Gaalipata 2: ಯೋಗರಾಜ್​ ಭಟ್​ ಲೇಖನಿಯಲ್ಲಿ ಮತ್ತೊಂದು ಎಣ್ಣೆ ಸಾಂಗ್​; ‘ಗಾಳಿಪಟ 2’ ಚಿತ್ರದಲ್ಲಿ ಹಿಟ್​ ಕಾಂಬಿನೇಷನ್​

TV9 Digital Desk

| Edited By: ಮದನ್​ ಕುಮಾರ್​

Updated on: Jul 12, 2022 | 1:41 PM

Gaalipata 2 Songs: ‘ಗಾಳಿಪಟ’ ಸಿನಿಮಾ ನೋಡಿ ಮೆಚ್ಚಿಕೊಂಡ ಪ್ರೇಕ್ಷಕರೆಲ್ಲರೂ ಈಗ ‘ಗಾಳಿಪಟ 2’ ಚಿತ್ರಕ್ಕಾಗಿ ಕಾದಿದ್ದಾರೆ. ಹಾಡುಗಳ ಮೂಲಕ ಈ ಚಿತ್ರತಂಡ ಸದ್ದು ಮಾಡುತ್ತಿದೆ.

Gaalipata 2: ಯೋಗರಾಜ್​ ಭಟ್​ ಲೇಖನಿಯಲ್ಲಿ ಮತ್ತೊಂದು ಎಣ್ಣೆ ಸಾಂಗ್​; ‘ಗಾಳಿಪಟ 2’ ಚಿತ್ರದಲ್ಲಿ ಹಿಟ್​ ಕಾಂಬಿನೇಷನ್​
ಪವನ್​ ಕುಮಾರ್​, ಗಣೇಶ್​, ದಿಗಂತ್​

ನಿರ್ದೇಶಕ ಯೋಗರಾಜ್​ ಭಟ್​ ಅವರು ಬರೆದ ಹಾಡುಗಳಲ್ಲಿ ಏನೋ ಒಂದು ಬಗೆಯ ಕಿಕ್​ ಇರುತ್ತದೆ. ಪ್ರೇಮ ಕವಿತೆಯೇ ಆಗಿರಲಿ, ಐಟಂ ಸಾಂಗ್​ ಆಗಿರಲಿ.. ಅವುಗಳಲ್ಲಿ ಯೋಗರಾಜ್​ ಭಟ್​ (Yogaraj Bhat) ಅವರದ್ದೇ ಒಂದು ಶೈಲಿ ಇರುತ್ತದೆ. ಇನ್ನು, ಎಣ್ಣೆ ಸಾಂಗ್​ ಬರೆಯೋದರಲ್ಲಿ ಅವರು ಸಿಕ್ಕಾಪಟ್ಟೆ ಫೇಮಸ್​. ‘ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು..’ ಹಾಗೂ ‘ನಾವ್​ ಮನೇಗ್​ ಹೋಗೋದಿಲ್ಲ..’ ಹಾಡುಗಳ ಮೂಲಕ ಅವರ ಭರ್ಜರಿ ಮನರಂಜನೆ ನೀಡಿದ್ದರು. ಈಗ ಅವರ ಲೇಖನಿಯಿಂದ ಮತ್ತೊಂದು ಎಣ್ಣೆ ಸಾಂಗ್​ ಹೊರಬರುತ್ತಿದೆ. ಹೌದು, ‘ಗಾಳಿಪಟ 2’ (Gaalipata 2) ಸಿನಿಮಾದಲ್ಲಿ ಇಂಥದ್ದೊಂದು ಹಾಡು ಇರಲಿದ್ದು, ಅದು ಜುಲೈ 14ರಂದು ಬಿಡುಗಡೆ ಆಗಲಿದೆ. ಆ ಮೂಲಕ ‘ಗೋಲ್ಡನ್​ ಸ್ಟಾರ್​’ ಗಣೇಶ್​ (Golden Star Ganesh) ಅಭಿಮಾನಿಗಳಿಗೆ ಸ್ಪೆಷಲ್​ ಟ್ರೀಟ್​ ಸಿಗಲಿದೆ.

‘ಗಾಳಿಪಟ 2’ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ರಿಲೀಸ್​ ಆಗಿರುವ ‘ಎಕ್ಸಾಂ ಸಾಂಗ್​’ ಹಾಗೂ ‘ನಾನಾಡದ ಮಾತೆಲ್ಲವ..’ ಹಾಡುಗಳು ಸಖತ್​ ಹಿಟ್​ ಆಗಿವೆ. ಈಗ ಇನ್ನೊಂದು ಹಾಡನ್ನು ಬಿಡುಗಡೆ ಮಾಡಲಾಗುತ್ತಿದೆ. ಆ ಗೀತೆಗೆ ವಿಜಯ್​ ಪ್ರಕಾಶ್​ ಧ್ವನಿ ನೀಡಿದ್ದಾರೆ. ಯೋಗರಾಜ್​ ಭಟ್​ ಸಾಹಿತ್ಯ, ಅರ್ಜುನ್​ ಜನ್ಯ ಸಂಗೀತ, ವಿಜಯ್​ ಪ್ರಕಾಶ್​ ಗಾಯನ ಎಂದರೆ ಅದು ಸಖತ್​ ಕಾಂಬಿನೇಷನ್​. ‘ಗಾಳಿಪಟ 2’ ಚಿತ್ರದ ಎಣ್ಣೆ ಸಾಂಗ್​ನಲ್ಲಿ ಈ ಮೂವರು ಮತ್ತೆ ಒಂದಾಗಿದ್ದಾರೆ.

‘ಗಾಳಿಪಟ 2’ ಚಿತ್ರದಲ್ಲಿ ಗಣೇಶ್, ದಿಗಂತ್, ಪವನ್ ಕುಮಾರ್, ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್ ಮುಂತಾದವರು ನಟಿಸಿದ್ದಾರೆ. ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ. ರಮೇಶ್ ರೆಡ್ಡಿ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡಿದ್ದಾರೆ. ಆನಂದ್​ ಆಡಿಯೋ ಮೂಲಕ ಸಾಂಗ್​ ಬಿಡುಗಡೆ ಆಗಲಿದೆ.

ಇದನ್ನೂ ಓದಿ

‘ಗಾಳಿಪಟ’ ಸಿನಿಮಾ ನೋಡಿ ಮೆಚ್ಚಿಕೊಂಡ ಪ್ರೇಕ್ಷಕರೆಲ್ಲರೂ ಈಗ ‘ಗಾಳಿಪಟ 2’ ಚಿತ್ರಕ್ಕಾಗಿ ಕಾದಿದ್ದಾರೆ. ಆಗಸ್ಟ್​ 12ರಂದು ಈ ಸಿನಿಮಾ ರಿಲೀಸ್​ ಆಗಲಿದೆ. ಗಣೇಶ್​ ಮತ್ತು ಯೋಗರಾಜ್​ ಭಟ್​ ಕಾಂಬಿನೇಷನ್​ ಇಷ್ಟಪಡುವ ಎಲ್ಲರೂ ಈ ಚಿತ್ರದ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಬಾರಿ ಯೋಗರಾಜ್​ ಭಟ್​ ಅವರು ಯಾವ ಕಥೆಯನ್ನು ತೆರೆಗೆ ತಂದಿದ್ದಾರೆ ಎಂದು ನೋಡಲು ಅಭಿಮಾನಿಗಳಲ್ಲಿ ಕಾತರ ಮೂಡಿದೆ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada