಡಿದರು. ಆಗ ತಮ್ಮ ಅಸಲಿ ಹೆಸರು ಏನು ಎಂಬ ವಿಚಾರದ ಬಗ್ಗೆ ಹೇಳಿಕೊಂಡರು.

‘ಪಾಸ್​ಪೋರ್ಟ್​ನಲ್ಲಿ ನನ್ನ ಹೆಸರು ಹೀಗಿಲ್ಲ’; ಅಸಲಿ ಹೆಸರು ರಿವೀಲ್ ಮಾಡಿದ ಶಿವರಾಜ್​ಕುಮಾರ್
ಶಿವರಾಜ್​ಕುಮಾರ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 06, 2022 | 10:08 PM

ನಟ ಶಿವರಾಜ್​ಕುಮಾರ್ (Shivarajkumar)  ಅವರು ಕರ್ನಾಟಕದಲ್ಲಿ ಶಿವಣ್ಣ ಎಂದೇ ಫೇಮಸ್. ಹೋದಲ್ಲಿ ಬಂದಲ್ಲಿ ಅವರನ್ನು ಎಲ್ಲರೂ ಪ್ರೀತಿಯಿಂದ ಶಿವಣ್ಣ ಎಂದೇ ಕರೆಯುತ್ತಾರೆ. ಆದರೆ, ಶಿವರಾಜ್​ಕುಮಾರ್ ಎಂಬುದು ಅವರ ಅಸಲಿ ಹೆಸರಲ್ಲ. ಶಿವರಾಜ್​ಕುಮಾರ್ ಪಾಸ್​ಪೋರ್ಟ್ (Passport)​ ಸೇರಿ ಎಲ್ಲಾ ದಾಖಲೆಗಳಲ್ಲಿ ಅವರ ಅಸಲಿ ಹೆಸರು ಇದೆ. ಈ ಹೆಸರನ್ನು ಅವರು ಇಟ್ಟುಕೊಂಡಿದ್ದು ಏಕೆ? ಅವರ ಮೂಲ ಹೆಸರು ಏನು ಎಂಬ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ.

ಮೈಸೂರಿನ ಆಂದೋಲನ ಪತ್ರಿಕೆ 50 ವರ್ಷ ಪೂರೈಸಿದೆ. ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಈ ಪತ್ರಿಕೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ನೆರವೇರಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಆಗಮಿಸಿದ್ದರು. ಶಿವರಾಜ್​ಕುಮಾರ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿ ವೇದಿಕೆ ಮೇಲೆ ಮಾತನಾಡಿದರು. ಆಗ ತಮ್ಮ ಅಸಲಿ ಹೆಸರು ಏನು ಎಂಬ ವಿಚಾರದ ಬಗ್ಗೆ ಹೇಳಿಕೊಂಡರು.

‘ನನ್ನ ಮೂಲ ಹೆಸರು ನಾಗರಾಜ ಶಿವಪುಟ್ಟ ಸ್ವಾಮಿ. ನನ್ನ ಪಾಸ್​ಪೋರ್ಟ್​ ಮೊದಲಾದ ದಾಖಲೆಗಳಲ್ಲಿ ಹೆಸರು ಹೀಗೆಯೇ ಇದೆ. ನಾನು ಓದಿ ಬೆಳೆದಿದ್ದು ಚೆನ್ನೈನಲ್ಲಿ. ಅಲ್ಲಿರುವ ಗೆಳೆಯರು ಪುಟ್ಟು ಅಂತಲೇ ಕರೆಯುತ್ತಾರೆ. ಇಲ್ಲಿ ಸಿನಿಮಾಗೆ ಎಂಟ್ರಿ ಆಗಬೇಕಾದರೆ ಅಪ್ಪಾಜಿ ಅವರ ಫ್ರೆಂಡ್ ರಾಮಸ್ವಾಮಿ ಅಂತ ಭೇಟಿ ಆದ್ರು. ರಾಜ್​ಕುಮಾರ್ ಫ್ಯಾಮಿಲಿಯವರು ನೀವು, ಹೀಗಾಗಿ ಶಿವರಾಜ್​ಕುಮಾರ್ ಅಂತ ಹೆಸರು ಇಟ್ಕೊಳಿ ಅಂದ್ರು. ಹೀಗಾಗಿ, ನಾನು ಶಿವರಾಜ್​ಕುಮಾರ್ ಆದೆ’ ಎಂದಿದ್ದಾರೆ ಶಿವಣ್ಣ.

ಇದನ್ನೂ ಓದಿ
Image
Bairagee Movie Review: ಮಚ್ಚು ಲಾಂಗು ಇಲ್ಲದೆ ಕೈಯಲ್ಲೇ ದುಷ್ಟರನ್ನು ನಾಶ ಮಾಡುವ ಎನರ್ಜಿಟಿಕ್ ‘ಬೈರಾಗಿ’
Image
ಶಿವಣ್ಣ ಜತೆ ನಟಿಸುವ ಚಾನ್ಸ್​ ಸಿಕ್ಕರೂ ಮುಹೂರ್ತಕ್ಕೆ ಪ್ರಭುದೇವ ಬರಲಿಲ್ಲ; ಕಾರಣ ತಿಳಿಸಿ ಕ್ಷಮೆ ಕೇಳಿದ ನಟ
Image
ಶಿವರಾಜ್​​ಕುಮಾರ್ ಅವರನ್ನು ಬಾಯ್ತುಂಬ ಹೊಗಳಿದ ಅನುಶ್ರೀ; ಶಿವಣ್ಣನ ರಿಯಾಕ್ಷನ್ ಹೇಗಿತ್ತು ನೋಡಿ
Image
‘ನಾವು ಬೇರೆ ಭಾಷೆಯಲ್ಲಿ ಮಾತಾಡ್ತೀವಿ, ಅದು ಯಾವುದು ಅಂತ ಈಗ ಬೇಡ’: ವೇದಿಕೆಯಲ್ಲಿ ಶಿವಣ್ಣ ಮನದ ಮಾತು

ಶಿವರಾಜ್​ಕುಮಾರ್ ನಟನೆಯ ‘ಬೈರಾಗಿ’ ಸಿನಿಮಾ ಕಳೆದವಾರ ತೆರೆಗೆ ಬಂತು. ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ‘ಟಗರು’ ಬಳಿಕ ಧನಂಜಯ ಹಾಗೂ ಶಿವರಾಜ್​ಕುಮಾರ್ ಮತ್ತೆ ಒಂದಾಗಿದ್ದಾರೆ. ತಮಿಳು ನಿರ್ದೇಶಕ ವಿಜಯ್ ಮಿಲ್ಟನ್ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಟಿವಿ ಹಕ್ಕು 10 ಕೋಟಿ ರೂಪಾಯಿಗೆ ಮಾರಾಟ ಆದ ಬಗ್ಗೆ ನಿರ್ಮಾಪಕರು ಸಿನಿಮಾ ರಿಲೀಸ್ ಸಂದರ್ಭದಲ್ಲಿ ಹೇಳಿಕೊಂಡಿದ್ದರು.

ಇದನ್ನೂ ಓದಿ: Bairagee: ಶಿವರಾಜ್​ಕುಮಾರ್-ಧನಂಜಯ ನಟನೆಯ ‘ಬೈರಾಗಿ’ ಚಿತ್ರದ ಮೊದಲಾರ್ಧದ ವಿಮರ್ಶೆ

ಮೈಸೂರಿಗೆ ಆಗಮಿಸಿದ ಶಿವರಾಜ್​ಕುಮಾರ್​ಗೆ ಹೂಮಳೆ ಸ್ವಾಗತ

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್