ರೇವಾ ಮತ್ತು ಶ್ರೀ ಕೃಷ್ಣದೇವರಾಯ ಖಾಸಗಿ ಯೂನಿವರ್ಸಿಟಿಗಳ ಮೇಲೆ ಬೆಳ್ಳಂಬೆಳ್ಳಗ್ಗೆಯೇ ಐಟಿ ಅಧಿಕಾರಿಗಳ ದಾಳಿ!

ರೇವಾ ಮತ್ತು ಶ್ರೀ ಕೃಷ್ಣದೇವರಾಯ ಖಾಸಗಿ ಯೂನಿವರ್ಸಿಟಿಗಳ ಮೇಲೆ ಬೆಳ್ಳಂಬೆಳ್ಳಗ್ಗೆಯೇ ಐಟಿ ಅಧಿಕಾರಿಗಳ ದಾಳಿ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 23, 2022 | 11:49 AM

ಸುಮಾರು 70 ಐಟಿ ಅಧಿಕಾರಿಗಳು ಈ ಯೂನಿವರ್ಸಿಟಿಗಳ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿರುವ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಸಾಯಂಕಾಲದವರೆಗೆ ದಾಳಿಯ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಬಹುದು.

ಬೆಂಗಳೂರು ನಗರದ ಹೊರವಲಯದಲ್ಲಿರುವ ರೇವಾ (Reva) ಮತ್ತು ಶ್ರೀ ಕೃಷ್ಣದೇವರಾಯ (Sri Krishnadevaraya) ಖಾಸಗಿ ವಿಶ್ವವಿದ್ಯಾಲಯಗಳಿಗೆ (private universities) ಗುರುವಾರ ಬೆಳ್ಳಂಬೆಳಗ್ಗೆಯೇ ಶಾಕ್ ಕಾದಿತ್ತು. ಕರ್ನಾಟಕ ಮತ್ತು ಗೋವಾ ವಲಯದ ಅದಾಯ ತೆರಿಗೆ ಅಧಿಕಾರಿಗಳು ಎರಡೂ ಯೂನಿವರ್ಸಿಟಿಗಳ ಆಡಳಿತ ಕಚೇರಿ ಮತ್ತು ಕ್ಯಾಂಪಸ್ ಮೇಲೆ ದಾಳಿ ನಡೆಸಿದವು. ಸುಮಾರು 70 ಐಟಿ ಅಧಿಕಾರಿಗಳು ಈ ಯೂನಿವರ್ಸಿಟಿಗಳ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿರುವ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಸಾಯಂಕಾಲದವರೆಗೆ ದಾಳಿಯ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಬಹುದು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.