Tumakuru: ಇದನ್ನು ಜೆಡಿ(ಎಸ್) ಪಕ್ಷದ ಗುಬ್ಬಿ ಶಾಸಕ (Gubbi MLA) ಎಸ್ ಆರ್ ಶ್ರೀನಿವಾಸ (SR Srinivas) ಅವರು ನಿರೀಕ್ಷಿಸಿದ್ದರು ಮತ್ತು ರಾಜ್ಯದ ಜನತೆ ಕೂಡ ನಿರೀಕ್ಷಿಸಿತ್ತು. ಅವರನ್ನು ಪಕ್ಷದಿಂದ ಅಧಿಕೃತವಾಗಿ ಉದ್ಘಾಟಿಸಲಾಗಿದೆ. ತುಮಕೂರಿನಲ್ಲಿ (Tumakuru) ಗುರುವಾರ ಸುದ್ದಿಗಾರರೊಂದಿಗೆ ಮಾತಾಡಿದ ಶ್ರೀನಿವಾಸ ಅವರು ಉಚ್ಚಾಟನೆ ತಮಗೆ ಮುಜುಗರ, ಅವಮಾನ ಉಂಟುಮಾಡಿಲ್ಲ, ಯಾಕೆಂದರೆ ಒಂದು ವರ್ಷದ ಹಿಂದೆ ತಮ್ಮ ಬದಲು ಮತ್ತೊಬ್ಬ ಅಭ್ಯರ್ಥಿಯ ಹೆಸರು ಘೋಷಣೆ ಮಾಡಿದಾಗಲೇ ಪಕ್ಷದಿಂದ ತಾವು ಮಾನಸಿಕವಾಗಿ ದೂರವಾಗಿಬಿಟ್ಟಿದ್ದು ನಿಜ ಎಂದು ಹೇಳಿದರು. ತನ್ನ ಮುಂದಿನ ನಡೆಯ ಬಗ್ಗೆ ಕಾರ್ಯಕರ್ತರೊಂದಿಗೆ ಚರ್ಚಿಸಿ ಡಿಸೆಂಬರ್ ನಲ್ಲಿ ಒಂದು ತೀರ್ಮಾನಕ್ಕೆ ಬರುವುದಾಗಿ ಅವರು ಹೇಳಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.