ಶಿವಣ್ಣನ ಸಿನಿಮಾ ನೋಡಲು ಹೋಗಿ ಲಾಠಿ ಏಟು ತಿಂದಿದ್ದ ನಿರ್ದೇಶಕ ಯೋಗರಾಜ್ ಭಟ್
ಯೋಗರಾಜ್ ಭಟ್ ಕೂಡ ಶಿವರಾಜ್ಕುಮಾರ್ ಅವರ ಅಭಿಮಾನಿ. ತಮ್ಮ ನೆಚ್ಚಿನ ನಟನ ಜೊತೆ ಸಿನಿಮಾ ಮಾಡಲು ಕಾಲ ಕೂಡಿಬಂದಿರುವುಕ್ಕೆ ಅವರು ಖುಷಿ ಆಗಿದ್ದಾರೆ.
‘ಹ್ಯಾಟ್ರಿಕ್ ಹೀರೋ’ ಶಿವರಾಜ್ ಕುಮಾರ್ (Shivarajkumar) ಮತ್ತು ನಿರ್ದೇಶಕ ಯೋಗರಾಜ್ ಭಟ್ ಅವರ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ ಸೆಟ್ಟೇರಿದೆ. ಇಂದು (ಜೂನ್ 23) ಈ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಗಿದೆ. ಈ ವೇಳೆ ಯೋಗರಾಜ್ ಭಟ್ (Yogaraj Bhat) ಅವರು ಒಂದಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಶಿವರಾಜ್ಕುಮಾರ್ ಎಂದರೆ ಅವರಿಗೆ ಎಲ್ಲಿಲ್ಲದ ಅಭಿಮಾನ. ‘ರಥಸಪ್ತಮಿ’ ಸಿನಿಮಾ ಬಿಡುಗಡೆ ಆದಾಗ ಅದನ್ನು ನೋಡಲು ಚಿತ್ರಮಂದಿರಕ್ಕೆ ಹೋಗಿ ಲಾಠಿ ಏಟು ತಿಂದ ಘಟನೆಯನ್ನು ಕೂಡ ಅವರು ನೆನಪಿಸಿಕೊಂಡಿದ್ದಾರೆ. ಈಗ ಶಿವಣ್ಣನ ಜೊತೆ ಸಿನಿಮಾ ಮಾಡುತ್ತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಚಿತ್ರದ ಕಥೆ ಹುಟ್ಟಿದ್ದು ಹೇಗೆ? ಶಿವಣ್ಣ ಅವರನ್ನು ಒಪ್ಪಿಸಿದ್ದು ಹೇಗೆ ಎಂಬುದನ್ನೆಲ್ಲ ಯೋಗರಾಜ್ ಭಟ್ ಅವರು ವಿವರಿಸಿದ್ದಾರೆ. ಈ ಸಿನಿಮಾದಲ್ಲಿ ಪ್ರಭುದೇವ (Prabhu Deva) ಕೂಡ ನಟಿಸಲಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.